ಇಂದಿರಾ ಕ್ಯಾಂಟಿನ್‍ಗೆ ಮುಗಿಬಿದ್ದ ಜನ

ಈ ಸುದ್ದಿಯನ್ನು ಶೇರ್ ಮಾಡಿ
Indira Cantin
File Image

ಕಡೂರು, ಡಿ.8- ಪಟ್ಟಣದ ಕೆಎಲ್‍ವಿ ವೃತ್ತದಲ್ಲಿ ನೂತನವಾಗಿ ಆರಂಭಗೊಂಡ ಇಂದಿರಾ ಕ್ಯಾಂಟಿನ್ ಬಾಗಿಲು ತೆರೆಯುತ್ತಿದ್ದಂತೆ ಜನ ತಾಮುಂದು ನಾಮುಂದು ಎಂದು ನೂಕು ನುಗ್ಗಿಲಿನಲ್ಲಿ ಟೋಕನ್ ಪಡೆಯಲು ಮುಂದಾದರು. ಅತಿಕಡಿಮೆ ದರದಲ್ಲಿ ಗುಣಮಟ್ಟದ ಆಹಾರ ನೀಡುವ ಉದ್ದೇಶದಿಂದ ಜಾರಿಗೊಳಿಸಿರುವ ಯೋಜನೆಯಂತೆ ಆರಂಭಗೊಂಡಿರುವ ಇಂದಿರಾ ಕ್ಯಾಂಟಿನ್‍ನಲ್ಲಿ ಮೊದಲ ದಿನವಾದ ನಿನ್ನೆ ಬೆಳಿಗ್ಗೆ ಜನವೋ ಜನ. ಬಡವರು, ಶ್ರೀಮಂತರು ಸರ್ಕಾರಿ ನೌಕರರ ಶಿಕ್ಷಕರು, ವಕೀಲರು, ಪೊಲೀಸರು, ಪುರಸಭೆ ಸಿಬ್ಬಂದಿಗಳು ಎಂಬ ತಾರತಮ್ಯ ಇಲ್ಲದೆ ಎಲ್ಲರೂ ತಿಂಡಿಯನ್ನು ಸವಿದರು.

ಸರ್ಕಾರದ ನಿಯಾಮಾನುಸಾರ ಬೆಳಿಗ್ಗೆ ತಿಂಡಿ 300 ಜನರಿಗೆ ಮಾತ್ರ ಬಂದಿತ್ತು. ಅದು ಕೇವಲ ಅರ್ಧಗಂಟೆಯಲ್ಲಿ ಖಾಲಿಯಾಗಿದ್ದರಿಂದ ಹಲವರು ನಿರಾಸೆಗೊಂಡು ವಾಪಾಸ್ ಆಗುತ್ತಿದ್ದರು. ಮಧ್ಯಾಹ್ನ ಒಂದು ಗಂಟೆ ಸಮಯದಲ್ಲಿ 300 ಜನರಿಗೆ ಊಟದ ಟೋಕನ್ ನೀಡಲಾಯಿತು. ಇದು ಸಹ ಕೇವಲ ಅರ್ಧಗಂಟೆಯಲ್ಲಿ ಮುಗಿದು ಹೋಯಿತು. ರಾತ್ರಿಯೂ ಇದೇ ರೀತಿ ಮುಂದುವರೆದ ಹಿನ್ನಲೆಯಲ್ಲಿ ಕೆಲವರು ನಿರಾಸೆಯಿಂದ ವಾಪಾಸ್ ಆದರು.

ಕೆ.ಎಲ್.ವಿ. ವೃತ್ತದಲ್ಲಿ ಕ್ಯಾಂಟಿನ್ ನಡೆಸುತ್ತಿರುವ ಮರುಗುದ್ದಿ ಮನು ತಿಂಡಿ ತಿಂದ ನಂತರ ಸರ್ ತುಂಬಾಚೆನ್ನಾಗಿದೆ. ಗುಣಮಟ್ಟದ ಆಹಾರ ಇಲ್ಲಿ ದೊರಕುತ್ತಿದೆ. ಬಡವ ಶ್ರೀಮಂತ ಎಂಬ ಬೇಧಬಾವ ವಿಲ್ಲದೆ ಜನ ಸವಿಯಬಹುದು. ಇದು ಸಿದ್ದರಾಮಯ್ಯನವರ ಯೋಜನೆ ಬಡವರ ಪರವಾಗಿದೆ ಎಂದರು. ಪತ್ರಿಕೆ ಹಂಚುವ ಹುಡುಗ: ಮಲ್ಲೇಶ್ವರದ ಅಭಿಷೇಕ್, ನಾವುಗಳು ಪತ್ರಿಕೆ ಹಂಚಲು ಬೆಳಿಗ್ಗೆ 5 ಗಂಟೆಗೆ ಎದ್ದು ಮನೆಮನೆಗೆ ತಲುಪಿಸುತ್ತೇವೆ. ಹೊಟ್ಟೆ ಚುರು ಚುರು ಎನ್ನುತ್ತಿರುತ್ತದೆ. ಕೇವಲ 10 ರೂ.ಗೆ ತಿಂಡಿ ತಿಂದು ಮನೆಗೆ ಸಂತೃಪ್ತಿಯಿಂದ ಹೋಗಬಹುದಾಗಿದೆ ಎನ್ನುತ್ತಾರೆ.

ಶಾಸಕ ಬೆಳ್ಳಿಪ್ರಕಾಶ್ ಇಂದಿರಾ ಕ್ಯಾಂಟಿನ್ ಬಗ್ಗೆ ಮಾತನಾಡಿ, ಹಿಂದಿನ ಸರ್ಕಾರ ಬಡಜನತೆಗಾಗಿ ರೂಪಿಸಿರುವ ಕಾರ್ಯಕ್ರಮವಾಗಿದ್ದು. 2017ರ ಆಗಸ್ಟ್ 15ರಂದು ಪ್ರಾಯೋಗಿಕವಾಗಿ ಬೆಂಗಳೂರಿನಲ್ಲಿ ಇಂದಿರಾಕ್ಯಾಂಟಿನ್ ಆರಂಭಿಸಲಾಗಿತ್ತು. ಈ ಯೋಜನೆಯನ್ನು ತಾಲೂಕು ಕೇಂದ್ರಗಳಿಗೂ ವಿಸ್ತರಿಸಿರುವುದು ಹೆಚ್ಚು ಅನುಕೂಲವಾಗಿದೆ.

Facebook Comments