ಇಂದಿನ ಪಂಚಾಗ ಮತ್ತು ರಾಶಿಫಲ (07-12-2018-ಶುಕ್ರವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಭೂಮಿಯಲ್ಲಿ ಸರ್ವಶ್ರೇಷ್ಠವಾದ ವಸ್ತುಗಳು ಕೇವಲ ಮೂರೇ ಇವೆ. ಜಲ, ಆಹಾರ ಮತ್ತು ಒಳ್ಳೆಯ ಮಾತು. ಆದರೆ ಮೂರ್ಖರು ಕಲ್ಲಿನ ಚೂರುಗಳನ್ನು ರತ್ನ ಅಥವಾ ಶ್ರೇಷ್ಠ ವಸ್ತು ಎಂದು ಕರೆಯುವುದು ವಿಷಾದಕರ

-ಸುಭಾಷಿತರತ್ನ ಭಾಂಡಾಗಾರ

Horoscope--01

# ಪಂಚಾಂಗ : ಶುಕ್ರವಾರ, 07.12.2018
ಸೂರ್ಯ ಉದಯ ಬೆ.06.29 / ಸೂರ್ಯ ಅಸ್ತ ಸಂ.05.53
ಚಂದ್ರ ಉದಯ ನಾ.ಬೆ.06.17/ ಚಂದ್ರ ಅಸ್ತ ಬೆ.6.04
ವಿಲಂಬಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಕಾರ್ತಿಕ ಮಾಸ
ಕೃಷ್ಣ ಪಕ್ಷ / ತಿಥಿ : ಅಮಾವಾಸ್ಯೆ (ಮ.12.50)
ನಕ್ಷತ್ರ: ಜೇಷ್ಠಾ (ನಾ.ಬೆ.6.06)/ ಯೋಗ: ಧೃತಿ (ರಾ.9.05)
ಕರಣ: ನಾಗವಾನ್-ಕಿಂಸ್ಥುಘ್ನ (ಮ.12.50-ರಾ.1.21)
ಮಳೆ ನಕ್ಷತ್ರ: ಜ್ಯೇಷ್ಠಾ  / ಮಾಸ: ವೃಶ್ಚಿಕ / ತೇದಿ: 22

Rashi

# ರಾಶಿ ಭವಿಷ್ಯ
ಮೇಷ: ನೀವು ನೀಡುವ ಸಲಹೆಯು ಸೂಕ್ತ ವಾದುದೆಂದು ಮೊದಲು ಪರಿಗಣಿಸಿ.
ವೃಷಭ: ನಿಮ್ಮ ಗೌರವ ಹೆಚ್ಚಾಗುವುದು.
ಮಿಥುನ: ವಿನಾಕಾರಣ ಕ್ಯಾತೆ ತೆಗೆಯುವ ಸಹೋದ್ಯೋಗಿಗಳ ಬಗ್ಗೆ ಎಚ್ಚರವಿರಲಿ.
ಕಟಕ: ಅನ್ಯರ ಕುಹಕ ಮಾತುಗಳಿಗೆ ಕಿವಿಗೊಡದೆ ್ಮ ಕಾರ್ಯದಲ್ಲಿ ತಲ್ಲೀನರಾಗಿ. ಯಶಸ್ಸು ನಿಮ್ಮದಾಗುವುದು.
ಸಿಂಹ: ದೈವದ ಮೊರೆ ಹೋಗಿ. ಮನಸ್ಸಿನ ದುಗುಡಗಳು ಕಡಿಮೆ ಆಗುವುದು.
ಕನ್ಯಾ: ಹಣಕಾಸಿನ ಪರಿಸ್ಥಿತಿ ಸುಧಾರಣೆಯಾಗಲಿದೆ.
ತುಲಾ: ಮಕ್ಕಳ ವಿಚಾರದಲ್ಲಿ ಹರ್ಷದಾಯಕ ಮತ್ತು ಹೆಮ್ಮೆ ಪಡುವಂತಹ ವಿಚಾರಗಳು ಕೇಳಲಿದ್ದೀರಿ.
ವೃಶ್ಚಿಕ: ಉದಾಸೀನತೆಯೇ ಅಧೋಗತಿಗೆ ಮೂಲ.
ಧನುಸ್ಸು: ಕೆಲಸಕಾರ್ಯಗಳಲ್ಲಿ ಉತ್ಸಾಹದಿಂದ ತೊಡಗಿಸಿಕೊಂಡರೆ ಕಾರ್ಯಸಿದ್ದಿ
ಮಕರ: ಹಿರಿಯರ ಮಾತು ಕೇಳಿ ಮುನ್ನಡೆಯಿರಿ.
ಕುಂಬ: ನಿಮ್ಮ ವಿರೋಧಿಗಳನ್ನು ಮಟ್ಟಹಾಕಲು ಸೂಕ್ತ ಕ್ರಮ ಕೈಗೊಳ್ಳುವುದು ಒಳಿತು.
ಮೀನಾ: ಕೆಲಸದ ಸ್ಥಳದಲ್ಲಿ ಹೊಸ ಸಮಸ್ಯೆ ತಲೆದೋರುವ ಸಾಧ್ಯತೆ.

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments