ಸಿದ್ದಗಂಗಾ ಶ್ರೀ ಆರೋಗ್ಯದಲ್ಲಿ ಚೇತರಿಕೆ, ಹೆಚ್ಚಿನ ಚಿಕಿತ್ಸೆಗಾಗಿ ಚೆನ್ನೈಗೆ ಶಿಫ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Siddaganga--01

ತುಮಕೂರು- ಡಾ.ಶಿವಕುಮಾರ ಶ್ರೀಗಳ ಆರೋಗ್ಯದಲ್ಲಿ ಯಾವುದೇ ತೊಂದರೆ ಇಲ್ಲ. ಆದರೆ, ಹೆಚ್ಚಿನ ಚಿಕಿತ್ಸೆಗಾಗಿ ಚೆನ್ನೈಗೆ ಕರೆದೊಯ್ಯಲು ತಜ್ಞ ವೈದ್ಯರು ತಿಳಿಸಿದ್ದಾರೆ ಎಂದು ಸಿದ್ದಗಂಗಾ ಮಠದ ಕಿರಿಯ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.  ಶ್ರೀಗಳ ಆರೋಗ್ಯದ ಕುರಿತು ಮಾತನಾಡಿದ ಕಿರಿಯ ಶ್ರೀಗಳು, ಸಿದ್ದಗಂಗಾ ಮಠದ ಶಿವಕುಮಾರ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಭಕ್ತರು ಆತಂಕ ಪಡುವ ಅಗತ್ಯ ಇಲ್ಲ. ಶ್ರೀಗಳು ಆರೋಗ್ಯವಾಗಿದ್ದಾರೆ. ಹೆಚ್ಚಿನ ಚಿಕಿತ್ಸೆ ನೀಡುವ ಸಲುವಾಗಿ ಚೆನ್ನೈನಿಂದ ವೈದ್ಯರು ಆಗಮಿಸಿದ್ದರು. ಸಿದ್ದಗಂಗಾ ಶ್ರೀಗಳ ಆರೋಗ್ಯ ಮತ್ತಷ್ಟು ಸುಧಾರಣೆಗಾಗಿ ನಾಳೆ ಮಧ್ಯಾಹ್ನ ಅಥವಾ ಸಂಜೆ ಚೆನ್ನೈಗೆ ಕರೆದೊಯ್ಯಲಾಗುತ್ತದೆ ಎಂದು ತಿಳಿಸಿದರು.

ಚೆನ್ನೈನ ರೇಲಾ ಇನ್ಸ್ಟಿಟ್ಯೂಟ್ನಲ್ಲಿ ಶ್ರೀಗಳಿಗೆ ಚಿಕಿತ್ಸೆ ಕೊಡಿಸಲು ತೀರ್ಮಾನಿಸಲಾಗಿದೆ. ಅಲ್ಲಿನ ಡಾ. ಮಹಮ್ಮದ್ ರೇಲಾ ಅವರಿಂದ ಶ್ರೀಗಳಿಗೆ ಚಿಕಿತ್ಸೆ ಕೊಡಿಸಲು ನಿರ್ಧರಿಸಿದ್ದೇವೆ ಎಂದು ಡಾ. ರವೀಂದ್ರ ತಿಳಿಸಿದರು.ಚೆನ್ನೈನಿಂದ ನುರಿತ ಅರವಳಿಕೆ ತಜ್ಞ ಡಾ. ಎಲ್.ಎನ್. ಕುಮಾರ್ ನೇತೃತ್ವದಲ್ಲಿ ಮೂವರು ವೈದ್ಯರ ತಂಡವು ತುಮಕೂರಿನಲ್ಲಿರುವ ಮಠಕ್ಕೆ ಬಂದು ಶ್ರೀಗಳ ಆರೋಗ್ಯವನ್ನು ಖುದ್ದಾಗಿ ಪರಿಶೀಲಿಸಿತು.

ಸಿದ್ಧಗಂಗಾ ಶ್ರೀಗಳು ಆರೋಗ್ಯವಾಗಿದ್ದಾರೆ. ನಮ್ಮ ಬಳಿ ಮಾತನಾಡಿದ್ದಾರೆ ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಹೇಳಿದರು.ಬುಧವಾರ ಸಂಜೆ ಶ್ರೀಗಳ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿದ್ದ ಹಿನ್ನೆಲೆಯಲ್ಲಿ ಮಠಕ್ಕೆ ಭೇಟಿ ನೀಡಿದ ಅವರು ಮಾತನಾಡಿ, ಶ್ರೀಗಳು ಆರೋಗ್ಯವಾಗಿದ್ದಾರೆ. ಭಕ್ತರು ಆತಂಕಪಡುವುದು ಬೇಡ. ಅವರಿಗೆ ಮುಂದೇನಾದರೂ ಚಿಕಿತ್ಸೆ ಅಗತ್ಯವಿದೆ ಎಂದಾದರೆ ವೈದ್ಯರು ತಿಳಿಸುತ್ತಾರೆ. ಅವರ ಆರೋಗ್ಯದ ವರದಿಯನ್ನು ಚೆನ್ನೈ ವೈದ್ಯರಿಗೆ ತೋರಿಸಲು ತೆಗೆದುಕೊಂಡು ಹೋಗಲಾಗಿದೆ. ಅವರು ಸಲಹೆ ನೀಡಿದ ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.

ಪೂಜೆ ಮಾಡಿದ ಶ್ರೀಗಳು ಸಂಜೆ ಸುಸ್ತುಗೊಂಡಿದ್ದ ಶ್ರೀಗಳು ಇಂದು ಮುಂಜಾನೆ ಚೇತರಿಸಿಕೊಂಡಿದ್ದು, ಎಂದಿನಂತೆ ಪೂಜಾ ಕೈಂಕರ್ಯದಲ್ಲಿ ತೊಡಗಿಕೊಂಡಿದ್ದರು. ಶಿವಪೂಜೆಯನ್ನೂ ನೆರವೇರಿಸಿದ್ದಾರೆ. ಭಕ್ತರು ಆತಂಕ ಪಡುವುದು ಬೇಡ ಎಂದು ಸಿದ್ಧಗಂಗಾ ಮಠದ ಕಿರಿಯ ಶ್ರೀಗಳು ತಿಳಿಸಿದರು.
ಶ್ರೀಗಳ ಆರೋಗ್ಯಕ್ಕೆ ಸಂಬಂಧಿಸಿದ ರಿಪೋರ್ಟ್ಸ್‌ಗಳನ್ನು ನುರಿತ ತಜ್ಞರಿಗೆ ತೋರಿಸುತ್ತೇವೆ. ಅವರು ನೀಡುವ ಸಲಹೆ ಅನುಸರಿಲಾಗುವುದು.

ಬುಧವಾರ ರಾತ್ರಿ ಸ್ವಲ್ಪ ಜ್ವರ ಕಾಣಿಸಿಕೊಂಡಿದ್ದರಿಂದ ಆತಂಕವಾಗಿತ್ತು. ವೈದ್ಯರು ತಪಾಸಣೆ ಮಾಡಿ ಚಿಕಿತ್ಸೆ ನೀಡಿದ್ದು, ಸ್ವಾಮೀಜಿ ಗುಣಮುಖರಾಗಿದ್ದಾರೆ. ಎಂದಿನಂತೆಯೇ ಪೂಜಾ ವಿಧಾನ ನೆರವೇರಿಸಿ ಪ್ರಸಾದ ಸ್ವೀಕರಿಸಿದ್ದಾರೆ. ವೈದ್ಯರ ಸಲಹೆ ಮೇರೆಗೆ ಭಕ್ತರಿಗೆ ದರ್ಶನ ಮಾಡಲು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ’ ಎಂದು ಮಠದ ಆಡಳಿತಾಧಿಕಾರಿ ವಿಶ್ವನಾಥಯ್ಯ ‘ತಿಳಿಸಿದರು.

ಶ್ರೀಗಳಿಗೆ ಚಿಕಿತ್ಸೆ ನೀಡುವ ಕುರಿತು ಚರ್ಚಿಸಲು ವೈದ್ಯರಾದ ಡಾ ಪರಮೇಶ್, ವೈದ್ಯ ಡಾ ರಾಘವೇಂದ್ರ ಅವರು ಇಂಟರ್ ನ್ಯಾಷನಲ್ ಸರ್ಜನ್ ಡಾ.ಮಹಮದ್ ರಹೆಲ್ಲಾ, ಡಾ.ಪಳನಿ ವೇಲು ಭೇಟಿ ಮಾಡಲು ಚೆನ್ನೈಗೆ ತೆರಳಿದ್ದರು. ಶ್ರೀಗಳಿಗೆ ಗಾಲ್ ಬ್ಲಾಡರ್‌ನಲ್ಲಿ ಹನ್ನೊಂದು ಸ್ಟಂಟ್ ಗಳನ್ನ ಅಳವಡಿಸಲಾಗಿತ್ತು. ಈ ಪೈಕಿ ಎರಡು ಮೆಟಲ್ ಸ್ಟಂಟ್‌ಗಳು ಬಿದ್ದು ಹೊಗಿದ್ದು, ಗಾಲ್ ಬ್ಲಾಡರ್‌ನಲ್ಲಿ ಇನ್‌ಫೆಕ್ಷನ್ ಆಗಿದೆ. ಇದರಿಂದ ಶ್ರೀಗಳಿಗೆ ಜ್ವರ ಕಾಣಿಸಿಕೊಳ್ಳುತ್ತಿದೆ. ಬಿದ್ದು ಹೋಗಿರುವ ಸ್ಟಂಟ್ ತೆಗೆಯುವ ಕುರಿತು ಸಲಹೆ ಪಡೆಯಲು ರಾಜ್ಯ ವೈದ್ಯರ ತಂಡ ಚೆನ್ನೈ ವೈದ್ಯರನ್ನು ಭೇಟಿ ಮಾಡಲು ತೆರಳಿತ್ತು.

ಬಿಜಿಎಸ್ ಆಸ್ಪತ್ರೆಯ ವೈದ್ಯರಾದ ಡಾ. ಪರಮೇಶ್ ಹಾಗೂ ಡಾ. ರವೀಂದ್ರ ಅವರು ಬೆಳಗ್ಗೆ ಚೆನ್ನೈಗೆ ಹೋಗಿ ಅಲ್ಲಿನ ನುರಿತ ವೈದ್ಯರೊಂದಿಗೆ ಶ್ರೀಗಳ ಆರೋಗ್ಯ ಸ್ಥಿತಿಯ ಬಗ್ಗೆ ವಿವರ ನೀಡಿ ಸಮಾಲೋಚನೆ ನಡೆಸಿದ್ದರು. ಆ ಬಳಿಕವೇ, ಡಾ. ಎಲ್.ಎನ್. ಕುಮಾರ್ ಮತ್ತವರ ತಂಡವನ್ನು ತುಮಕೂರಿಗೆ ಕರೆತಂದು ಖುದ್ದಾಗಿ ಪರಿಶೀಲಿಸುವ ನಿರ್ಧಾರಕ್ಕೆ ಬರಲಾಯಿತು.  ಇದೇ ವೇಳೆ, ರಾಜ್ಯ ಸರಕಾರ ಕೂಡ ಶತಾಯುಷಿ ಡಾ. ಶಿವಕುಮಾರ ಸ್ವಾಮಿಗಳ ಆರೋಗ್ಯದ ಬಗ್ಗೆ ನಿರಂತರವಾಗಿ ನಿಗಾ ಇಟ್ಟಿದೆ. ಖುದ್ದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಶ್ರೀಗಳ ಆರೋಗ್ಯ ವಿಚಾರಿಸುತ್ತಿದ್ದಾರೆ. ವೈದ್ಯರು ಸಲಹೆ ನೀಡಿದಲ್ಲಿ ಚೆನ್ನೈಗೆ ಶಿಫ್ಟ್ ಮಾಡಲು ಎಲ್ಲಾ ರೀತಿಯಲ್ಲಿ ವ್ಯವಸ್ಥೆ ಮಾಡಿರುವುದಾಗಿ ತುಮಕೂರು ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.

ಐದು ದಿನಗಳ ಹಿಂದೆ ಸಿದ್ದಗಂಗಾ ಮಠದ ಶ್ರೀಗಳಿಗೆ ಜ್ವರ ಮತ್ತು ರಕ್ತದ ಸೋಂಕುಂಟಾಗಿ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. 2-3 ದಿನಗಳ ನಂತರ ಅವರ ಆರೋಗ್ಯ ಸ್ಥಿತಿ ಸುಧಾರಣೆಗೊಂಡು ಡಿಸ್ಚಾರ್ಜ್ ಮಾಡಲಾಯಿತು. 111 ವರ್ಷಗಳ ಶ್ರೀಗಳ ಯಕೃತ್ತಿನಲ್ಲಿ ಈ ಮೊದಲೇ 8 ಸ್ಟೆಂಟ್ಗಳನ್ನ ಹಾಕಲಾಗಿದೆ. ಈಗ ಅವರ ಲಿವರ್ಗೆ ಮತ್ತೊಂದು ಸ್ಟೆಂಟ್ ಅಳವಡಿಸಲು ಸಾಧ್ಯವಾಗುವುದಿಲ್ಲ. ಶ್ರಿಗಳಿಗೆ ಮತ್ತೊಮ್ಮೆ ಲಿವರ್ ಸೋಂಕು ಉಂಟಾದರೆ ಚಿಕಿತ್ಸೆ ನೀಡಲು ವೈದ್ಯರಿಗೆ ಕಷ್ಟವಾಗಬಹುದು ಎನ್ನಲಾಗುತ್ತಿದೆ.

ಇಂದು ಸಂಜೆ ಸುಮಾರು 10. 45 ಕ್ಕೆ ದರ್ಶನ ನೀಡಿದ ಶ್ರೀಗಳು ಲವಲವಿಕೆಯಿಂದ ಇದ್ದಿದ್ದು ಕಂಡುಬಂತು, ಇದರಿಂದ ಭಕರಲ್ಲಿದ್ದ ಆತಂಕ ಕೂಡ ದೂರವಾಯಿತು. ಭಕ್ತಾದಿಗಳು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಮಠದ ಮೂಲಗಳು ತಿಳಿಸಿವೆ.  ಕಳೆದ ಒಂದೆರಡು ದಿವಸದಿಂದ ಶ್ರೀಗಳ ಆರೋಗ್ಯದಲ್ಲಿ ಕೊಂಚ ಏರುಪೇರು ಉಂಟಾಗಿತ್ತು, ಹೀಗಾಗಿ ಶ್ರೀಗಳು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆದುಕೊಂಡು ಪುನಃ ಶ್ರೀ ಮಠಕ್ಕೆ ಆಗಮಿಸಿದ್ದರು.

Facebook Comments

Sri Raghav

Admin