ರಾಹುಲ್ ಫ್ಲಾಪ್ ಷೋಗೆ ಟ್ವಿಟ್ಟರ್’ನಲ್ಲಿ ಟೀಕೆ

ಈ ಸುದ್ದಿಯನ್ನು ಶೇರ್ ಮಾಡಿ

k l Rahulಆಡಿಲೇಡ್, ಡಿ.6- ಟೆಸ್ಟ್ ಕ್ರಿಕೆಟ್‍ನಲ್ಲಿ ಪದೇ ಪದೇ ಎಡವುತ್ತಿದ್ದರೂ ಆಡುವ 11ರ ಬಳಗದಲ್ಲಿ ಖಾಯಂ ಸ್ಥಾನ ಪಡೆಯುತ್ತಿರುವ ಕನ್ನಡಿಗ ಕೆ.ಎಲ್.ರಾಹುಲ್ ಇಂದು ಕೂಡ ಫ್ಲಾಪ್ ಷೋ ತೋರಿದ್ದು ಟ್ವಿಟ್ಟರ್ ಟೀಕೆಗಳ ಸುರಿಮಳೆಗೈಯಲಾಗಿದೆ. ಆಸ್ಟ್ರೇಲಿಯಾ ವಿರುದ್ಧ ಇಂದು ನಡೆದ ಪಂದ್ಯದಲ್ಲೂ ಕೂಡ 2 ರನ್‍ಗಳಿಗೆ ಲೋಕೇಶ್ ರಾಹುಲ್ ಔಟಾಗುತ್ತಿದ್ದಂತೆ ಇನ್ನೂ ಸಾಕು ವಿದೇಶಿ ನೆಲದಲ್ಲಿ 2 ಓವರ್‍ಗಳ ಮೇಲೆ ಕ್ರಿಸ್ ನಿಲ್ಲುವ ತಾಕತ್ತು ಇಲ್ಲದ ರಾಹುಲ್ ರನ್ನು ಕೈಬಿಟ್ಟು ಬೇರೆಯವರಿಗೆ ಅವಕಾಶ ಕಲ್ಪಿಸಿ ಎಂದು ಬರೆದಿದ್ದಾರೆ.

ಮತ್ತೊಬ್ಬ ಕೆ.ಎಲ್.ರಾಹುಲ್ ಕೇವಲ ಐಪಿಎಲ್‍ನಲ್ಲೇ ತಮ್ಮ ಕ್ರಿಕೆಟ್ ಜೀವನವನ್ನು ಮುಂದುವರಿಸಿದ್ದಾರೆ ಎಂದು ಬರೆದಿದ್ದಾರೆ. ಫೋಟೋ ಶೂಟ್‍ಗಾಗಿ ರಾಹುಲ್ ಕ್ರೀಸ್‍ಗೆ ಇಳಿದಂತಿದೆ, ಯಾರ ಭುಜದ ಮೇಲೆ ಟ್ಯಾಟೂ ಇರುತ್ತೋ ಅವರು ಕೊಹ್ಲಿ ಆಯ್ಕೆ ಮಾಡುವ 11ರ ಬಳಗದಲ್ಲಿ ಸ್ಥಾನ ಪಡೆಯುತ್ತಾರೆ, 2ನೆ ಟೆಸ್ಟ್‍ನಲ್ಲಿ ರಾಹುಲ್ ಬದಲು ಹನುಮ ವಿಹಾರಿಗೆ ಸ್ಥಾನ ನೀಡಿ ಎಂದು ಟೀಕಿಸಿದ್ದಾರೆ.  ರಾಹುಲ್ ಇತ್ತೀಚೆಗೆ ಆಡಿದ 8 ಪಂದ್ಯಗಳಿಂದ ಕೇವಲ 134 ರನ್‍ಗಳಿಸಿರುವುದು ಅವರ ವೈಫಲ್ಯತೆಯನ್ನು ತೋರಿಸಿದೆ.

Facebook Comments