ಮತಪಟ್ಟಿಯಿಂದ ಜ್ವಾಲಾಗುಟ್ಟಾ ಹೆಸರೇ ನಾಪತ್ತೆ..?

ಈ ಸುದ್ದಿಯನ್ನು ಶೇರ್ ಮಾಡಿ

Jwala Guttaತೆಲಂಗಾಣ, ಡಿ.7- ಇಂದು  ನಡೆಯುತ್ತಿರುವ ವಿಧಾನಸಭೆ ಚುನಾವಣೆಯ ಮತ ಪಟ್ಟಿಯಿಂದ ಬ್ಯಾಡ್ಮಿಂಟನ್ ಲೋಕದ ತಾರೆ ಜ್ವಾಲಾಗುಟ್ಟಾ ಅವರ ಹೆಸರೇ ನಾಪತ್ತೆ ಆಗಿರುವುದು ಆಶ್ಚರ್ಯ ಮೂಡಿಸಿದೆ. ಹೆಸರು ನಾಪತ್ತೆಯಾಗಿ ರುವ ಬಗ್ಗೆ ಟ್ವಿಟರ್‍ನಲ್ಲಿ ಪ್ರತಿಕ್ರಿಯಿಸಿರುವ ಜ್ವಾಲಾಗುಟ್ಟಾ, ಚುನಾವಣೆಯ ವೇಳೆ ಈ ರೀತಿಯ ಅಚಾತುರ್ಯ ನಡೆಯುವುದು ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವಂತಹ ವಿಷಯ ಎಂದರು.

ಚುನಾವಣೆಯ ಮತದಾನದ ಪಟ್ಟಿಯಿಂದ ಹೆಸರುಗಳು ಹೇಗೆ ನಾಪತ್ತೆಯಾಗುತ್ತೇವೆ ಎಂಬುದು ನನಗೆ ಅರ್ಥವಾಗುತ್ತಿಲ್ಲ, ಇಂದು ಮತದಾನದ ಮಾಡುವ ಮುನ್ನ ಆನ್‍ಲೈನ್‍ನಲ್ಲಿ ನನ್ನ ಹೆಸರಿದೆಯೇ ಎಂದು ಪರೀಕ್ಷಿಸಿದಾಗ ಅಲ್ಲಿ ನನ್ನ ಹೆಸರು ಮಾಯವಾಗಿರುವುದು ಕಂಡು ಆಶ್ಚರ್ಯವಾಯಿತು ಎಂದು ತಿಳಿಸಿದರು.
ಈ ರೀತಿಯ ಅಚಾತುರ್ಯದಿಂದ ನನ್ನ ಅಮೂಲ್ಯವಾದ ಮತವನ್ನು ಹಾಕುವ ಅದೃಷ್ಟವನ್ನು ಕಳೆದುಕೊಂಡಿದ್ದು ಬೇಸರ ತಂದಿದೆ, ಮುಂದಿನ ಲೋಕಸಭಾ ಚುನಾವಣೆಯಲ್ಲಾದರೂ ಮತದಾನ ಮಾಡುವ ಅವಕಾಶ ದೊರೆಯುವುದೇ ಎಂಬುದನ್ನು ಕಾದು ನೋಡುತ್ತಿದ್ದೇನೆ ಎಂದು ಹೇಳುವ ಮೂಲಕ ತಮ್ಮ ಬೇಸರವನ್ನು ವ್ಯಕ್ತಪಡಿಸಿದರು.

Facebook Comments