ಭಾರತದ ಬೌಲಿಂಗ್ ದಾಳಿಗೆ ನಲುಗಿದ ಆಸೀಸ್, ಇನ್ನಿಂಗ್ಸ್ ಮುನ್ನಡೆಗೆ ಪರದಾಟ

ಈ ಸುದ್ದಿಯನ್ನು ಶೇರ್ ಮಾಡಿ

india vs ausಅಡಿಲೇಡ್, ಡಿ.7- ಭಾರತದ ಕರಾರುವಾಕ್ಕಾದ ಬೌಲಿಂಗ್ ದಾಳಿಗೆ ಸಿಲುಕಿರುವ ಆಸ್ಟ್ರೇಲಿಯಾ ತಂಡವು ಎರಡನೇ ದಿನದ ಅಂತ್ಯಕ್ಕೆ 191 ರನ್‍ಗಳಿಸಿದ್ದು ಇನ್ನಿಂಗ್ಸ್ ಮುನ್ನಡೆ ಪಡೆಯಲು ಪರದಾಟ ನಡೆಸುತ್ತಿದೆ.ಇಂದು ಬೆಳಗ್ಗೆ ಆಟ ಮುಂದುವರಿಸಿದ ಭಾರತದ ಆಟಗಾರರು ನಿನ್ನೆ ಗಳಿಸಿದ್ದ 250 ರನ್‍ಗಳ ಮೊತ್ತಕ್ಕೆ ತನ್ನೆಲ್ಲಾ ವಿಕೆಟ್‍ಗಳನ್ನು ಕಳೆದುಕೊಂಡಿತು. ಮೊಹಮ್ಮದ್ ಶಮಿ (6) ವಿಕೆಟ್ ಪಡೆಯುವ ಮೂಲಕ ಹೆಜಲ್‍ವುಡ್ ಟೀಂ ಇಂಡಿಯಾದ ಆಟಕ್ಕೆ ಇತಿಶ್ರೀ ಹಾಡಿದರು.
ಆಸ್ಟ್ರೇಲಿಯಾಕ್ಕೆ ಆರಂಭಿಕ ಆಘಾತ:
ಆಸ್ಟ್ರೇಲಿಯಾ ತಂಡದ ಆರಂಭಿಕ ಬ್ಯಾಟ್ಸ್‍ಮನ್ ಆರೋನ್‍ಫಿಂಚ್ (0 ರನ್) ಪಂದ್ಯದ 3ನೆ ಎಸೆತದಲ್ಲೇ ಇಶಾಂತ್‍ಶರ್ಮಾಗೆ ಕ್ಲೀನ್ ಬೋಲ್ಡ್ ಆಗುವ ಮೂಲಕ ಆಸೀಸ್ ಆರಂಭಿಕ ಆಘಾತ ಅನುಭವಿಸಿತು. ಆಸೀಸ್‍ನ ಆರಂಭಿಕ ಆಟಗಾರ ಎಂ.ಎಸ್.ಹ್ಯಾರೀಸ್ (26 ರನ್, 3 ಬೌಂಡರಿ) , ಉಸ್ಮಾನ್‍ಖಾಜ್ವಾ (28 ರನ್, 1 ಬೌಂಡರಿ) 2ನೆ ವಿಕೆಟ್‍ಗೆ 45 ರನ್‍ಗಳ ಉಪಯುಕ್ತ ಜೊತೆಯಾಟ ನೀಡಿದರಾದರೂ ಈ ಜೋಡಿಯನ್ನು ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಬೇರ್ಪಡಿಸಿದರು.
ಭರವಸೆಯ ಆಟಗಾರ ಶಾನ್‍ಮಾರ್ಶ್ (2 ರನ್) ನಿರಾಸೆ ಮೂಡಿಸಿದರು.

ಹ್ಯಾಂಡ್ಸ್‍ಕೋಮ್- ಟ್ರಾವಿಡ್ ಹೆಡ್ ಆಸರೆ:
87 ರನ್‍ಗಳಿಗೆ 4 ಪ್ರಮುಖ ವಿಕೆಟ್‍ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಆಸ್ಟ್ರೇಲಿಯಾ ತಂಡಕ್ಕೆ 5ನೆ ವಿಕೆಟ್‍ಗೆ ಜೊತೆಗೂಡಿದ ಪೀಟರ್ ಹ್ಯಾಂಡ್ಶ್ ಕೋಮ್(34 ರನ್, 5 ಬೌಂಡರಿ) ಹಾಗೂ ಟ್ರಾವಿಸ್ ಹೆಡ್ (61 ರನ್, 6 ಬೌಂಡರಿ) ಆಸರೆಯಾಗಿ 33 ರನ್‍ಗಳ ಜೊತೆಯಾಟ ನೀಡುತ್ತಿದ್ದಂತೆ ಬೂಮ್ರಾ ಬೌಲಿಂಗ್‍ನಲ್ಲಿ ಹ್ಯಾಂಡ್ಸ್‍ಕೋಮ್ , ಭಾರತದ ವಿಕೆಟ್‍ಕೀಪರ್ ರಿಷಭ್‍ಪಂತ್‍ಗೆ ಕ್ಯಾಚ್ ನೀಡಿ ಹೊರ ನಡೆದಾಗ ತಂಡದ ಮೊತ್ತ 120 ಆಗಿತ್ತು.

ನಂತರ ಬಂದ ನಾಯಕ ಕಂ ವಿಕೆಟ್ ಕೀಪರ್ ಟೀಮ್ ಪೇನ್ 5 ರನ್ ಗಳಿಸಿ ಇಶಾಂತ್‍ಶರ್ಮಾಗೆ ವಿಕೆಟ್ ಒಪ್ಪಿಸಿದರೆ, ಪ್ಯಾಟ್ ಕುಮ್ಮಿನ್ಸ್ 10 ರನ್ ಗಳಿಸಿ ಬೂಮ್ರಾ ಬೌಲಿಂಗ್‍ನಲ್ಲಿ ಎಲ್‍ಬಿಡಬ್ಲ್ಯು ಬಲೆಗೆ ಬೀಳುವ ಮೂಲಕ ಆಸ್ಟ್ರೇಲಿಯಾದ 7ನೆ ವಿಕೆಟ್ ಪತನವಾಯಿತು.ಎರಡನೆ ದಿನದ ಅಂತ್ಯಕ್ಕೆ ಆಸ್ಟ್ರೇಲಿಯಾ 7 ವಿಕೆಟ್‍ಗಳನ್ನು ಕಳೆದುಕೊಂಡು ಟ್ರಾವಿಡ್ ಹೆಡ್ (61 ರನ್), ಮಿಚಲ್ ಸ್ಟ್ರಾಕ್ (8 ರನ್) ಮೂರನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದು ಆಸೀಸ್ ಇನ್ನಿಂಗ್ಸ್ ಮುನ್ನಡೆ ಪಡೆಯಲು ಇನ್ನೂ 59 ರನ್ ಗಳಿಸಬೇಕಾಗಿದೆ.

Facebook Comments