ತೆಲಂಗಾಣ ಚುನಾವಣೆ : ಸಾಲಲ್ಲಿ ನಿಂತು ಮತದಾನ ಮಾಡಿದ ಸೆಲೆಬ್ರೆಟಿಗಳು

ಈ ಸುದ್ದಿಯನ್ನು ಶೇರ್ ಮಾಡಿ

Telangana-Voting--01
ಹೈದರಾಬಾದ್/ಜೈಪುರ್, ಡಿ.7-ಮುಂಬರುವ ಲೋಕಸಭಾ ಸಮರದ ದಿಕ್ಸೂಚಿ ಎಂದೇ ಬಿಂಬಿತವಾಗಿರುವ ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಅಂತಿಮ ಹಂತವಾಗಿ ಇಂದು ತೆಲಂಗಾಣ ಮತ್ತು ರಾಜಸ್ತಾನ ರಾಜ್ಯಗಳಲ್ಲಿ ಭಾರೀ ಬಿಗಿ ಭದ್ರತೆ ನಡುವೆ ಮತದಾನ ನಡೆದಿದೆ. ಸಣ್ಣಪುಟ್ಟ ಅಹಿತಕರ ಘಟನೆಗಳನ್ನು ಹೊರತುಪಡಿಸಿದಂತೆ ಚುನಾವಣೆ ಬಹುತೇಕ ಶಾಂತಿಯುತವಾಗಿತ್ತು.

ತೆಲಂಗಾಣ ವಿಧಾನಸಭೆಯ 119 ಕ್ಷೇತ್ರಗಳಿಗೆ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ, ಟಿಆರ್‍ಎಸ್ ಮತ್ತು ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಒಂದೇ ಹಂತದಲ್ಲಿ ನಡೆಯುವ ಮತದಾನದಲ್ಲಿ ಸುಮಾರು 2.80 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಒಟ್ಟು 32,815 ಮತಗಟ್ಟೆಗಳನ್ನು ತೆರೆಯಲಾಗಿದೆ. ಒಂದೂವರೆ ಲಕ್ಷಕ್ಕೂ ಅಧಿಕ ಸಿಬ್ಬಂದಿ ಮತದಾನ ಪ್ರಕ್ರಿಯೆಯ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ.

ಬುಧವಾರ ಸಂಜೆ 5 ಗಂಟೆಗೆ ಬಹಿರಂಗ ಚುನಾವಣಾ ಪ್ರಚಾರ ಅಂತ್ಯಗೊಂಡಿತ್ತು. ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ನೇತೃತ್ವದ ತೆಲಂಗಾಣ ರಾಷ್ಟ್ರೀಯ ಸಮಿತಿಯ ಘಟಾನುಘಟಿಗಳು ಸ್ಪರ್ಧಾಕಣದಲ್ಲಿದ್ದಾರೆ. ಕೆಟಿ ರಾಮರಾವ್, ಹರೀಶ್ ರಾವ್, ಕಾಂಗ್ರೆಸ್‍ನಿಂದ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಉತ್ತಮ್ ಕುಮಾರ್ ರೆಡ್ಡಿ, ರೇವಂತ್ ರೆಡ್ಡಿ ಕಣದಲ್ಲಿದ್ದಾರೆ. ಟಾಲಿವುಡ್ ಖ್ಯಾತ ನಟ ಅಲ್ಲು ಅರ್ಜುನ್ ಹೈದರಾಬಾದ್ ನ ಜ್ಯುಬಿಲಿ ಹಿಲ್ಸ್‍ನಲ್ಲಿರುವ ಬೂತ್ ಸಂಖ್ಯೆ 152ಕ್ಕೆ ಆಗಮಿಸಿ ಮತ ಚಲಾಯಿಸಿದರು. ಇನ್ನೊಂದೆಡೆ ನಟ ಅಕ್ಕಿನೇನಿ ನಾಗಾರ್ಜುನ ಮತ್ತು ಅವರ ಪತ್ನಿ ನಟಿ ಅಮಲಾ ಅಕ್ಕಿನೇನಿ ಜ್ಯುಬಿಲಿ ಹಿಲ್ಸ್‍ನ ಮತಗಟ್ಟೆ ಸಂಖ್ಯೆ 151ಕ್ಕೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು.

DtykJ7DWoAAIr0V DtykJBCXQAA3S1r DtykKlOX4AA4J2Q DtypbDyVAAE3njk

DtyzjkHV4AAMJx5

DtyzglpUwAAhtDj DtyzeH4U0AAO4ku DtyzdOKUwAACjhC DtyYGasVYAACjIS DtyWKKlXQAEi1RG DtyUPGHU0AAfY-z DtyT-oDUcAAgDbc DtypeXsU8AAV9EJ DtyDCcAUUAA1DiG Dtyd84xXgAEK_nk DtybeN9U0AAu2Bv DtyAzgUVsAEmPyc Dty6HMzV4AEQyo5 Dty-0dbVYAEf9a9
.

Facebook Comments

Sri Raghav

Admin