ಲಾರಿ ಹಾಗೂ ಗೂಡ್ಸ್ ವಾಹನದ ನಡುವೆ ಮುಖಾಮುಖಿ ಡಿಕ್ಕಿ : ಚಾಲಕ ಸ್ಥಳದಲ್ಲೇ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

accidentಮಂಡ್ಯ, ಡಿ.6- ಲಾರಿ ಹಾಗೂ ಗೂಡ್ಸ್ ವಾಹನದ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಟಾಟಾ ಏಸ್‍ನ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕೆಸ್ತೂರು ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಂಡ್ಯ ತಾಲ್ಲೂಕು ಹೊಸ ಬೂಜನೂರು ಗ್ರಾಮದ ಕೃಷ್ಣ ಎಂಬುವರ ಮಗ ಕಿಶೋರ್ (23) ಮೃತ ದುರ್ದೈವಿ.
ಈತ ನಿನ್ನೆ ಬೆಳಗ್ಗೆ ತನ್ನ ಟಾಟಾ ಏಸ್ ವಾಹನದಲ್ಲಿ ಏಳನೀರು ವ್ಯಾಪಾರಕ್ಕೆ ಹುಲಿಯೂರು ದುರ್ಗಕ್ಕೆ ಹೋಗಿ ಸಂಜೆ 6 ಗಂಟೆ ಸಮಯದಲ್ಲಿ ಹಿಂದಿರುಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

ಮದ್ದೂರು ತಾಲ್ಲೂಕಿನ ದುಂಡನಹಳ್ಳಿ ಉಪ ವಿದ್ಯುತ್ ಕಚೇರಿ ಬಳಿ ತನ್ನ ವಾಹನದಲ್ಲಿ ಕಿಶೋರ್ ಬರುತ್ತಿದ್ದಾಗ ಎಳನೀರು ತುಂಬಿಕೊಂಡು ಕುಣಿಗಲ್ ಮಾರ್ಗವಾಗಿ ಮಹಾರಾಷ್ಟ್ರಕ್ಕೆ ತೆರಳುತ್ತಿದ್ದ ಲಾರಿ ಎದುರಿನಿಂದ ಡಿಕ್ಕಿ ಹೊಡೆದಿದೆ. ವಾಹನದಲ್ಲೇ ಸಿಲುಕಿಕೊಂಡ ಕಿಶೋರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.  ಈ ಸಂಬಂಧ ಕೆಸ್ತೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )