ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಭಾರೀ ಹಣ, ಮದ್ಯ ವಶ

ಈ ಸುದ್ದಿಯನ್ನು ಶೇರ್ ಮಾಡಿ

money and liquorಹೈದರಾಬಾದ್,ಡಿ.6- ತೆಲಾಂಗಣದಲ್ಲಿ ನಾಳೆ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮತದಾನಕ್ಕೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಇರುವಾಗಲೇ ಮತದಾರನ ಓಲೈಸಲು ರಾಜಕೀಯ ನಾಯಕರು ಮದ್ಯ ಹಣದ ಹೊಳೆಯನ್ನೇ ಹರಿಸಿದ್ದಾರೆ. ಬುಧವಾರದವರೆಗಿನ ಚುನಾವಣಾ ಆಯೋಗದ ಲೆಕ್ಕಾಚಾರದ ಪ್ರಕಾರ 86.5 ಕೋಟಿ ರೂ. ನಗದು ಸಿಕ್ಕಿದ್ದು, ಬರೋಬ್ಬರಿ ನಾಲ್ಕು ಲಕ್ಷ ಲೀಟರ್ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ರಾಜ್ಯದ ಕಾನೂನು ಸುವ್ಯವಸ್ಥೆ ಪೊಲೀಸ್ ಮಹಾ ನಿರ್ದೇಶಕ ಜಿತೇಂದ್ರ ಅವರು ನೀಡಿರುವ ಮಾಹಿತಿ ಪ್ರಕಾರ, ಕಳೆದ ಮೂರು ತಿಂಗಳಲ್ಲಿ 11 ಸಾವಿರ ಜಾಮೀನು ರಹಿತ ವಾರೆಂಟ್ ನೀಡಲಾಗಿದೆ. ಸುಮಾರು 8400 ಶಸ್ತ್ರಾಸ್ತ್ರವನ್ನು ಠೇವಣಿ ಇಟ್ಟುಕೊಳ್ಳಲಾಗಿದೆ.

32 ಸಾವಿರ ಮತದಾನ ಕೇಂದ್ರದ ಪೈಕಿ ನಾಲ್ಕು ಸಾವಿರ ಕೇಂದ್ರಗಳನ್ನು ಅತಿ ಸೂಕ್ಷ್ಮ ಎಂದು ಗುರುತಿಸಿ ಹೆಚ್ಚಿನ ನಿಗಾ ವಹಿಸಲಾಗಿದೆ. ನಕ್ಸಲ್ ಪೀಡಿತ ಪ್ರದೇಶದಲ್ಲಿ ಕೂಂಬಿಂಗ್ ಹೆಚ್ಚಿಸಲಾಗಿದೆ. ನಕ್ಸಲ್ ಪೀಡಿತ ಪ್ರದೇಶಗಳ ಬಹುತೇಕ ಅಭ್ಯರ್ಥಿಗಳಿಗೆ ಭದ್ರತೆ ನೀಡಲಾಗಿದೆ.
ನಾಳೆ ಬೆಳಗ್ಗೆ 7ರಿಂದ ಸಂಜೆವರೆಗೆ ಮತದಾನ ನಡೆಯಲಿದ್ದು, ಎಲ್ಲೆಡೆ ಬಿಗಿಭದ್ರತೆ ಕೈಗೊಳ್ಳಲಾಗಿದೆ.

Facebook Comments