ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಎಸ್‍ಐಟಿ ಅಧಿಕಾರಿಗಳಿಗೆ ಕಂಟಕ..?

ಈ ಸುದ್ದಿಯನ್ನು ಶೇರ್ ಮಾಡಿ

Gauri Lankeshಬೆಂಗಳೂರು,ಡಿ.6- ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಪೊಲೀಸರು ಈಗಾಗಲೇ 18 ಆರೋಪಿಗಳನ್ನು ಬಂಧಿಸಿ ಜೈಲಿಗೆ ಅಟ್ಟುವಲ್ಲಿ ಯಶಸ್ವಿಯಾಗಿ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಹಾಡಿದ್ದಾರೆ. ಆದರೆ ಹಂತಕರು ಜೈಲಿನಲ್ಲಿದ್ದರೂ ಸುಮ್ಮನೆ ಕೂರದೆ ಮಾಸ್ಟರ್ ಪ್ಲಾನ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

ಪ್ರಕರಣ ಬೇಧಿಸಿದ ಎಸ್‍ಐಟಿ ಅಧಿಕಾರಿಗಳಿಗೆ ಕಾದಿದೆಯಾ ಕಂಟಕ?:
ಗೌರಿ ಹಂತಕರನ್ನು ಹಿಡಿಯಲು ರಾಜ್ಯ ಸರ್ಕಾರ ಬಿ.ಕೆ.ಸಿಂಗ್ ಹಾಗೂ ಅನುಚೇತ್ ನೇತೃತ್ವದ ಎಸ್‍ಐಟಿ ತಂಡ ರಚನೆ ಮಾಡಿತ್ತು. ಈಗ ಇವರನ್ನೇ ಮುಗಿಸಲು ಗೌರಿ ಹಂತಕರು ಸಂಚು ಮಾಡಿದ್ದಾರೆ ಎಂದು ಎಸ್‍ಐಟಿಗೆ ಮಹತ್ವದ ಮಾಹಿತಿ ಸಿಕ್ಕಿದೆ. ಈಗಾಗಲೇ ಎಸ್‍ಐಟಿ ಅಧಿಕಾರಿಗಳಿಗೆ ಅನಾಮಧೇಯ ಪತ್ರಗಳು ಕೂಡ ಬಂದಿದ್ದು ಅದರಲ್ಲಿ ತನಿಖಾಧಿಕಾರಿಗಳಿಗೆ ಜೀವ ಬೆದರಿಕೆ ಹಾಕಲಾಗಿದೆ ಯಂತೆ.

# ಆತ್ಮರಕ್ಷಣೆಯ ಮೊರೆಹೋದ ಎಸ್‍ಐಟಿ:
ಇನ್ನು ಎಸ್‍ಐಟಿ ತಂಡದ ಐವರು ತನಿಖಾಧಿಕಾರಿಗಳು ಆತ್ಮರಕ್ಷಣೆಗಾಗಿ ಪೊಲೀಸ್ ಇಲಾಖೆಯ ಮೊರೆ ಹೋಗಿ ಗನ್ ಲೈಸೆನ್ಸ್ ತೆಗೆದುಕೊಂಡಿದ್ದು,ಈಗಾಗಲೇ ಸರ್ವೀಸ್ ಗನ್ ಲೈಸೆನ್ಸ್ ಹೊಂದಿದ್ದಾರೆ. ಆದರೆ ಸರ್ವೀಸ್ ಗನ್ ಲೈಸೆನ್ಸ್ ಕರ್ತವ್ಯದಲ್ಲಿದ್ದಾಗ ಮಾತ್ರ ಪೊಲೀಸರಿಗೆ ಬಳಕೆ ಮಾಡಲು ಅವಕಾಶವಿರುತ್ತದೆ.
ಕುಟುಂಬದ ಜೊತೆ ಇದ್ದಾಗ ತನಿಖಾಧಿಕಾರಿಗಳನ್ನ ಹಂತಕರು ಟಾರ್ಗೇಟ್ ಮಾಡುವ ಸಾಧ್ಯತೆ ಇದೆ. ಈ ವೇಳೆ ತನಿಖಾಧಿಕಾರಿಗಳ ಬಳಿ ಗನ್? ಇರುವುದಿಲ್ಲ. ಹಾಗಾಗಿ ಪೊಲೀಸ್ ಇಲಾಖೆಯಿಂದ ಪ್ರೈವೇಟ್ ಗನ್ ಲೈಸೆನ್ಸ್ ತೆಗೆದುಕೊಂಡಿದ್ದಾರೆ ಎಂದು ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

Facebook Comments