ಜಮೀನು ಕಬಳಿಕೆ ಕಿಂಗ್ ಮಿರ್ಲೆ ವರದರಾಜು ಪೊಲೀಸ್ ಕಸ್ಟಡಿಗೆ

ಈ ಸುದ್ದಿಯನ್ನು ಶೇರ್ ಮಾಡಿ

Mirle--01

ಬೆಂಗಳೂರು,ಡಿ.7- ಸಾರ್ವಜನಿಕರ ಜಮೀನು ಕಬಳಿಸಿ ನಕಲಿ ಸೃಷ್ಟಿಸಿ ನಿವೇಶನ ಮಾಡಿ ಮಾರಾಟ ಮಾಡಿ ವಂಚಿಸುತ್ತಿದ್ದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಯಲ್ ಎಸ್ಟೇಟ್ ಉದ್ಯಮಿ ಮಿರ್ಲೆ ವರದರಾಜು ಅವರನ್ನು ಒಂದನೇ   ಎಸಿಎಂಎಂ ನ್ಯಾಯಾಲಯ 10 ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿದೆ.

ಕೆಂಗೇರಿ, ಜ್ಞಾನಭಾರತಿ, ಚಂದ್ರಲೇಔಟ್, ಬ್ಯಾಡರಹಳ್ಳಿ, ಅನ್ನಪೂರ್ಣೇಶ್ವರಿ ನಗರ ಸೇರಿದಂತೆ ವಿವಿಧ ಠಾಣೆಗಳಲ್ಲಿ ವರದರಾಜ್ ವಿರುದ್ದ ಸುಮಾರು 80 ಪ್ರಕರಣಗಳು ದಾಖಲಾಗಿದ್ದು, ಸಿಸಿಬಿಯವರು ದಾಳಿ ನಡೆಸಿ ಇವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆ ಹಾಗೂ ವಿಚಾರಣೆಗೆ ಎರಡು ವಾರಗಳ ಕಾಲ ತಮ್ಮ ವಶಕ್ಕೆ ನೀಡುವಂತೆ ಕೋರಿದರು.  ವಿಚಾರಣೆ ನಡೆಸಿದ ಒಂದನೇ ಎಸಿಎಂಎಂ ನ್ಯಾಯಾಲಯ ಮಿರ್ಲೆ ಅವರನ್ನು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.

# ಯಾರು ಈ ಮಿರ್ಲೆ ವರದರಾಜ್..?
ಮಿರ್ಲೆ ವರದರಾಜ್ ಮೂಲತಃ ಕೆ.ಆರ್ ನಗರದವನು. ಕೆ.ಆರ್ ನಗರದಲ್ಲಿ ಬೆಲ್ಲದ ವ್ಯಾಪಾರ ಮಾಡ್ತಿದ್ದ ಮಿರ್ಲೆ ವರದರಾಜ್. ಸದ್ಯ ಬೆಂಗಳೂರಿನ ಕೆಂಗೇರಿಯಲ್ಲಿ ವಾಸವಿದ್ದ. ಕೆಂಗೇರಿ, ಉಲ್ಲಾಳ, ಆರ್.ಆರ್ ನಗರ, ನಾಗರಭಾವಿ, ರಿಂಗ್ ರೋಡ್ ಸುತ್ತಾಮುತ್ತಲಿನ ರೌಡಿಗಳಿಗೆ ಫೈನಾನ್ಸ್ ಮಾಡ್ತಿದ್ದ. ಅಲ್ಲದೇ, ಕುಖ್ಯಾತ ರೌಡಿಶೀಟರ್ ರಾಮ, ಲಕ್ಷಣರಿಗೆ ಫೈನಾನ್ಸ್ ಮಾಡ್ತಿದ್ದದ್ದು ಇದೇ ಮಿರ್ಲೆ ಎನ್ನಲಾಗಿದೆ.

ಈತ, ಸರ್ಕಾರಿ ಜಾಗವನ್ನ ತೋರಿಸಿ ಸೈಟ್ ಕೊಡಿಸ್ತೀನಿ ಅಂತ ಅಮಾಯಕರಿಗೆ ವಂಚನೆ ಮಾಡಿರುವ ಆರೋಪ ಈತನ ಮೇಲಿದೆ. ಯಾರಾದರು ಪ್ರಶ್ನೆ ಮಾಡಿದ್ರೆ ರೌಡಿಗಳ ಮೂಲಕ ಧಮ್ಕಿ ಹಾಕಿಸೋವುದು. ಕೆಂಗೇರಿ ಸುತ್ತಮುತ್ತ ಏರಿಯಾದಲ್ಲಿ ಮಿರ್ಲೆ ಫುಲ್ ಫೇಮಸ್. ಯಾವುದೇ ಕಾರ್ಯಕ್ರಮಗಳಾದರೂ ರಾಜಕೀಯ ಮುಖಂಡರ ಅಭಿಮಾನಿಯಂತೆ ಫುಲ್ ಪೋಸ್ ಕೊಡ್ತಿದ್ದ. ಆದ್ರೆ, ಮಿರ್ಲೆ ವರದರಾಜ್ ಯಾವುದೇ ಪಕ್ಷದಲ್ಲೂ ಗುರುತಿಸಿಕೊಂಡಿರಲಿಲ್ಲ. ಯಾಱರು ಅಧಿಕಾರದಲ್ಲಿರುತ್ತಿದ್ದರೋ ಅವರ ಜೊತೆಗಿ ಫೋಟೋಗಳ ಫ್ಲೆಕ್ಸ್ ಹಾಕಿಸ್ತಿದ್ದ ಈ ಕಿಲಾಡಿ. ತನಗೆ ರಾಜಕೀಯ ನಾಯಕರುಗಳು ತೀರ ಹತ್ತಿರದ ಪರಿಚಯ ಅಂತಾ ಬಿಂಬಿಸಿಕೊಳ್ತಿದ್ದ. ಈ‌ ಮೂಲಕ ಜನರಿಗೆ ಸೈಟ್ ಕೊಡಿಸೋದಾಗಿ ನಂಬಿಸಿ ಲಕ್ಷಗಟ್ಟಲೇ ಹಣಪೀಕಿ ವಂಚಿಸ್ತಿದ್ದ. ಅಲ್ಲದೇ, ಮಿರ್ಲೆ ವರದರಾಜ್ನ ವಂಚನೆಗೆ ಆತನ ಪತ್ನಿ ಗಿರಿಜಾ ಕೂಡ ಸಾಥ್ ನೀಡುತ್ತಿದ್ದಳಂತೆ.

# 500 ಕೋಟಿಗೂ ಹೆಚ್ಚು ಬೆಲೆ ಬಾಳುವ ಆಸ್ತಿ ಜಪ್ತಿ
ಸದ್ಯ ಮಿರ್ಲೆ ವರದರಾಜ್ನನ್ನು ಲ್ಯಾಂಡ್ ಗ್ರಾಬಿಂಗ್ ಆ್ಯಕ್ಟ್ ಅಡಿ ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಜೊತೆಗೆ ವರದರಾಜ್ ಜೊತೆ ಅವನ ಆಪ್ತ ಡಿಪೊ ನಾಗನ್ನು ಬಂಧಿಸಲಾಗಿದೆ. ಇದೇ ವೇಳೆ, ಆತನ ಬಳಿ ಇದ್ದ ₹500 ಕೋಟಿಗೂ ಹೆಚ್ಚು ಬೆಲೆ ಬಾಳು ಆಸ್ತಿ ಪತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಮನೆಯ ಎರಡು ಬೀರುಗಳಲ್ಲಿ ಪತ್ತೆಯಾದ ಭೂಮಿಗೆ ಸಂಬಂಧ ಪಟ್ಟ ಪತ್ರಗಳು, ಐಶಾರಾಮಿ ಮರ್ಸಿಡಿ ಎಕ್ಸ್ ಯುವಿ ಕಾರ್ ಹಾಗೂ ಇನೋವಾ ಕಾರ್ ಹಾಗೂ ಮತ್ತೊಂದು ಕಾರ್ ಸೀಜ್ ಮಾಡಲಾಗಿದೆ. ಸೀಜ್ ಮಾಡಲಾದ ಎಲ್ಲಾ ದಾಖಲೆಗಳನ್ನು ಸಿಸಿಬಿ ಕಚೇರಿಗೆ ರವಾನೆ ಮಾಡಲಾಗಿದೆ.

Facebook Comments

Sri Raghav

Admin