ಕುತೂಹಲಘಟ್ಟದಲ್ಲಿ ಅಡಿಲೇಡ್ ಟೆಸ್ಟ್..!

ಈ ಸುದ್ದಿಯನ್ನು ಶೇರ್ ಮಾಡಿ

India--01

ಅಡಿಲೇಡ್, ಡಿ.9- ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಪಡೆ ಗೆಲ್ಲಲು ಇನ್ನೂ 6 ವಿಕೆಟ್‍ಗಳು ಬೇಕಾಗಿದ್ದು ಪಂದ್ಯವು ಕುತೂಹಲ ಘಟ್ಟದತ್ತ ತಲುಪಿದೆ. ಎರಡನೇ ಇನ್ನಿಂಗ್ಸ್  ಟೀಂ ಇಂಡಿಯಾ 307 ರನ್‍ಗಳಿಗೆ ಸರ್ವಪತನಗೊಳ್ಳುವ ಮೂಲಕ ಪೇನ್À ನಾಯಕತ್ವದ ಆಸೀಸ್‍ಗೆ ಗೆಲ್ಲಲು 323 ಬೃಹತ್ ಮೊತ್ತದ ಸವಾಲು ನೀಡಿತು.

ಈ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ಉತ್ತಮ ಆರಂಭ ಪಡೆಯಿತಾದರೂ 11 ರನ್ ಗಳಿಸಿದ್ದ ಆರೋನ್‍ಫಿಂಚ್ ರವಿಚಂದ್ರನ್ ಅಶ್ವಿನ್ ಬೌಲಿಂಗ್‍ನಲ್ಲಿ ಔಟಾಗುವ ಮೂಲಕ ಆಸೀಸ್ ತಂಡದ ಮೊದಲ ವಿಕೆಟ್ ಪತನವಾಯಿತು.

3 ಬೌಂಡರಿ ಬಾರಿಸುವ ಮೂಲಕ 26 ರನ್ ಗಳಿಸಿದ್ದ ಹ್ಯಾರಿಸ್‍ಗೆ ಮೊಹಮ್ಮದ್ ಶಮಿ ಪೆವಿಲಿಯನ್ ಹಾದಿ ತೋರಿಸಿದರೆ, ಉಸ್ಮಾನ್ ಕ್ವಾಜಾ 8 ರನ್ ಗಳಿಸಿ ಅಶ್ವಿನ್‍ಗೆ 2 ವಿಕೆಟ್ ರೂಪದಲ್ಲಿ ಬಲಿಯಾದರು. ಪೀಟರ್ ಹ್ಯಾಂಡ್ಸ್‍ಕೋಮ್ (14 ರನ್, 1 ಬೌಂಡರಿ) ಮೊಹಮ್ಮದ್ ಶಮಿಯ ಬೌಲಿಂಗ್‍ನಲ್ಲಿ ಚೇತೇಶ್ವರಪೂಜಾರ ಹಿಡಿದ ಅದ್ಭುತ ಕ್ಯಾಚಿನಿಂದ ಮೈದಾನವನ್ನು ತೊರೆದರು.

# ಕಾಡಿದ ಮಾರ್ಶ್- ಹೆಡ್:
ಭಾರತದ ಕರಾರುವಾಕ್ಕಾದ ಬೌಲಿಂಗ್‍ಗೆ ಆಸೀಸ್‍ನ ಆರಂಭಿಕ ಬ್ಯಾಟ್ಸ್‍ಮನ್‍ಗಳು ಬೃಹತ್ ಮೊತ್ತ ಗಳಿಸುವಲ್ಲಿ ಎಡವಿದ್ದರೂ ಸಂಕಷ್ಟದಲ್ಲಿದ್ದ ಆಸೀಸ್ ತಂಡಕ್ಕೆ ಶಾರ್ನ್ ಮಾರ್ಷ್ ಹಾಗೂ ಟ್ರಾವಿಸ್ ಹೆಡ್ ದಿಟ್ಟ ಹೋರಾಟ ಪ್ರದರ್ಶಿಸಿದರು.  ಟೆಸ್ಟ್‍ನ 4ನೆ ದಿನದಾಟದ ಅಂತ್ಯಕ್ಕೆ ಆಸೀಸ್ 4 ವಿಕೆಟ್‍ಗೆ 104 ರನ್ ಗಳಿಸಿದ್ದು ಶಾನ್‍ಮಾರ್ಷ್ (31 ರನ್,3 ಬೌಂಡರಿ), ಟ್ರಾವಿಸ್ ಹೆಡ್ (11 ರನ್,1) ಅಂತಿಮ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.   ಇದಕ್ಕೂ ಮುನ್ನ ಭಾರತ ತನ್ನ ಎರಡನೇ ಇನ್ನಿಂಗ್ಸ್‍ನಲ್ಲಿ ಚೇತೇಶ್ವರಪೂಜಾರ (71 ರನ್, 9 ಬೌಂಡರಿ), ಅಜೆಂಕ್ಯಾರಹಾನೆ (70 ರನ್, 7 ಬೌಂಡರಿ), ಕೆ.ಎಲ್.ರಾಹುಲ್ (44 ರನ್, 3 ಬೌಂಡರಿ, 1 ಸಿಕ್ಸರ್), ವಿರಾಟ್ ಕೊಹ್ಲಿ (34 ರನ್, 3 ಬೌಂಡರಿ) ಗಳ ನೆರವಿನಿಂದ 307 ರನ್ ಗಳಿಸಿತು. ಆಸ್ಟ್ರೇಲಿಯಾ ಪರ ಸ್ಪಿನ್ನರ್ ನ್ಯಾಥನ್ ಲಿಯೋನ್ 6 ವಿಕೆಟ್‍ಗಳನ್ನು ಕಬಳಿಸಿ ಯಶಸ್ವಿ ಬೌಲರ್ ಎಂದು ಗುರುತಿಸಿಕೊಂಡರೆ, ವೇಗಿ ಮಿಚಲ್ ಸ್ಟ್ರಾಕ್ 3 ವಿಕೆಟ್, ಹೇಜಲ್‍ವುಡ್ 1 ವಿಕೆಟ್ ಕೆಡವಿದರು.

India : 250 & 307
Australia : 235 & 104/4 *
Day 4: Australia require another 219 runs with 6 wickets remaining

Facebook Comments

Sri Raghav

Admin