ದಿನಕ್ಕೊಂದು ಮೊಟ್ಟೆ ತಿಂದರೆ ಏನಾಗುತ್ತೆ…?

ಈ ಸುದ್ದಿಯನ್ನು ಶೇರ್ ಮಾಡಿ

eggಮೊಟ್ಟೆ ನೋಡಲಿಕ್ಕೆ ಚಿಕ್ಕದೇ ಇರಬಹುದು, ಆದರೆ ಇದರಲ್ಲಿ ವಿಟಮಿನ್ನು ಹಾಗೂ ಖನಿಜಗಳ ಸಹಿತ ಪೋಷಕಾಂಶಗಳು ಗರಿಷ್ಠ ಪ್ರಮಾಣದಲ್ಲಿ ತುಂಬಿಕೊಂಡಿವೆ. ನಾಟಿ ಕೋಳಿ ಮೊಟ್ಟೆಯಲ್ಲಾದರೆ ಅಗತ್ಯ ವಿಟಮಿನ್ಸ್ ತುಂಬಿ ತುಳುಕಾಡುತ್ತದೆ. ಒಂದು ಬೇಯಿಸಿದ ಮೊಟ್ಟೆಯಲ್ಲಿ ಪೊಟ್ಯಾಶಿಯಂ, ಕಬ್ಬಿಣ, ಸತು, ವಿಟಮಿನ್ ಇ ಹಾಗೂ ಫೋಲೇಟ್ ಪ್ರಮುಖವಾಗಿವೆ.

ಒಂದು ಅಧ್ಯಯನದ ಪ್ರಕಾರ ಒಂದು ಬೇಯಿಸಿದ ಮೊಟ್ಟೆಯಲ್ಲಿ 6.29 ಗ್ರಾಂ ಪ್ರೋಟೀನ್ ಹಾಗೂ 78 ಕ್ಯಾಲೋರಿಗಳಿವೆ. ನಿತ್ಯವೂ ಒಂದು ಹೆಚ್ಚು ಹೊತ್ತು ಬೇಯಿಸಿದ ಮೊಟ್ಟೆಯನ್ನು ಸೇವಿಸಿದರೆ ಇದು ದೇಹಕ್ಕೆ ಅಗತ್ಯವಿರುವ ಶಕ್ತಿಯನ್ನು ಒದಗಿಸುತ್ತದೆ ಹಾಗೂ ಹೆಚ್ಚು ಹೊತ್ತು ಹೊಟ್ಟೆ ತುಂಬಿರುವ ಭಾವನೆಯನ್ನು ಮೂಡಿಸುವ ಮೂಲಕ ಹಸಿವಾಗದಂತೆ ತಡೆಯುತ್ತದೆ. ಇದೇ ಕಾರಣಕ್ಕೆ ದೇಹದಾರ್ಢ್ಯ ತರಬೇತುದಾರರು ಹಾಗೂ ತೂಕ ಇಳಿಸುವ ವೃತ್ತಿಪರ ತಜ್ಞರು ವ್ಯಾಯಾಮಕ್ಕೂ ಮುನ್ನ ಬೇಯಿಸಿದ ಮೊಟ್ಟೆಯನ್ನು ಸೇವಿಸಲು ಸಲಹೆ ಮಾಡುತ್ತಾರೆ. ಬೆಳಗ್ಗಿನ ಉಪಾಹಾರಕ್ಕೆ ಬೇಯಿಸಿದ ಮೊಟ್ಟೆಯನ್ನು ಸೇವಿಸುವ ಮೂಲಕ ದಿನದ ಚಟುವಟಿಕೆಗಳಿಗೆ ಅಗತ್ಯವಿರುವ ಪೋಷಕಾಂಶಗಳನ್ನು ಪಡೆಯಬಹುದು. ಬೇಯಿಸಿದ ಮೊಟ್ಟೆಯ ಸೇವನೆಯಿಂದ ಇಷ್ಟು ಪ್ರಯೋಜನಗಳು ಮಾತ್ರವೇ ದೊರಕುವುದಿಲ್ಲ, ಬದಲಿಗೆ ಇನ್ನೂ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ

#ಕಣ್ಣುಗಳಿಗೆ ಒಳ್ಳೆಯದು : 
ಬೇಯಿಸಿದ ಮೊಟ್ಟೆಯ ಅತ್ಯುತ್ತಮ ಪ್ರಯೋಜನ ಕಣ್ಣುಗಳಿಗೆ ಲಭಿಸುತ್ತದೆ. ನಿಯಮಿತವಾಗಿ ಬೇಯಿಸಿದ ಮೊಟ್ಟೆಗಳನ್ನು ಸೇವಿಸುತ್ತಾ ಬಂದರೆ ಈ ಮೂಲಕ ಉತ್ತಮ ಪ್ರಮಾಣದ ಲ್ಯೂಟೀನ್ ಮತ್ತು ಜಿಯಾಕ್ಸಾಂಥಿನ್ ಎಂಬ ಕ್ಯಾರೋಟಿನಾಯ್ಡುಗಳನ್ನು ಸೇವಿಸಲು ಸಾಧ್ಯವಾಗುತ್ತದೆ. ಈ ಕ್ಯಾರೋಟಿನಾಯ್ಡುಗಳು ಕಣ್ಣುಗಳ ಜೀವಕೋಶಗಳ ಸವೆತದ ವಿರುದ್ಧ ಕಾರ್ಯನಿರ್ವಹಿಸುವ ಮೂಲಕ ವಯಸ್ಸಾಗುತ್ತಾ ಹೋದಂತೆ ಎದುರಾಗುವ ದೃಷ್ಟಿ ಮಂದವಾಗುವಿಕೆಯ ವಿರುದ್ದ ಉತ್ತಮ ರಕ್ಷಣೆ ಪಡೆಯಬಹುದು.

#ಉಗುರುಗಳಿಗೂ ಒಳ್ಳೆಯದು : 
ಬೇಯಿಸಿದ ಮೊಟ್ಟೆಯಲ್ಲಿ ಹೆಚ್ಚಿನ ಪ್ರಮಾಣದ ಗಂಧಕವಿದೆ (ವಿಶೇಷವಾಗಿ ಮೊಟ್ಟೆಯ ಹಳದಿ ಭಾಗದಲ್ಲಿ). ಇದು ವಿಟಮಿನ್ ಡಿ ಪಡೆಯಲು ಉತ್ತಮ ಮೂಲವಾಗಿದೆ. ಬೇಯಿಸಿದ ಮೊಟ್ಟೆಯಲ್ಲಿರುವ ವಿಟಮಿನ್ ಡಿ ಹಾಗೂ ಇತರ ಖನಿಜಗಳು ಮತ್ತು ಆಂಟಿ ಆಕ್ಸಿಡೆಂಟುಗಳು ಉಗುರುಗಳ ಉತ್ತಮ ಬೆಳವಣಿಗೆ ಹಾಗೂ ಆರೋಗ್ಯಕರವಾಗಿರಲು ನೆರವಾಗುತ್ತವೆ.

#ಮೆದುಳಿನ ಕ್ಷಮತೆ ಹೆಚ್ಚಿಸುತ್ತದೆ : 
ನಿತ್ಯವೂ ಹೆಚ್ಚು ಹೊತ್ತು ಬೇಯಿಸಿದ ಮೊಟ್ಟೆಯೊಂದನ್ನು ಸೇವಿಸಿದರೆ ವಯಸ್ಸಾದ ಬಳಿಕ ಎದುರಾಗುವ ಮರೆಗುಳಿತನದ ವಿರುದ್ದ ಉತ್ತಮ ರಕ್ಷಣೆ ಪಡೆದಂತಾಗುತ್ತದೆ. ಅಲ್ಲದೇ ಇರದಲ್ಲಿರುವ ಕೋಲೈನ್ ಎಂಬ ಪೋಷಕಾಂಶ ಮೆದುಳಿನ ಆರೋಗ್ಯಕರ ಚಟುವಟಿಕೆಗೆ ತುಂಬಾ ಅಗತ್ಯವಾದ ಪೋಷಕಾಂಶವಾಗಿದೆ. ನಿತ್ಯದ ಬೇಯಿಸಿದ ಮೊಟ್ಟೆಯ ಸೇವನೆಯಿಂದ ಮೆದುಳಿನ ಕ್ಷಮತೆ ಹೆಚ್ಚುತ್ತದೆ ಹಾಗೂ ಇದರ ಕೊರತೆಯಿಂದ ಎದುರಾಗುವ ಆಲ್ಝೀಮರ್ಸ್ ಕಾಯಿಲೆಯಿಂದ ರಕ್ಷಣೆ ಪಡೆದಂತಾಗುತ್ತದೆ.

#ತೂಕ ಇಳಿಕೆಗೂ ಉತ್ತಮವಾಗಿದೆ : 
ಹೆಚ್ಚಿನವರಿಗೆ ಬೇಯಿಸಿದ ಮೊಟ್ಟೆಯ ಸೇವನೆಯಿಂದ ತೂಕ ಇಳಿಸುವ ಪ್ರಯತ್ನಗಳಿಗೆ ಹೆಚ್ಚಿನ ಫಲ ಸಿಗುತ್ತದೆ ಎಂದು ಗೊತ್ತಿರಲಾರದು. ಇದರಲ್ಲಿ ಕೇವಲ ಎಂಭತ್ತು ಗ್ರಾಂ ಕ್ಯಾಲೋರಿಗಳಿವೆ ಹಾಗೂ ಪ್ರೋಟೀನುಗಳು ಹೆಚ್ಚಿವೆ. ಇವೆರಡೂ ತೂಕ ಇಳಿಸುವ ಪ್ರಯತ್ನದಲ್ಲಿರುವ ಅಥವಾ ತೂಕ ಏರದಂತೆ ಎಚ್ಚರ ವಹಿಸುತ್ತಿರುವ ವ್ಯಕ್ತಿಗಳಿಗೆ ಪೂರಕವಾಗಿದೆ.

#ಮೂಳೆಗಳ ದೃಢತೆ ಹೆಚ್ಚಿಸುತ್ತದೆ : 
ಬೇಯಿಸಿದ ಮೊಟ್ಟೆಯಲ್ಲಿರುವ ವಿಟಮಿನ್ ಡಿ (ತುಸುವೇ ಬೇಯಿಸಿದ ಅಥವಾ ಹೆಚ್ಚು ಹೊತ್ತು ಬೇಯಿಸಿದ, ಎರಡೂ ಮೊಟ್ಟೆಗಳಲ್ಲಿ ವಿಟಮಿನ್ ಡಿ ಇರುತ್ತದೆ) ಆಹಾರದಲ್ಲಿರುವ ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ನೆರವಾಗುತ್ತದೆ ಹಾಗೂ ರಕ್ತದಲ್ಲಿ ಕ್ಯಾಲ್ಸಿಯಂ ಮಟ್ಟವನ್ನು ನಿಯಂತ್ರಿಸಲು ನೆರವಾಗುತ್ತದೆ. ಹೀಗೆ ಹೀರಲ್ಪಡುವ ಕ್ಯಾಲ್ಸಿಯಂ ಮೂಳೆಗಳನ್ನು ದೃಢಗೊಳಿಸುತ್ತದೆ. ಬೇಯಿಸಿದ ಮೊಟ್ಟೆಯ ಸೇವನೆಯಿಂದ ಪಡೆಯುವ ಪ್ರಯೋಜನಗಳಲ್ಲಿ ಇದು ಪ್ರಮುಖವಾಗಿದೆ.

#ರಕ್ತದ ಗುಣಮಟ್ಟ ಹೆಚ್ಚಿಸುತ್ತದೆ : 
ಒಂದು ಸಂಶೋಧನೆಯ ಪ್ರಕಾರ, ಹೆಚ್ಚು ಹೊತ್ತು ಬೇಯಿಸಿದ ಮೊಟ್ಟೆಯನ್ನು ಸೇವಿಸುವ ಮೂಲಕ ರಕ್ತ ಹೆಪ್ಪುಗಟ್ಟುವುದನ್ನು ತಡೆಯಬಹುದು. ದಿನಕ್ಕೊಂದು ಬೇಯಿಸಿದ ಮೊಟ್ಟೆ ಸೇವಿಸುವ ಮೂಲಕ ರಕ್ತದ ಗುಣಮಟ್ಟವೂ ಆರೋಗ್ಯಕರವಾಗಿರುತ್ತದೆ ಹಾಗೂ ತನ್ಮೂಲಕ ಹೃದಯದ ಆರೋಗ್ಯವನ್ನೂ ವೃದ್ದಿಸುತ್ತದೆ ಹಾಗೂ ಹೃದಯದ ಕಾಯಿಲೆಗಳ ವಿರುದ್ಧ ರಕ್ಷಣೆಯನ್ನು ಒದಗಿಸುತ್ತದೆ.

#ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ
ಒಂದು ಅಧ್ಯಯನದಲ್ಲಿ ಕಂಡುಕೊಂಡಂತೆ ಇದರಲ್ಲಿರುವ ಪರ್ಯಾಪ್ತ ಕೊಬ್ಬುಗಳು ದೇಹದಲ್ಲಿ ಕೊಲೆಸ್ಟ್ರಾಲ್ ಉತ್ಪತ್ತಿಯನ್ನು ಪ್ರಚೋದಿಸುತ್ತದೆ ಹಾಗೂ ಇದು ಆರೋಗ್ಯಕರ ಕೊಲೆಸ್ಟ್ರಾಲ್ ಆಗಿದೆ. ಇತರ ಆಹಾರ ಮೂಲಗಳಿಂದ ಲಭಿಸುವ ಕೊಲೆಸ್ಟ್ರಾಲ್ ಸಿದ್ಧರೂಪದಲ್ಲಿದ್ದು ಅನಾರೋಗ್ಯ ಕರವಾಗಿರುತ್ತದೆ. ಆದ್ದರಿಂದ ಬೇಯಿಸಿದ ಮೊಟ್ಟೆಗಳನ್ನು ಸೇವಿಸುವುದರಿಂದ ಕೊಲೆಸ್ಟ್ರಾಲ್ ಮಟ್ಟ ಏರುವುದಿಲ್ಲ.

#ಮೊಟ್ಟೆಯ ಬಿಳಿ ಭಾಗ ಬೆಸ್ಟೋ, ಹಳದಿಯೋ?
ಒಂದು ಮೊಟ್ಟೆ 200 ಎಂಜಿ ಕೊಲೆಸ್ಟ್ರಾಲ್ ಹಾಗೂ 6 ಗ್ರಾಂ ಫ್ಯಾಟ್ ಹೊಂದಿರುತ್ತದೆ. ಆದರೆ ಹೃದಯ ತಜ್ಞರು ಹೇಳುವಂತೆ ಮನುಷ್ಯ ದಿನಕ್ಕೆ 300 ಎಂಜಿ ಕೊಲೆಸ್ಟರಾಲ್ ತಿನ್ನಬಹುದು. ಮೊಟ್ಟೆಯ ಬಿಳಿ ಭಾಗದಲ್ಲಿ 7 ಗ್ರಾಂ ಪ್ರೋಟಿನ್ ಇರುತ್ತದೆ. ಆದರೆ ಹಳದಿ ಭಾಗದಲ್ಲಿ ಕೊಲೆಸ್ಟ್ರಾಲ್ ಹೆಚ್ಚಿದ್ದು, ಮೆದುಳು ಆರೋಗ್ಯವನ್ನು ಕಾಪಾಡುವ ಕೊಲಿನ್ ಅಂಶ ಹೆಚ್ಚಿದೆ. ಒಟ್ಟಾರೆ ಒಂದು ಮೊಟ್ಟೆ ಸೇವಿಸುವುದರಿಂದ ಪ್ರೋಟಿನ್ ಹಾಗು ವಿಟಮಿನ್ ಸೂಕ್ತ ಪ್ರಮಾಣದಲ್ಲಿ ಸಿಗುತ್ತದೆ.

Facebook Comments