ಸರ್ಜಿಕಲ್ ಸ್ಟ್ರೈಕ್‍ಗೆ ಅತಿಯಾದ ಪ್ರಚಾರ ಬೇಡ : ನಿವೃತ್ತ ಸೇನಾಧಿಕಾರಿ

ಈ ಸುದ್ದಿಯನ್ನು ಶೇರ್ ಮಾಡಿ

Surgical-Strike

ಚಂಡೀಗಢ, ಡಿ.8-ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿಯಿದ್ದ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ನಡೆಸಿದ್ದ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಅತಿಯಾದ ಪ್ರಚಾರ ಅಗತ್ಯವಿರಲಿಲ್ಲ ಎಂದು ನಿವೃತ್ತ ಸೇನಾಧಿಕಾರಿ ಡಿ.ಎಸ್.ಹೂಡಾ ಹೇಳಿದ್ದಾರೆ.

ನಿನ್ನೆ ನಡೆದ ಸೇನಾ ಸಾಹಿತ್ಯ ಉತ್ಸವ 2018ರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸೇನೆ ನಡೆಸಿದ್ದ ಸೀಮಿತ ದಾಳಿ ಬಗ್ಗೆ ಅತಿಯಾದ ಪ್ರಚಾರ ನಡೆಸಲಾಯಿತು ಎಂದು ನನಗೂ ಅನಿಸಿತ್ತು. ಸೇನಾ ಕಾರ್ಯಾಚರಣೆ ಅತ್ಯಂತ ಮುಖ್ಯವಾದದ್ದು. ಅದನ್ನು ನಾವು ಮಾಡಲೇಬೇಕು. ಅದನ್ನು ಇದೀಗ ಎಷ್ಟರಮಟ್ಟಿಗೆ ರಾಜಕೀಯ ಮಾಡಲಾಗಿದೆ. ಅದು ಒಳ್ಳೆಯದೋ ಅಥವಾ ಕೆಟ್ಟದೋ ಅದನ್ನು ರಾಜಕೀಯ ನಾಯಕರನ್ನು ಕೇಳಬೇಕು ಎಂದು ಹೇಳಿದ್ದಾರೆ.

ಗಡಿ ನಿಯಂತ್ರಣ ರೇಖೆ ಬಳಿ ನಡೆಯುತ್ತಿರುವ ಬೆಳವಣಿಗೆಗಳನ್ನು ನೋಡಿದರೆ, ನಾವು ಸಾಕಷ್ಟು ಚತುರತೆಯಿಂದಿರಬೇಕು. ಭಯೋತ್ಪಾದನೆ, ಗಡಿಯಲ್ಲಿ ಅತಿಕ್ರಮಣ ಪ್ರವೇಶಗಳ ವಿರುದ್ದ ಪಾಕಿಸ್ತಾನ ಸೂಕ್ತ ಕ್ರಮಗಳನ್ನು ಕೈಗೊಳ್ಳದೇ ಹೋದಲ್ಲಿ, ನಿರೀಕ್ಷಿಸಲು ಸಾಧ್ಯವಾಗದಷ್ಟು ದಾಳಿ, ಪ್ರತಿದಾಳಿಗಳು ನಡೆಯುತ್ತವೆಂದು ತಿಳಿಸಿದ್ದಾರೆ.

Facebook Comments

Sri Raghav

Admin