ಅಪ್ರಾಪ್ತೆಯರಿಗೆ ಕೃತಕ ಹಾರ್ಮೊನ್ ನೀಡಿ ವಯಸ್ಕರನ್ನಾಗಿಸುವವರ ವಿರುದ್ಧ ಫೋಕ್ಸೋ ಕಾಯ್ದೆ

ಈ ಸುದ್ದಿಯನ್ನು ಶೇರ್ ಮಾಡಿ

pocsoನವದೆಹಲಿ,ಡಿ.7-ಅಪ್ರಾಪ್ತ ಹೆಣ್ಣುಮಕ್ಕಳನ್ನು ಶೀಘ್ರವೇ ವಯಸ್ಕರನ್ನಾಗಿ ಮಾಡುವ ರಾಸಾಯನಿಕ ಅಥವಾ ಹಾರ್ಮೋನುಗಳನ್ನು ಇನ್‍ಜೆಕ್ಟ್ ಮಾಡುವುದನ್ನು ಸಹ ಫೋಕ್ಸೋ ಕಾಯ್ದೆಯಡಿ ತರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ಸಂರಕ್ಷಿಸುವ ಕಾಯ್ದೆ- 2012ರ ಸೆಕ್ಷನ್ 9ರಡಿ ಇದನ್ನು ಅಪರಾಧ ಕೃತ್ಯವಾಗಿ ಪರಿಗಣಿಸುವ ಪ್ರಸ್ತಾವವನ್ನು ಮುಂದಿಟ್ಟಿದೆ.

ಮಕ್ಕಳನ್ನು ಒಳಗೊಂಡ ಅಶ್ಲೀಲ ಸಾಮಗ್ರಿಗಳನ್ನು ಹೊಂದಿದ ವ್ಯಕ್ತಿಗಳ ಮೇಲೆ ಕಟ್ಟುನಿಟ್ಟಿನ ಕಾನೂನು ಕ್ರಮಗಳನ್ನು ಕೈಗೊಳ್ಳುವ ಬಗ್ಗೆಯೂ ಸಚಿವಾಲಯ ಪ್ರಸ್ತಾವ ಸಲ್ಲಿಸಿದೆ. ಇಂಥ ಅಶ್ಲೀಲ ಸಾಮಗ್ರಿಗಳನ್ನು ಸಮಾಜ ಮಾಧ್ಯಮ ಮತ್ತು ವಾಟ್ಸಪ್‍ಗಳಲ್ಲಿ ಪ್ರಸಾರ ಮಾಡುವುದನ್ನೂ ಶಿಕ್ಷಾರ್ಹ ಅಪರಾಧವಾಗಿ ಪರಿಗಣಿಸಲು ಉದ್ದೇಶಿಸಲಾಗಿದೆ.

ಅಪ್ರಾಪ್ತ ಹೆಣ್ಣುಮಕ್ಕಳನ್ನು ಅಶ್ಲೀಲ ಚಟುವಟಿಕೆಗಳಲ್ಲಿ ಬಳಸಿಕೊಳ್ಳುವುದು, ಅಂತಹ ವಿಡಿಯೋಗಳನ್ನು ಸಾಮಾಜಿಕ ಜಲತಾಣದಲ್ಲಿ ಹರಿಬಿಡುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಇಂತಹ ಅಪರಾಧ ಎಸಗುವವರಿಗೆ 5ರಿಂದ 7 ವರ್ಷಗಳವರೆಗೆ ಜೈಲು ವಾಸ ಹಾಗೂ ದಂಡ ವಿಧಿಸಲಾಗುತ್ತದೆ. ಫೋಕ್ಸೋ ಕಾಯ್ದೆಗೆ ತರಲಾಗುತ್ತಿರುವ ಈ ತಿದ್ದುಪಡಿಯು ಕಾನೂನು ಸಚಿವಾಲಯದಿಂದ ಅಂಗೀಕಾರಗೊಳ್ಳಲಿದ್ದು, ಆ ನಂತರ ಪ್ರಸ್ತಾವನೆಯನ್ನು ಕ್ಯಾಬಿನೆಟ್‍ಗೆ ಕಳುಹಿಸಲಾಗುತ್ತದೆ.

ಪೊಕ್ಸೊ ಕಾಯ್ದೆಗೆ ತಿದ್ದುಪಡಿ ತರುವ ಪ್ರಸ್ತಾವ ಇದೀಗ ಕಾನೂನು ಸಚಿವಾಲಯದ ಮುಂದಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಮೇನಕಾ ಗಾಂಧಿ ಇದಕ್ಕೆ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.ಹನ್ನೆರಡು ವರ್ಷಗಳಿಗಿಂತ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ವ್ಯಕ್ತಿಗಳಿಗೆ ಮರಣ ದಂಡನೆ ವಿಧಿಸುವ ಅಪರಾಧ ಕಾನೂನು(ತಿದ್ದುಪಡಿ) ಕಾಯ್ದೆ- 2018ಕ್ಕೆ ಕೂಡ ತಿದ್ದುಪಡಿ ತಂದು, ಗಂಡುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುವುದನ್ನೂ ಕಾಯ್ದೆ ವ್ಯಾಪ್ತಿಗೆ ತರಲು ಉದ್ದೇಶಿಸಲಾಗಿದೆ.

Facebook Comments