ನೀವು ಬಳಸುವ ಇಯರ್ ಫೋನ್ ಏಷ್ಟು ಸೇಫ್..?

ಈ ಸುದ್ದಿಯನ್ನು ಶೇರ್ ಮಾಡಿ

Ear-phonbe--01

ಎಲೆಕ್ಟ್ರಾನಿಕ್ಸ್ ನಲ್ಲಿಯ ಕ್ರಾಂತಿಯ ಪ್ರತಿಫಲವಾಗಿ, ಇಂದು ಪ್ರತಿಯೊಬ್ಬನ ಕೈಯಲ್ಲಿ ಮೊಬೈಲ್ ಫೋನಗಳು, ಐಪಾಡಗಳು, ಹಾಗೂ MP3 ಪ್ಲೇಯೇರ್ ಗಳನ್ನು ನಾವು ಕಾಣಬಹುದು. ಈ ವೈಯಕ್ತಿಕ ಗ್ಯಾಡಜೆಟ್ ಗಳಲ್ಲಿನ ಹಾಡುಗಳನ್ನು ಕೇಳಲು, ಜನರು ಹೆಡ್ ಫೋನ್ ಅಥವಾ ಇಯರ್ ಫೋನ್ ಗಳನ್ನು ಬಳಸುತ್ತಾರೆ. ಕಿರಿಯರಲ್ಲದೆ ಹಿರಿಯರಲ್ಲೂ  ಕೂಡ ಇಂದು ಹೆಡ್ ಫೋನ್ ನ ಬಳಕೆ ಅತಿಯಾಗಿದೆ.

ಕೆಲವರು ಹೆಡ್ ಫೋನ್ ಗಳನ್ನು ಮೊಬೈಲ್ ಕಾಲ್ ರಿಸೀವ್ ಮಾಡಲು ಬಳಸಿದರೆ, ಬಹುತೇಕ ಜನ ಇದನ್ನು ಮ್ಯೂಸಿಕ್ ಹಾಗೂ ಚಿತ್ರಗೀತೆಗಳನ್ನು ಕೇಳಲು ಬಳಸುತ್ತಾರೆ. ಇತ್ತೀಚಿನ ದಿನಗಳಲ್ಲಿ, ಯುವಕ-ಯುವತಿಯರ ಕಿವಿಯಲ್ಲಿ ಇಯರ್ ಫೋನ್ ಇರುವದು ಒಂದು ಸಾಮಾನ್ಯ ದೃಶ್ಯ, ಅದರಲ್ಲೂ ಕಾಲೇಜ್ ಹುಡುಗಿಯರಲ್ಲಿ ಇಯರ್ ಫೋನ್ ಕೂಡ ಒಂದು ಅವಶ್ಯಕ ಆಭರಣವಾಗಿ ಪರಿಣಮಿಸಿದೆ. ಸಾಮಾನ್ಯವಾಗಿ, ಬಸ್ ಗಳಲ್ಲಿ  ಕಾಲೇಜ್ ಯುವಕ-ಯುವತಿಯರು ಹೆಡ್ ಫೋನ್ ನನ್ನು  ಕಿವಿಗೆ ತಗಲ್ಲಕೊಂಡು ಉಚ್ಚಸ್ವರದ ಹಾಡುಗಳನ್ನು ಗಂಟೆಗಟ್ಟಲೆ ಕೇಳುವ ಅಭ್ಯಾಸ ಹೆಚ್ಚಾಗಿ ಕಂಡುಬರುತ್ತಿದೆ.

ಹೀಗೆ ಇಯರ್ ಫೋನ್ ಬಳಸಿ, ಮ್ಯೂಸಿಕ್ ಕೇಳುವದರಿಂದ ನಾವು ಕಿವಿಯ ಶಬ್ದ ಗ್ರಹಣ ಶಕ್ತಿ ಯನ್ನು  ಕಳೆದು ಕೊಳ್ಳುತ್ತಿದ್ದೇವೆ ಅನ್ನುವ ಅರಿವು ಯುವಜನಾಂಗಕ್ಕಲ್ಲದೆ, ಪಾಲಕರಲ್ಲೂ ಇಲ್ಲಾ. ಹೌದು, ಇತ್ತೀಚಿನ ಸಂಶೋಧನೆ ಗಳಿಂದ ತಿಳಿದು ಬಂದ ಸಂಗತಿ ಏನೆಂದರೆ, ಗಂಟೆಗಟ್ಟಲೆ ಇಯರ್  ಫೋನ್ ಬಳಸಿ ಸಂಗೀತ ಕೇಳುವದರಿಂದ ನಮ್ಮ ಶ್ರವಣ ಶಕ್ತಿ ಕುಂಠಿತಗೊಳ್ಳುತ್ತದೆ.

# ಮ್ಯೂಸಿಕ್ ಕೇಳುತ್ತಾ ನಿದ್ರಿಸುತ್ತೀರಾ..? 
ಸಾಮಾನ್ಯವಾಗಿ ಸಂಗೀತ ಆಲಿಸುವುದು ಉತ್ತಮ ಹವ್ಯಾಸವೆಂದೇ ನಾವು ಅಂದುಕೊಂಡಿದ್ದೇವೆ. ಆದರೆ ಕಿವಿಗೆ ಇಯರ್ ಫೋನ್ ಹಾಕಿಕೊಂಡು ಸಂಗೀತ ಕೇಳುತ್ತಾ ನಿದ್ರಿಸುವುದು ಖಂಡಿತಾ ಆರೋಗ್ಯಕರ ಲಕ್ಷಣವಲ್ಲ.  ನಮ್ಮ ದೇಹ ಸಹಜವಾಗಿಯೇ ನಿದ್ರೆಯ ಲೋಕಕ್ಕೆ ಕರೆದೊಯ್ಯುವ ವ್ಯವಸ್ಥೆ ಮಾಡಿಕೊಂಡಿರುತ್ತದೆ. ನಿದ್ರೆ ಬರುತ್ತಿಲ್ಲವೆಂದು ಕಿವಿಗೆ ಇಯರ್ ಫೋನ್ ಸಿಕ್ಕಿಸಿಕೊಂಡು ಸಂಗೀತ ಕೇಳುವುದರಿಂದ ಕೃತಕ ವ್ಯವಸ್ಥೆಯೊಂದಕ್ಕೆ ದೇಹವನ್ನು ಹೊಂದಿಸಿಕೊಂಡಂತಾಗುತ್ತದೆ. ಅಷ್ಟೇ ಅಲ್ಲದೆ, ಸಂಗೀತ ಕೇಳುವಾಗ ನಮ್ಮ ಮೆದುಳು ಜಾಗೃತವಾಗಿಯೇ ಇರುತ್ತದೆ. ಇದರಿಂದ ಮೆದುಳಿಗೂ ವಿಶ್ರಾಂತಿ ಇಲ್ಲದಾಗುತ್ತದೆ. ಹೀಗಾಗಿ ಮಲಗುವಾಗ ಕಿವಿಗೆ ಇಯರ್ ಫೋನ್ ಹಾಕಿಕೊಂಡು ಸಂಗೀತ ಕೇಳುವುದನ್ನು ಕಡಿಮೆ ಮಾಡಿ.

Facebook Comments