ತಾವೇ ನಾಟಿ ಮಾಡಿದ್ದ ಭತ್ತವನ್ನು ಕಟಾವು ಮಾಡಲಿದ್ದಾರೆ ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

Cm-Kumaraswamy--01

ಪಾಂಡವಪುರ,ಡಿ.7- ರೈತರಿಗೆ ಆತ್ಮಸ್ಥೈರ್ಯ ಮೂಡಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಇಂದು ಮತ್ತೆ ಗದ್ದೆಗಿಳಿದು ಭತ್ತ ಕೊಯ್ಲು ಮಾಡಲಿದ್ದಾರೆ.  ಈ ಹಿಂದೆ ಅಂದರೆ ಆಗಸ್ಟ್ 11ರಂದು ತಾಲ್ಲೂಕಿನ ಸೀತಾಪುರ ಗ್ರಾಮದಲ್ಲಿ ನಾಟಿ ಮಾಡಿದ್ದ ಭತ್ತ, ಕೊಯ್ಲಿಗೆ ಬಂದಿದ್ದು ಇಂದು ಸ್ವತಃ ಮುಖ್ಯಮಂತ್ರಿಗಳೇ ಅದನ್ನು ಕಟಾವು ಮಾಡಿ ತಾವು ರೈತರ ಪರ ಸದಾ ಇರುತ್ತೇವೆ ಎಂದು ಸಾಬೀತು ಮಾಡಲಿದ್ದಾರೆ.

ಸುಮಾರು 90 ದಿನಗಳ ಹಿಂದೆ ಭತ್ತ ನಾಟಿ ಮಾಡಲಾಗಿತ್ತು. ರೈತರ ಸರಣಿ ಆತ್ಮಹತ್ಯೆ ಹಿನ್ನೆಲೆಯಲ್ಲಿ ಸಾಲ ಮನ್ನಾ ತೀರ್ಮಾನ ಕೈಗೊಂಡಿದ್ದ ಮುಖ್ಯಮಂತ್ರಿ ಬೆಲೆ ಕುಸಿತ, ಬೆಳೆ ಹಾನಿ, ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಳ್ಳದಿರಲು ನಾಟಿ ಮಾಡಿ ಧೈರ್ಯ ತುಂಬಿದ್ದರು.  ಭತ್ತ ಕಟಾವು ನಂತರ ಮುಖ್ಯಮಂತ್ರಿ ಕುಮಾರಸ್ವಾಮಿಯವರು, ಇತ್ತೀಚೆಗೆ ಸಂಭವಿಸಿದ ಕನಗನಮರಡಿ ಬಸ್ ದುರಂತದಲ್ಲಿ ಸಾವನ್ನಪ್ಪಿದವರ ಕುಟುಂಬಗಳ ಸದಸ್ಯರಿಗೆ ಪರಿಹಾರ ಧನ ವಿತರಿಸಲಿದ್ದಾರೆ.

# ಮೇಲ್ಸೇತುವೆಗೆ ಭೂಮಿ ಪೂಜೆ:
”ಈ ಭಾಗದ ಜನರ ಬಹುದಿನದ ಬೇಡಿಕೆಯಾಗಿರುವ ಅರಳಕುಪ್ಪೆ-ಸೀತಾಪುರ ಹಳೇ ಗದ್ದೆ ಬಯಲು ಪ್ರದೇಶದಿಂದ-ಮೈಸೂರಿಗೆ ಸಂಪರ್ಕ ಕಲ್ಪಿಸುವ ಕಾವೇರಿಗೆ ನದಿಗೆ 78 ಕೋಟಿ ರೂ. ವೆಚ್ಚದ ಮೇಲ್ಸೇತುವೆ ಕಾಮಗಾರಿಗೆ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಭೂಮಿಪೂಜೆ ನೆರವೇರಿಸಲಿದ್ದಾರೆ. ಮೇಲ್ಸೇತುವೆ ಕಾಮಗಾರಿಯಿಂದ ಈ ಭಾಗದ ಜನರು ಮೈಸೂರು ಸಂಪರ್ಕಿಸಲು ಅನುಕೂಲವಾಗಲಿದೆ,”ಎಂದರು. ”ಬಳಿಕ ವದೆ ಸಮುದ್ರ ಗ್ರಾಮಕ್ಕೆ ತೆರಳಲಿರುವ ಸಿಎಂ ಕುಮಾರಸ್ವಾಮಿ, ಕನಗನಮರಡಿ ಸಮೀಪದಲ್ಲಿ ಖಾಸಗಿ ಬಸ್‌ ದುರಂತದಲ್ಲಿ ಮೃತಪಟ್ಟ 30 ಮಂದಿಗೂ ಪರಿಹಾರ ವಿತರಣೆ ಮಾಡಲಿದ್ದಾರೆ,”ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್‌.ಪುಟ್ಟರಾಜು ಹೇಳಿದರು.

Facebook Comments

Sri Raghav

Admin