ಯಶ್ ಮಗಳಿಗೆ ‘ಸ್ವರ್ಗದಿಂದ’ ಗಿಫ್ಟ್ ಕಳಿಸಿದ ಅಂಬಿ..!

ಈ ಸುದ್ದಿಯನ್ನು ಶೇರ್ ಮಾಡಿ

Ambi--01

ಬೆಂಗಳೂರು,ಡಿ.7- ಯಶ್ ಹಾಗೂ ಅಂಬರೀಶ್ ನಡುವಿನ ಅವಿನಾಭಾವ ಸಂಬಂಧಕ್ಕೆ ಯಶ್ ದಂಪತಿಯ ಮಗುವಿಗೆ ಅಂಬಿ ಆರ್ಡರ್ ಮಾಡಿರುವ ಭಾರೀ ಗಿಫ್ಟ್ ಸಾಕ್ಷಿಯಾಗಿದೆ.  ರಾಧಿಕಾ ಪಂಡಿತ್ ಅವರ ಸೀಮಂತದ ಸಂದರ್ಭದಲ್ಲೇ ಅವರ ಮಗುವಿಗಾಗಿ ಸುಮಾರು 1.50 ಲಕ್ಷ ಮೌಲ್ಯದ ಚೆಂದದ ತೊಟ್ಟಿಲು ನಿರ್ಮಾಣಕ್ಕೆ ಅಂಬಿ ಆರ್ಡರ್ ಮಾಡಿದ್ದರು.   ತೊಟ್ಟಿಲು ಸಿದ್ದವಾಗಿರುವ ಬಗ್ಗೆ ಅಂಗಡಿಯವರು ಸುಮಲತಾ ಅವರಿಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.

ಸುಮಲತಾಗೆ ನಿಜಕ್ಕೂ ಅಚ್ಚರಿ ಮತ್ತು ಕುತೂಹಲವಾಗಿತ್ತು. ತೊಟ್ಟಿಲನ್ನು ಆರ್ಡರ್ ನಾವ್ಯಾರೂ ಕೊಟ್ಟಿಲ್ಲವಲ್ಲ. ಮತ್ತೆ ತಪ್ಪಾಗಿ ಈ ಸಂದೇಶ ಬಂದಿದೆಯಾ? ಏನಿದರ ಅಸಲಿಯತ್ತು? ಹೀಗಂದುಕೊಂಡೇ ಆ ಮೊಬೈಲ್ ನಂಬರಿಗೆ ಫೋನ್ ಮಾಡಿದ್ದಾರೆ. ಆಗ ಸತ್ಯ ಗೊತ್ತಾಗಿದೆ. ಅದು ಖುದ್ದು ಅಂಬಿಯೇ ಆರ್ಡರ್ ಕೊಟ್ಟು ಮಾಡಿಸಿದ್ದ ತೊಟ್ಟಿಲು. ಅದಕ್ಕಿಂತ ಹೆಚ್ಚಾಗಿ ಈ ಆರ್ಡರ್ ಕೊಟ್ಟಿದ್ದು ಅಂಬರೀಶ್ ಎನ್ನುವುದು ಆ ಅಂಗಡಿ ಮಾಲೀಕರಿಗೆ ಗೊತ್ತಿರಲಿಲ್ಲ. ಸಂಪರ್ಕಕ್ಕಾಗಿ ಅಂಬರೀಶ್ ತಮ್ಮ ಪತ್ನಿ ಸುಮಲತಾ ಮೊಬೈಲ್ ನಂಬರ್ ಮಾಲೀಕನಿಗೆ ಕೊಟ್ಟಿದ್ದರು.

ಅಂಬರೀಶ್ ಯಶ್ ಮತ್ತು ರಾಧಿಕಾ ಮಗುವಿಗೆ ತೊಟ್ಟಿಲನ್ನು ಕಾಣಿಕೆಯನ್ನಾಗಿ ಕೊಟ್ಟಿದ್ದರು. ಯಾವಾಗ ಸುಮಲತಾಗೆ ಈ ವಿಷಯ ಗೊತ್ತಾಯಿತೋ, ಅವರು ಯಶ್‍ಗೆ ಫೋನ್ ಮಾಡಿ ನಿಮ್ಮ ಮಗಳು ಅದೃಷ್ಟ ಮಾಡಿದ್ದಾಳೆ. ಅವಳಿಗಾಗಿ ಸ್ವರ್ಗದಿಂದ ಗಿಫ್ಟ್ ಬಂದಿದೆ ಎಂದು ಹೇಳಿ ದುಬಾರಿ ತೊಟ್ಟಿಲು ಹಸ್ತಾಂತಿರಿಸುವುದಾಗಿ ಹೇಳಿದ್ದಾರೆ.

ರೆಬೆಲ್ ಸ್ಟಾರ್ ಅಂಬರೀಶ್ ಗೆ ಯಶ್ ಎಂದರೆ ಅಪಾರ ಪ್ರೀತಿ. ರಾಧಿಕಾ ಯಶ್ ಸೀಮಂತಕ್ಕೆ ಆಗಮಿಸಿ ದಂಪತಿಗಳಿಗೆ ಆಶಿರ್ವದಿಸಿದ್ದರು. ದುರಾದೃಷ್ಟವಶಾತ್ ಅದೇ ಅವರ ಕೊನೆ ಕಾರ್ಯಕ್ರಮವಾಯಿತು. ಯಶ್ ಮಗುವಿಗೆ ತೊಟ್ಟಿಲನ್ನು ಕೊಡಬೇಕೆಂಬುದು ಅಂಬಿ ಆಸೆಯಾಗಿತ್ತು. ಆದರೆ ವಿಧಿಯಾಟ ಬೇರೆಯದ್ದೇ ಆಗಿತ್ತು ಅಷ್ಟರಲ್ಲೇ ಅಂಭಿ ಇಹಲೋಕ ತ್ಯಜಿಸಿದರು.  ಆದರೆ ಅಂಬಿ ಗಿಫ್ಟ್ ಈಗ ಯಶ್ ಮಗಳಿಗೆ ತಲುಪಿದ್ದು ಅಂಬಿ ಸ್ವರ್ಗದಿಂದಲೇ ಗಿಫ್ಟ್ ಕಳಿಸಿ ಆಶೀರ್ವದಿಸಿದಂತಾಗಿದೆ.

Facebook Comments

Sri Raghav

Admin