ಡಿ.26ರಂದು ದೇಶಾದ್ಯಂತ ಬ್ಯಾಂಕ್ ಮುಷ್ಕರ

ಈ ಸುದ್ದಿಯನ್ನು ಶೇರ್ ಮಾಡಿ

bank 01ನವದೆಹಲಿ,ಡಿ.6- ಬ್ಯಾಂಕ್‍ಗಳ ವಿಲೀನ ವಿರೋಧಿಸಿ ಮತ್ತು ವೇತನ ಪರಿಷ್ಕರಣೆಗೆ ಒತ್ತಾಯಿಸಿ ಇದೇ 26ರಂದು ಎಲ್ಲ ಭಾರತೀಯ ಬ್ಯಾಂಕ್‍ಗಳ ನೌಕರರು ಮುಷ್ಕರಕ್ಕೆ ಕರೆ ನೀಡಿದ್ದಾರೆ.  ಡಿಸೆಂಬರ್ 21 ರಂದು ಪ್ರತ್ಯೇಕ ಮುಷ್ಕರ ನಡೆಸುವುದಾಗಿ ಬ್ಯಾಂಕ್ ಅಧಿಕಾರಿಗಳ ಸಂಘಟನೆ ತಿಳಿಸಿದೆ. ಯೋಜನೆಯಂತೆ ಮುಷ್ಕರ ನಡೆದರೆ ಕ್ರಿಸ್ಮಸ್ ರಜೆ ಸಂದರ್ಭದಲ್ಲಿ ಬ್ಯಾಂಕಿಂಗ್ ವಹಿವಾಟಿಗೆ ತೊಂದರೆಯಾಗಲಿದೆ.  ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ ಡಿ. 21ರಂದು ಮುಷ್ಕರ ನಡೆಸುವುದಾಗಿ ಎಚ್ಚರಿಸಿದೆ. ಈ ಮಧ್ಯೆ ಡಿ. 26 ರಂದು ಬ್ಯಾಂಕ್ ಸಂಘಟನೆಗಳ ಒಕ್ಕೂಟವಾದ ಯುಎಫ್ ಬಿ ಕೂಡ ಮುಷ್ಕರ ನಡೆಸಲು ಕರೆ ನೀಡಿದೆ.

Facebook Comments