ಸಿದ್ದರಾಮಯ್ಯ-ಡಿಕೆಶಿ ಸೇರಿ ಮೈತ್ರಿ ಸರ್ಕಾರ ಪತನಗೊಳಿಸುತ್ತಾರೆ : ಅಶೋಕ್ ಭವಿಷ್ಯ

ಈ ಸುದ್ದಿಯನ್ನು ಶೇರ್ ಮಾಡಿ

R-Ashok--01

ಬಂಗಾರಪೇಟೆ.ಡಿ. 07 :   ಕಾಂಗ್ರೆಸ್ ಪಕ್ಷದ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವುಕುಮಾರ್ ನೇತೃತ್ವದಲ್ಲೇ ರಾಜ್ಯ ಸಮಿಶ್ರ ಸರ್ಕಾರ ಬೀಳಲಿದೆ ಎಂದು ಬಿಜೆಪಿ ಮುಖಂಡ ಮಾಜಿ ಮುಖ್ಯಮಂತ್ರಿ ಆರ್.ಅಶೋಕ್ ಭವಿಷ್ಯ ನುಡಿದಿದ್ದಾರೆ. ಬಿಜೆಪಿ ಪಕ್ಷದ ವತಿಯಿಂದ ಬರಅಧ್ಯಯನಕ್ಕಾಗಿ ಆಗಮಿಸಿದ ಸಂದರ್ಭದಲ್ಲಿತಾಲ್ಲೂಕಿನ ಕೀಲುಕೊಪ್ಪಕೆರೆಯನ್ನು ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದಅವರು, ಸಮ್ಮಿಶ್ರ ಸರ್ಕಾರ ಬೀಳುವುದಂತೂ ಖಚಿತ, ಆದರೆ ಯಾವಾಗ ಬೀಳಲಿದೆ ಎಂಬುದುಗೊತ್ತಿಲ್ಲಎಂದು ಮಾರ್ಮಿಕವಾಗಿ ನುಡಿದರು.

ಡಿ.6 ರೊಳಗೆ ಸಂಪುಣ ವಿಸ್ತರಣೆ ಮಾಡುವುದಾಗಿ ಹೇಳಿದ್ದ ಸಮಿಶ್ರ ಸರ್ಕಾರದ ನಾಯಕರು, ಇದೀಗ ಬೆಳಗಾವಿ ಅಧಿವೇಶನ ಮುಗಿದ ನಂತರ ಸಂಪುಟ ವಿಸ್ತರಣೆ ಮಾಡುವುದಾಗಿ ಹೇಳುತ್ತಿದ್ದಾರೆ.ಅದಾದ ನಂತರ ಧನುರ್ಮಾಸ ಬಂದಿದೆ ಎಂದು ಹೇಳುತ್ತಾರೆ.ಆ ಸಮಯಕ್ಕೆ ಸರಿಯಾಗಿ ಪಾರ್ಲಿಮೆಂಟ್‍ಚುನಾವಣೆ ಬರುತ್ತದೆ. ಹೀಗೆ ಹೇಳಿಕೊಂಡು ಸಂಪುಟವನ್ನು ವಿಸ್ತರಣೆ ಮಾಡದೆ ಮುಂದೂಡಿಕೊಂಡು ಬರುತ್ತಿರುವುದರಿಂದಲೇ ಸರ್ಕಾರ ಸುಭದ್ರವಾಗಿರಲಿ ಎಂದು ಮುಖ್ಯಮಂತ್ರಿಗಳು ಟೆಂಪಲ್‍ರನ್ ಮಾಡುತ್ತಿದ್ದಾರೆ ಎಂದರು.

ಬೀಳೋ ಸರ್ಕಾರಕ್ಕೆ ನಾವ್ಯಾಕೆ ಮುಹೂರ್ತ ಫಿಕ್ಸ್ ಮಾಡಬೇಕು. ತಾನಾಗಿಯೇ ಸರ್ಕಾರ ಬಿದ್ದು ಹೋಗುತ್ತದೆ. ಸರ್ಕಾರ ಬೀಳುವುದು ಪ್ರತಿಯೊಬ್ಬರಿಗೂ ಗೊತ್ತಿದೆ. ಸರ್ಕಾರವನ್ನು ಬಿಜೆಪಿ ಬೀಳಿಸಲ್ಲ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನೇತೃತ್ವದಲ್ಲೇ ಸರ್ಕಾರ ಪತನಗೊಳ್ಳಲಿದೆ ಎಂದರು.  ಬರ ಎದುರಿಸುತ್ತಿರುವ ಯಾವ ಯಾವ ಜಿಲ್ಲೆಗಳಿಗೆ ಎಷ್ಟೆಷ್ಟು ಹಣ ಬಿಡುಗಡೆ ಮಾಡಿದ್ದೀರಾ, ಅದರ ವಿವರವನ್ನು ಬಹಿರಂಗ ಪಡಿಸಬೇಕೆಂದು ಸರ್ಕಾರವನ್ನು ಒತ್ತಾಯ ಮಾಡಿದ ಅವರು, ಅದರಲ್ಲಿ ಯಾವ ಯಾವ ತಾಲ್ಲೂಕಿಗೆ ಎಷ್ಟೆಷ್ಟು ಹಣ ಬಂದಿದೆ ಎಂದು ತಿಳಿಸಬೇಕು. ಯಾವ ರೈತರಿಗೆ ಬೆಳೆ ಪರಿಹಾರಕೊಟ್ಟಿದ್ದೀರಾ. ಕುಡಿಯುವ ನೀರಿನ ಸಮಸ್ಯೆಇರುವ ಎಷ್ಟು ಹಳ್ಳಿಗಳಲ್ಲಿ ಏನು ಕ್ರಮವನ್ನು ಜರುಗಿಸಿದ್ದೀರಾ ಎಂದು ಪ್ರಶ್ನಿಸಿದರು.

ಈ ಬಗ್ಗೆ ಮಾಹಿತಿ ನೀಡದೆಇದ್ದಲ್ಲಿ 10 ನೇ ತಾರೀಖಿನಿಂದ ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದ ಹೊರಗಡೆ ಮತ್ತು ಒಳಗಡೆ ರಾಜ್ಯಾಧ್ಯಕ್ಷ ಯಡಿಯೂರಪ್ಪರವರ ನೇತೃತ್ವದಲ್ಲಿ ಹೋರಾಟವನ್ನು ಮಾಡಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.  ಬಿಜೆಪಿ ಕೋಲಾರ ಜಿಲ್ಲಾಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ, ಮಾಜಿ ಜಿಲ್ಲಾಧ್ಯಕ್ಷ ಎಟ್ಟಕೋಡಿಕೃಷ್ಣಾರೆಡ್ಡಿ, ಕೆಜಿಎಫ್ ಮಾಜಿ ಶಾಸಕ ವೈ.ಸಂಪಂಗಿ, ತಾಲ್ಲೂಕು ಅಧ್ಯಕ್ಷ ಹನುಮಪ್ಪ, ಜಿಪಂ ಸದಸ್ಯರಾದ ಬಿ.ವಿ.ಮಹೇಶ್, ಮಾಲಾ ಶ್ರೀನಿವಾಸಗೌಡ, ಕೆಸರನಹಳ್ಳಿ ಪಂಚಾಯತ್‍ಅಧ್ಯಕ್ಷ ಮಂಜುನಾಥ್, ಕಂಟ್ರಾಕ್ಟರ್ ಕೀಲುಕೊಪ್ಪ ಶ್ರೀನಿವಾಸ್, ಶಾಂತಿನಗರ ಮಂಜುನಾಥ್, ಹೊಸರಾಯಪ್ಪಇದ್ದರು.

Facebook Comments

Sri Raghav

Admin