ರ‍್ಯಾಲಿಗೆ ತಡೆ : ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಬಿಜೆಪಿ

ಈ ಸುದ್ದಿಯನ್ನು ಶೇರ್ ಮಾಡಿ

Bjp v mamthaಕೊಲ್ಕತ್ತಾ, ಡಿ.7-ತನ್ನ ಉದ್ದೇಶಿತ ರಥ ಯಾತ್ರೆಗೆ ಅನುಮತಿ ನಿರಾಕರಿಸಿರುವ ಪಶ್ಚಿಮ ಬಂಗಾಲ ಸರಕಾರದ ನಿರ್ಧಾರವನ್ನು ಪ್ರಶ್ನಿಸಿ ಭಾರತೀಯ ಜನತಾ ಪಕ್ಷ ಕೋಲ್ಕತ್ತ ಹೈಕೋರ್ಟಿನ ವಿಭಾಗೀಯ ಪೀಠಕ್ಕೆ ಅಪೀಲು ಸಲ್ಲಿಸಿದೆ. ಜಸ್ಟಿಸ್ ಎ ಮುಖರ್ಜಿ ಅವರನ್ನು ಒಳಗೊಂಡ ಪೀಠದ ಮುಂದೆ ಇಂದು ಅರ್ಜಿ ವಿಚಾರಣೆಗೆ ಬರಲಿದೆ. ಒಂದು ದಿನದ ಹಿಂದಷ್ಟೇ ಕೂಚ್‍ಬೆಹಾರ್‍ನಲ್ಲಿ ರಥಯಾತ್ರೆ ನಡೆಸುವುದಕ್ಕೆ ಬಿಜೆಪಿಗೆ ಅನುಮತಿ ನೀಡಲು ಕೋಲ್ಕತ್ತ ಹೈಕೋರ್ಟ್ ಏಕಸದಸ್ಯ ಪೀಠ ನಿರಾಕರಿಸಿತ್ತು.

ಈ ರಥಯಾತ್ರೆಗೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಸಿರು ನಿಶಾನೆ ತೋರಲು ಮುಂದಾಗಿದ್ದರು. 2019ರ ಲೋಕಸಭಾ ಚುನಾವಣೆ ಯನ್ನು ದೃಷ್ಟಿಯಲ್ಲಿರಿಸಿಕೊಂಡು ಪಶ್ಚಿಮ ಬಂಗಾಲದ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲಿ ಸಂಚರಿಸಲಿರುವ ಬಿಜೆಪಿಯ ರಥಯಾತ್ರೆಯಿಂದ ರಾಜ್ಯದಲ್ಲಿನ ಕೋಮು ಸೌಹಾರ್ದಕ್ಕೆ ಧಕ್ಕೆ ಉಂಟಾಗಿ ಕೋಮು ಸಂಘರ್ಷ ಉಂಟಾಗಬಹುದು ಎಂಬ ಕಾರಣಕ್ಕೆ ಮಮತಾ ಬ್ಯಾನರ್ಜಿ ನೇತೃತ್ವದ ಸರಕಾರ ರಥಯಾತ್ರೆಗೆ ಅನುಮತಿ ನಿರಾಕರಿಸಿತ್ತು.

ಈ ಮಧ್ಯೆ ಕೋಚ್‍ಬೆಹರ್‍ನಲ್ಲಿ ಬಿಜೆಪಿ ನಾಯಕರು ತುರ್ತು ಸಭೆ ಸೇರಿ ಉದ್ಭವಿಸಿರುವ ಪರಿಸ್ಥಿತಿಯನ್ನು ಪರಾಮರ್ಶಿಸಿದರು. ಕಾನೂನು ಸಮರ ಸೇರಿದಂತೆ ಇತರೆ ಮಾರ್ಗೋ ಪಾಯಗಳ ಬಗ್ಗೆ ಚರ್ಚಿಸಿದರು.

Facebook Comments