ಎನ್‍ಜಿಟಿಯಿಂದ ಸರ್ಕಾರಕ್ಕೆ 50, ಬಿಬಿಎಂಪಿಗೆ 25 ಕೋಟಿ ರೂ. ದಂಡ..!

ಈ ಸುದ್ದಿಯನ್ನು ಶೇರ್ ಮಾಡಿ

BBMP--NGT
ಬೆಂಗಳೂರು, ಡಿ.6-ಬೆಳ್ಳಂದೂರು ಕೆರೆ ಮಾಲಿನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಸಿರು ನ್ಯಾಯಪೀಠ ಸರ್ಕಾರಕ್ಕೆ 50 ಕೋಟಿ ರೂ. ಹಾಗೂ ಬಿಬಿಎಂಪಿಗೆ 25 ಕೋಟಿ ರೂ. ದಂಡ ವಿಧಿಸಿದೆ.  ದಂಡದ ಮೊತ್ತವನ್ನು ಮಾಲಿನ್ಯ ನಿಯಂತ್ರಣ ಮಂಡಳಿಗೆ ನೀಡಬೇಕೆಂದು ಸೂಚಿಸಿದೆ. ಬೆಳ್ಳಂದೂರು ಕೆರೆ ಸಂರಕ್ಷಣೆಗೆ 500 ಕೋಟಿ ರೂ. ಮೀಸಲು ನಿಧಿ ಇಡಬೇಕು ಎಂದು ತನ್ನ ತೀರ್ಪಿನಲ್ಲಿ ಹೇಳಿದೆ.

ಈ ಕುರಿತು ವಿಚಾರಣೆ ನಡೆಸಿದ ಎನ್‍ಜಿಇಟಿ ಅಧ್ಯಕ್ಷ, ನ್ಯಾಯಮೂರ್ತಿ ಎನ್.ಗೋಪಾಲ್ ಅವರು ಬೆಳ್ಳಂದೂರು ಕೆರೆ ಒತ್ತುವರಿ ತೆರವುಗೊಳಿಸಬೇಕು. ಕೆರೆ ಒತ್ತುವರಿ ಮತ್ತು ಸಂರಕ್ಷಣೆ ಸಂಬಂಧ ಉನ್ನತ ಸಮಿತಿ ನೀಡಿರುವ ಶಿಫಾರಸನ್ನು ಪಾಲಿಸಬೇಕು ಎಂದು ಸೂಚಿಸಿದ್ದಾರೆ. ಕೆರೆ ಸಂರಕ್ಷಣೆ, ಮಾಲಿನ್ಯ ನಿಯಂತ್ರಣದಲ್ಲಿ ಪಾಲಿಕೆ ಅಧಿಕಾರಿಗಳ ಕಾರ್ಯವೈಖರಿಯನ್ನು ಅವರು ಇದೇ ಸಂದರ್ಭದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಒತ್ತುವರಿ ತೆರವುಗೊಳಿಸದೆ ಇರುವುದಕ್ಕೆ ಕೆರೆ ಕಲುಷಿತಗೊಂಡು ಪರಿಸರ ಮಾಲಿನ್ಯಕ್ಕೆ ಧಕ್ಕೆಯಾಗುತ್ತಿದೆ. ಕರ್ತವ್ಯ ಪಾಲಿಸದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮುಂದಾಗಬೇಕೆಂದು ನ್ಯಾಯಪೀಠ ಹೇಳಿದೆ. ಬೆಳ್ಳಂದೂರು ಕೆರೆಯಲ್ಲಿ ರಾಸಾಯನಿಕ ಮಿಶ್ರಣದಿಂದ ಬೆಂಕಿ ಬಿದ್ದು, ಪರಿಸರಕ್ಕೆ ಹಾನಿಯಾಗುತ್ತಿತ್ತು. ಅಲ್ಲದೆ, ಕೆರೆಯಲ್ಲಿ ನೊರೆ ಉಕ್ಕಿ ರಸ್ತೆಗೆ ಹರಿದು ಸುತ್ತಮುತ್ತಲಿನ ನಿವಾಸಿಗಳಿಗೆ ತೊಂದರೆಯಾಗುತ್ತಿತ್ತು. ಈ ಸಂಬಂಧ ಹಸಿರು ನ್ಯಾಯಪೀಠದಲ್ಲಿ ನಡೆದ ವಿಚಾರಣೆಯಲ್ಲಿ 50 ಕೋಟಿ ರೂ. ದಂಡ ವಿಧಿಸಿದೆ. ಅಲ್ಲದೆ, 25 ಕೋಟಿ ರೂ. ದಂಡವನ್ನು ಬಿಬಿಎಂಪಿ ಕಟ್ಟಬೇಕೆಂದು ಸೂಚಿಸಿದೆ.

Facebook Comments

Sri Raghav

Admin