ವೇದಿಕೆಯಲ್ಲೇ ಹಠಾತ್ ಕುಸಿದು ಬಿದ್ದ ಗಡ್ಕರಿ..!

ಈ ಸುದ್ದಿಯನ್ನು ಶೇರ್ ಮಾಡಿ

Nitin--01

ಅಹಮದ್‍ನಗರ(ಮಹಾರಾಷ್ಟ್ರ) ಡಿ.7- ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಕೇಂದ್ರ ಹೆದ್ದಾರಿ ಮತ್ತು ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಹಠಾತ್ ಕುಸಿದು ಬಿದ್ದ ಘಟನೆ ಮಹಾರಾಷ್ಟ್ರದ ಅಹಮದ್‍ನಗರದಲ್ಲಿ ಇಂದು ಮಧ್ಯಾಹ್ನ ನಡೆದಿದೆ.

ವೇದಿಕೆ ಮೇಲಿದ್ದ ಗಡ್ಕರಿ ಕಾರ್ಯಕ್ರಮದ ವೇಳೆ ತೀವ್ರ ನಿತ್ರಾಣಗೊಂಡರು. ಅವರ ಕಣ್ಣಿಗೆ ಮಂಜು ಕವಿದಂತಾಗಿ ಹಠಾತ್ ಕುಸಿದು ಬಿದ್ದರು. ಪಕ್ಕದಲ್ಲಿದ್ದ ಭದ್ರತಾ ಸಿಬ್ಬಂದಿ ಅವರ ನೆರವಿಗೆ ಧಾವಿಸಿ ಉಪಚರಿಸಿದರು.  ರಕ್ತದಲ್ಲಿನ ಸಕ್ಕರೆ ಅಂಶ ಹಠಾತ್ ಇಳಿಮುಖ (ಲೋ ಶುಗರ್) ವಾದ ಕಾರಣ ಅವರು ನಿತ್ರಾಣಗೊಂಡರು. ಅವರಿಗೆ ಸೂಕ್ತ ಉಪಚಾರ ನಡೆಸಿದ ನಂತರ ಸಚಿವರು ಚೇತರಿಸಿಕೊಂಡರು.

Facebook Comments

Sri Raghav

Admin