ಫೋಷಕರ ವಿರೋಧ : ಪೊಲೀಸರ ರಕ್ಷಣೆಯಲ್ಲಿ ಪ್ರೇಮಿಗಳ ಮದುವೆ

ಈ ಸುದ್ದಿಯನ್ನು ಶೇರ್ ಮಾಡಿ

loveಕುಣಿಗಲ್, ಡಿ.7-ಮದುವೆಗೆ ಫೋಷಕರು ಒಪ್ಪದ ಕಾರಣ ಪ್ರೇಮಿಗಳಿಬ್ಬರು ಪೊಲೀಸರ ರಕ್ಷಣೆಯೊಂದಿಗೆ ವಿವಾಹವಾಗಿರುವ ಪ್ರಸಂಗ ನಡೆದಿದೆ. ಮಾಗಡಿಯ ನಾಗೇಂದ್ರ ಪ್ರಸಾದ್ ಮತ್ತು ರೇಖಾ ಇಬ್ಬರು ಕಳದ ಮೂರು ವರ್ಷಗಳಿಂದ ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಮದುವೆಗೆ ರೇಖಾ ಫೋಷಕರು ವಿರೋಧ ವ್ಯಕ್ತಪಡಿಸಿದ್ದರು.

ಈ ಹಿನ್ನೆಲೆಯಲ್ಲಿ ನಿನ್ನೆ ನಾಗೇಂದ್ರ ಪ್ರಸಾದ್ ಮತ್ತು ರೇಖಾ ಮನೆಬಿಟ್ಟು ಬಂದು ಎಡೆಯೂರು ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿವಾಹವಾಗಲು ಬಂದಿದ್ದಾರೆ. ವಿಷಯ ತಿಳಿದ ರೇಖಾ ಫೋಷಕರು ಮತ್ತು ಸಂಬಂಧಿಕರು ಸ್ಥಳಕ್ಕೆ ಆಗಮಿಸಿದ್ದಾರೆ. ಫೋಷಕರು ಬಂದಿರುವ ಸುದ್ದಿ ತಿಳಿದು ಪ್ರೇಮಿಗಳು ಅಲ್ಲಿಂದ ರಕ್ಷಣೆ ನೀಡುವಂತೆ ಪಟ್ಟಣ ಪೊಲೀಸ್ ಠಾಣೆಗೆ ತೆರಳಿದ್ದಾರೆ.

ಪಿಎಸ್‍ಐ ಪುಟ್ಟೇಗೌಡರು ಕಾನೂನಾತ್ಮಕವಾಗಿ ವಿವಾಹ ನಡೆಸಲು ಉಪನೋಂದಣಾಧಿಕಾರಿ ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ. ನಾಗೇಂದ್ರ ಪ್ರಸಾದ್ ಅವರ ತಂದೆ ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಯಾಗಿದ್ದು, ವಿಷಯ ತಿಳಿದ ಪಂಚಾಯ್ತಿ ಪಿಡಿಒಗಳು, ತಾಲೂಕು ಪಂಚಾಯ್ತಿ ಅಧ್ಯಕ್ಷರು, ಸದಸ್ಯರು, ಕೆಲವು ಸಂಘಟನೆಯವರ ಸಮ್ಮುಖದಲ್ಲಿ ಪ್ರೇಮಿಗಳಿಗೆ ವಿವಾಹ ನೆರವೇರಿಸಲಾಯಿತು.

Facebook Comments