ರಸ್ತೆಗಳ ಗುಂಡಿಗೆ 5 ವರ್ಷದಲ್ಲಿ 14,926 ಮಂದಿ ಬಲಿ..! ಕೇಂದ್ರಕ್ಕೆ ಸುಪ್ರೀಂ ಛಿಮಾರಿ

ಈ ಸುದ್ದಿಯನ್ನು ಶೇರ್ ಮಾಡಿ

supreme-ocurtನವದೆಹಲಿ, ಡಿ.6 (ಪಿಟಿಐ)- ದೇಶದ ವಿವಿಧೆಡೆ ಐದು ವರ್ಷಗಳಲ್ಲಿ ರಸ್ತೆ ಗುಂಡಿಗಳಿಂದ ಸಂಭವಿಸಿದ ಅಪಘಾತಗಳಲ್ಲಿ 14,926 ಮಂದಿ ಬಲಿಯಾದ ಘಟನೆಗಳ ಬಗ್ಗೆ ಸುಪ್ರೀಂಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಛೀಮಾರಿ ಹಾಕಿದೆ.  2013-2017ರ ಅವಧಿಯಲ್ಲಿ ರಸ್ತೆ ಗುಂಡಿಗಳಿಂದ 14,926 ಜನರ ಮೃತಪಟ್ಟಿದ್ದಾರೆ.

ಇದು ಅತ್ಯಂತ ಕಳವಳಕಾರಿ ಸಂಗತಿ. ಬಹುಶ: ದೇಶದ ಗಡಿಗಳಲ್ಲಿ ಅಥವಾ ಭಯೋತ್ಪಾದಕರಿಂದ ಹತರಾದವರ ಸಂಖ್ಯೆಗಿಂತಲೂ ಇದು ಅತ್ಯಧಿಕವಾಗಿ ಎಂದು ನ್ಯಾಯಮೂರ್ತಿ ಮದನ್ ಲೋಕುರ್ ನೇತೃತ್ವದ ಪೀಠ ತೀವ್ರ ವಿಷಾದ ವ್ಯಕ್ತಪಡಿಸಿದೆ. ರಸ್ತೆ ಗುಂಡಿಗಳಿಂದಲೇ ಇಷ್ಟು ಮಂದಿ ಸಾವಿಗೀಡಾಗುತ್ತಿರುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಾಗೂ ಅಧಿಕಾರಿಗಳು ರಸ್ತೆಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ ಎಂಬುದಕ್ಕೆ ಸ್ಪಷ್ಟ ನಿರ್ದೇಶನವಾಗಿದೆ ಎಂದು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ರಸ್ತೆ ಗುಂಡಿಗಳಿಂದ ಸಾವು-ನೋವು ಹಾಗೂ ರಸ್ತೆ ಸುರಕ್ಷತೆ ಕುರಿತು ನಿವೃತ್ತ ನ್ಯಾಯಮೂರ್ತಿ ಕೆ.ಎಸ್.ರಾಧಾಕೃಷ್ಣನ್ ನೇತೃತ್ವದ ಸುಪ್ರೀಂಕೋರ್ಟ್ ಸಮಿತಿ ಸಲ್ಲಿಸಿರುವ ವರದಿ ಕುರಿತು ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸರ್ವೋಚ್ಚ ನ್ಯಾಯಾಲಯ ತಾಕೀತು ಮಾಡಿದೆ.  ಈ ಪ್ರಕರಣಗಳ ಕುರಿತು ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಜನವರಿಗೆ ಮುಂದೂಡಿದೆ.

Facebook Comments