ಲಿಪ್‍ಸ್ಟಿಕ್ ಬಳಿದುಕೊಳ್ಳುವ ಮಹಿಳೆಯರೇ ಹುಷಾರ್..?

ಈ ಸುದ್ದಿಯನ್ನು ಶೇರ್ ಮಾಡಿ

Lip--01

ಸುಂದರವಾಗಿ ಕಾಣಬೇಕೆಂದು ನಾವು ಇನ್ನಿಲ್ಲದ ಪ್ರಯತ್ನ ಮಾಡುತ್ತೇವೆ. ಅದರಲ್ಲೂ ಮಹಿಳೆಯರು ಮೇಕಪ್ ಮಾಡಿಕೊಳ್ಳಲು ಗಂಟೆಗಟ್ಟಲೆ ತೆಗೆದುಕೊಳ್ಳುತ್ತಾರೆ. ಇದಕ್ಕಾಗಿ ಸಾಕಷ್ಟು ಹಣವನ್ನು ವೆಚ್ಚ ಮಾಡುತ್ತಾರೆ. ಮಾರುಕಟ್ಟೆಯಲ್ಲಿ ಸಿಗುವಂತಹ ಹಲವಾರು ರೀತಿಯ ಸೌಂದರ್ಯವರ್ಧಕಗಳನ್ನು ಬಳಸಿಕೊಳ್ಳುವುದು ಮಹಿಳೆರಿಗೆ ಸಾಮಾನ್ಯ ಸಂಗತಿಯಾಗಿದೆ. ಆದರೆ ಇಂತಹ ಸೌಂದರ್ಯವರ್ಧಕಗಳ ಬಗ್ಗೆ ತುಂಬಾ ಎಚ್ಚರಿಕೆ ವಹಿಸಬೇಕು.

ಲಿಪಸ್ಟಿಕ್ ಎನ್ನುವುದು ವರ್ಣ ದ್ರವ್ಯಗಳು, ಎಣ್ಣೆಗಳು, ಮೇಣಗಳು ಮತ್ತು ಬಣ್ಣಗಳ ವಿನ್ಯಾಸವನ್ನೊಳಗೊಂಡು ತುಟಿಗಳಿಗೆ ರಕ್ಷಣೆ ನೀಡುವ ಅಂಶಗಳನ್ನು ಹೊಂದಿರುವ ಸೌಂದರ್ಯವರ್ಧಕ ಉತ್ಪನ್ನ.ಲಿಪ್‍ಸ್ಟಿಕ್‍ನ ಅನೇಕ ಬಣ್ಣಗಳು ಮತ್ತು ವಿವಿಧ ವಿಧಗಳು ಕಾಣಸಿಗುತ್ತದೆ.ಮೇಕಪ್‍ನಇತರ ವಿಧಗಳಂತೆ ಲಿಪ್‍ಸ್ಟಿಕ್‍ಕೂಡ ವಿಶಿಷ್ಟವಾಗಿರುತ್ತದೆ.

ಪ್ರತಿದಿನ ಲಿಪ್‌ಸ್ಟಿಕ್ ಬಳಸುತ್ತಿದ್ದರೆ ತುಟಿ ಒಣಗುವುದು ನಿಮ್ಮ ಗಮನಕ್ಕೆ ಬಂದಿರಬಹುದು. ಲಿಪ್‌ಸ್ಟಿಕ್‌ನಿಂದ ತುಟಿ ಹಾಳಾಗಬಾರದೆಂದು ನೀವು ಬಯಸುವುದಾದರೆ ಈ ಟಿಪ್ಸ್ ಪಾಲಿಸುವುದು ಉತ್ತಮ. ಎರಡು ವರ್ಷಕ್ಕಿಂತ ಹಳೆಯದಾದ ಲಿಪ್‌ಸ್ಟಿಕ್‌ ಬಳಸಬಾರದು. ವಾರದಲ್ಲಿ ಎರಡು ಬಾರಿ ತುಟಿಗೆ ಏನೂ ಹಚ್ಚಬೇಡಿ. ದಿನಾ ಲಿಪ್‌ಸ್ಟಿಕ್‌ ಹಚ್ಚುವವರಿಗೆ ಒಂದು ದಿನ ಹಚ್ಚದೆ ಇದ್ದರೆ ಏನೋ ಒಂದು ರೀತಿಯ ಸಮಾಧಾನವಿರುವುದಿಲ್ಲ. ಅಂತವರು ಲಿಪ್‌ಗ್ಲೋಸ್ ಹಚ್ಚಿ. ದಿನಕ್ಕೆ ಎರಡು ಬಾರಿಗಿಂತ ಹೆಚ್ಚು ಲಿಪ್‌ಸ್ಟಿಕ್‌ ಹಚ್ಚಬೇಡಿ. ಲಿಪ್‌ಸ್ಟಿಕ್‌ ಹಚ್ಚುವ ಮುನ್ನ ಲಿಪ್‌ಬಾಮ್‌ ಹಚ್ಚಿ.

ತುಟಿ ಸುಂದರವಾಗಿ ಕಾಣಲೆಂದು ಸಿಕ್ಕಾಪಟ್ಟೆ ಲಿಪ್ಸ್ಟಿಕ್ ಹಚ್ಚಿಕೊಳ್ಳುವಾಗ ಎಚ್ಚರವಿರಲಿ. ಲಿಪ್ಸ್ಟಿಕ್ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ವರದಿಯೊಂದು ಹೊರಬಿದ್ದಿದೆ. ಇತ್ತೀಚೆಗೆ ನಡೆದ ಅಧ್ಯಯನವೊಂದರ ಪ್ರಕಾರ, ಲಿಪ್ಸ್ಟಿಕ್ ಬಳಸುವ ಮಹಿಳೆಯರು ಮಾನಸಿಕ ಸಮಸ್ಯೆಗಳಿಂದ ಬಳಲುತ್ತಾರಂತೆ. ಹುಚ್ಚು ಹಿಡಿಯುವ ಸಾಧ್ಯತೆ ಕೂಡ ಹೆಚ್ಚಿರುತ್ತದೆಯಂತೆ. ಅಧ್ಯಯನದ ಪ್ರಕಾರ ಲಿಪ್ಸ್ಟಿಕ್ ಮೆದುಳು, ನಡವಳಿಕೆ ಹಾಗೂ ಕಲಿಕೆ ಮೇಲೆ ಪರಿಣಾಮ ಬೀರಲಿದೆಯಂತೆ. ಅಮೆರಿಕಾ ಪತ್ರಿಕೆಯೊಂದು 22 ಲಿಪ್ಸ್ಟಿಕ್ ಕಂಪನಿಗಳ ಅಧ್ಯಯನ ನಡೆಸಿದ. ಶೇಕಡಾ 55  ಲಿಪ್ಸ್ಟಿಕ್ ಕಂಪನಿಗಳು ವಿಷ ಪದಾರ್ಥವನ್ನು ಲಿಪ್ಸ್ಟಿಕ್ ಜೊತೆ ಬೆರೆಸುತ್ತಿವೆ. ಅಧ್ಯಯನದ ಪ್ರಕಾರ ಲಿಪ್ಸ್ಟಿಕ್ ನಲ್ಲಿರುವ ಸ್ವಲ್ಪ ಪ್ರಮಾಣದ ವಿಷಯುಕ್ತ ಅಂಶ ದೇಹ ಸೇರಿದ್ರೂ ಆರೋಗ್ಯ ಸಮಸ್ಯೆ ಎದುರಾಗುತ್ತದೆಯಂತೆ.

 

Facebook Comments