ಲೋಕಸಭಾ ಉಪಾಧ್ಯಕ್ಷ ತಂಬಿದುರೈ ಆಸ್ಪತ್ರೆಗೆ ದಾಖಲು

ಈ ಸುದ್ದಿಯನ್ನು ಶೇರ್ ಮಾಡಿ

Thambiduraiಚೆನ್ನೈ, ಡಿ.6 (ಪಿಟಿಐ)-ಲೋಕಸಭಾ ಉಪಾಧ್ಯಕ್ಷ ಮತ್ತು ಎಐಎಡಿಎಂಕೆ ಹಿರಿಯ ನಾಯಕ ಎಂ.ತಂಬಿದುರೈ ಎದೆನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.  ಮಂಗಳವಾರ ರಾತ್ರಿ 71 ವರ್ಷದ ತಂಬಿದುರೈ ಅವರಿಗೆ ತೀವ್ರ ಎದೆ ನೋವು ಕಾಣಿಸಿಕೊಂಡಿತು. ತಕ್ಷಣ ಅವರನ್ನು ಚೆನ್ನೈನ ಅಫೋಲೋ ಆಸ್ಪತ್ರೆಗೆ ದಾಖಲಿಸಲಾಯಿತು. ಅವರಿಗೆ ಆಂಜಿಯೋಗ್ರಾಂ ಪರೀಕ್ಷೆ ನಡೆಸಲಾಗಿದೆ. ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಓ. ಪನ್ನೀರ್ ಸೆಲ್ವಂ ಆಸ್ಪತ್ರೆಗೆ ಭೇಟಿ ನೀಡಿ ಲೋಕಸಭಾ ಡೆಪ್ಯುಟಿ ಸ್ಪೀಕರ್ ಆರೋಗ್ಯ ವಿಚಾರಿಸಿದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )