ಈ ವಾರ ತೆರೆಗೆ ಬರುತ್ತಿದೆ ಗೋಲ್ಡನ್ ಸ್ಟಾರ್ ಅಭಿನಯದ ‘ಆರೆಂಜ್’ ಸಿನಿಮಾ

ಈ ಸುದ್ದಿಯನ್ನು ಶೇರ್ ಮಾಡಿ

Orange--01

ಗೋಲ್ಡನ್ ಸ್ಟಾರ್ ಗಣೇಶ್‍ಗೆ  ಲಕ್ಕಿ ಎಂದೇ ಹೇಳಬಹುದು. ಏಕೆಂದರೆ, 2006ರಲ್ಲಿ ಬಂದಂತಹ ಮುಂಗಾರು ಮಳೆ ಚಿತ್ರದಿಂದ ಹಿಡಿದು ಬಹುತೇಕ ಚಿತ್ರಗಳು ವರ್ಷಾಂತ್ಯದಲ್ಲಿ ಬಿಡುಗಡೆಗೊಂಡು ಭರ್ಜರಿ ಯಶಸ್ಸು ಕಂಡಿವೆ. ಆ ನಿಟ್ಟಿನಲ್ಲಿ ಗಣೇಶ್ ಅಭಿನಯದ ಆರೆಂಜ್ ಚಿತ್ರ ಕೂಡ ಇದೇ ವಾರ ರಾಜ್ಯಾದ್ಯಂತ ಸುಮಾರು 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಗೋಲ್ಡನ್ ಸ್ಟಾರ್ ಗಣೇಶ್‍ಗೆ  ಜೋಡಿಯಾಗಿ ರಾಜಕುಮಾರ ಚಿತ್ರದ ಬೆಡಗಿ ಪ್ರಿಯಾ ಆನಂದ್ ಅಭಿನಯಿಸಿದ್ದಾರೆ.

ಈ ಚಿತ್ರದ ಬಿಡುಗಡೆ ಪೂರ್ವ ಪತ್ರಿಕಾಗೋಷ್ಠಿಯನ್ನು ಚಿತ್ರತಂಡ ನಗರದ ಪಂಚತಾರಾ ಹೊಟೇಲ್‍ವೊಂದರಲ್ಲಿ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ನಾಯಕ ನಟ ಗಣೇಶ್, ನಿರ್ದೇಶಕ ಪ್ರಶಾಂತ್‍ರಾಜ್ ಹಾಗೂ ನಾಯಕಿ ಪ್ರಿಯಾ ಆನಂದ್ ಹಾಜರಿದ್ದು, ಚಿತ್ರದ ವಿಶೇಷತೆಗಳ ಬಗ್ಗೆ ಮಾತನಾಡಿದರು. ಮೊದಲು ನಿರ್ದೇಶಕ ಪ್ರಶಾಂತ್‍ರಾಜ್ ಮಾತನಾಡಿ, ಈ ಹಿಂದೆ ಮಾಡಿದ ಜೂಮ್ ಚಿತ್ರದ ಬಿಡುಗಡೆಗೂ ಮುಂಚೆಯೇ ಗಣೇಶ್ ಚಿತ್ರವನ್ನು ನೋಡಿ ಸಿನಿಮಾನ ಚೆನ್ನಾಗಿ ಮಾಡಿದ್ದೀರಿ. ನಿಮ್ಮ ಸಂಸ್ಥೆಯಲ್ಲಿ ಮತ್ತೊಂದು ಸಿನಿಮಾ ಮಾಡಿ ಎಂದು ಕಥೆ ಕೇಳದೇ ಕಾಲ್‍ಷೀಟ್ ಕೊಟ್ಟಿದ್ದರು.  ಹಾಗಾಗಿ ನಾನು ಹೇಳಿದ ಎರಡನೆ ಕತೆಯೇ ಆರೆಂಜ್ ಆಯಿತು. ಗಣೇಶ್ ಅವರು ಎಲ್ಲದರಲ್ಲೂ ತಲೆ ತೂರಿಸದೆ, ಬೇಕಿದ್ದ ವಿಷಯದಲ್ಲಿ ಮಾತ್ರ ಆಳವಾಗಿ ಚರ್ಚೆಗೆ ಕೂರುತ್ತಿದ್ದರು.

ಇನ್ನು ಚಿತ್ರಕ್ಕೆ ಸಂಗೀತ ಒದಗಿಸಿರುವ ಎಸ್.ಎಸ್. ತಮನ್ ಅವರು ಕಂಫೋಜ್ ಮಾಡಿರುವ ನಾಲ್ಕು ಹಾಡುಗಳೂ ಹಿಟ್ ಆಗಿರುವುದು ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಚಿತ್ರದಲ್ಲಿನ ಎರಡು ಗೀತೆಗಳಿಗೆ ಸಾಹಿತ್ಯ ನನ್ನದಾಗಿದ್ದು, ಉಳಿದವಕ್ಕೆ ಕವಿರಾಜ್ ರಚಿಸಿದ್ದಾರೆ. ಒಂದು ಹಣ್ಣಿನಿಂದ ಶುರುವಾಗುವ ಈ ಚಿತ್ರದ ಕತೆಯ ಪಯಣ ಎಲ್ಲಾಲ್ಲಿಗೆ ಕರೆದುಕೊಂಡು ಹೋಗುತ್ತದೆ ಅನ್ನೋದೇ ಆರೆಂಜ್ ಚಿತ್ರದ ಕಂಟೆಂಟ್. ಚಿತ್ರದ ಶೀರ್ಷಿಕೆಗೆ ನ್ಯಾಯ ಒದಗಿಸಿದ್ದೇವೆ. ವಿಶೇಷವಾಗಿ ಇದು ಪಕ್ಕಾ ಸ್ವಮೇಕ್ ಕತೆಯಾಗಿದೆ. ಇನ್ನು ಅಮೆಜನ್ ಕಂಪನಿಯವರು ಒಳ್ಳೆ ಮೊತ್ತಕ್ಕೆ ನಮ್ಮ ಸಿನಿಮಾವನ್ನು ಖರೀದಿ ಮಾಡಿದ್ದಾರೆ. ಅದೇ ರೀತಿ ಸೆಟಲೈಟ್ ರೈಟ್ಸ್ ಕೂಡ ಗರಿಷ್ಟ ಮೊತ್ತಕ್ಕೆ ಮಾರಾಟವಾಗಿದೆ. ಗಾಂಧಿನಗರದ ಅನುಭವಿ ವಿತರಕರು ನಮ್ಮ ಚಿತ್ರವನ್ನು ಅದ್ದೂರಿಯಾಗಿ ಬಿಡುಗಡೆ ಮಾಡುತ್ತಿದ್ದಾರೆ ಎಂಬುದಾಗಿ ಮಾಹಿತಿ ನೀಡಿದರು.

ನಂತರ ಚಿತ್ರದ ನಾಯಕ ನಟ ಗಣೇಶ್ ಮಾತನಾಡಿ, ಈ ಚಿತ್ರದ ಕತೆಯಲ್ಲಿ ಪ್ರೀತಿ ಹಾಗೂ ಮನುಷ್ಯತ್ವಕ್ಕೆ ಬೆಲೆ ಕೊಡುವ ಹಲವಾರು ಸನ್ನಿವೇಶಗಳಿವೆ.
ಚಿತ್ರ ನೋಡುವ ವೀಕ್ಷಕರಿಗೆ ಸನ್ನಿವೇಶಗಳು ಅರ್ಥವಾದರೂ ಪಾತ್ರಗಳಿಗೆ ತಿಳಿಯದೆ ಗೊಂದಲದಲ್ಲಿಯೇ ಇರುತ್ತಾರೆ. ನಾಯಕ ಆ ಹಣ್ಣನ್ನು ತೆಗೆದುಕೊಂಡು ಸಿಕ್ಕಿ ಹಾಕಿಕೊಂಡಾಗ ಅದರಿಂದ ಹೇಗೆ ಹೊರಗೆ ಬರುತ್ತಾನೆ ಎಂಬುದೇ ಈ ಚಿತ್ರದ ಪ್ರಮುಖ ಭಾಗವಾಗಿದೆ. ಕತೆ ಚಿಕ್ಕದಾದರೂ ಚಿತ್ರಕತೆ ದೊಡ್ಡದಾಗಿದೆ. ಪಾತ್ರಗಳು ಗಂಭೀರವಾಗಿದ್ದರೂ ಪ್ರೇಕ್ಷಕನಿಗೆ ಮುದ ನೀಡುತ್ತವೆ.

ನಾನು ಡಬ್ಬಿಂಗ್ ಮಾಡುವಾಗ  ಚಿತ್ರ ನೋಡಿದ್ದಾ . ನಿರ್ಮಾಪಕರು ನನಗೆ ಪೂರ್ತಿ ಚಿತ್ರ ತೋರಿಸಿಲ್ಲ. ಇಡೀ ಕುಟುಂಬ ಸಮೇತ ನೋಡಬಹುದಾದ ಚಿತ್ರ ಇದಾಗಿದೆ ಎಂದು ಹೇಳಿದರು. ಕೊನೆಯಲ್ಲಿ ನಾಯಕ ನಟಿ ಪ್ರಿಯಾ ಆನಂದ್ ಮಾತನಾಡಿ, ನಾನು ರಾಜಕುಮಾರ ಚಿತ್ರ ಮಾಡಿದ ನಂತರ ಯಾವ ಸಿನಿಮಾ ಮಾಡಬೇಕೆಂದು ಗೊಂದಲದಲ್ಲಿದ್ದಾ . ಆ ಸಮಯದಲ್ಲಿ ಬಂದ ಕತೆಯೇ ಇದಾಗಿತ್ತು. ಈ ಚಿತ್ರತಂಡದೊಂದಿಗೆ ನಾನು ಕೆಲಸ ಮಾಡಿರುವುದು ತುಂಬಾ ಖುಷಿ ನೀಡಿತು ಎಂದು ತಮ್ಮ ಅನುಭವ ಹೇಳಿಕೊಂಡರು.  ತೆರೆ ಮೇಲೆ ಅದ್ಧೂರಿಯಾಗಿ ಬಿಡುಗಡೆಗೊಳ್ಳಲು ಸಿದ್ಧವಾಗಿರುವ ಆರೆಂಜ್‍ನ ಸಿಹಿ-ಹುಳಿಯನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎಂದು ನೋಡೋಣ.

Facebook Comments