ಅಂಬರೀಶ್ ನೆನೆದು ಭಾವುಕರಾದ ಯಶ್

ಈ ಸುದ್ದಿಯನ್ನು ಶೇರ್ ಮಾಡಿ

Yash-a-01

ಬೆಂಗಳೂರು, ಡಿ.9- ನಮ್ಮ ಮಗುವಿಗಾಗಿ ಅಂಬರೀಷ್ ಅಣ್ಣ ನೀಡಿರುವ ತೊಟ್ಟಿಲು ಒಂದು ವಿಶಿಷ್ಟ ಉಡುಗೊರೆಯಾಗಿದೆ. ಅವರ ಆತ್ಮೀಯತೆ, ಕಾಳಜಿ ನನಗೆ ಸಾಕಷ್ಟು ಸಂತಸ ತಂದಿದೆ ಎಂದು ಹೇಳುತ್ತಾ ನಟ ಯಶ್ ಭಾವುಕರಾದರು.

ಆಸ್ಪತ್ರೆಯಿಂದ ರಾಧಿಕಾ ಡಿಸ್ಚಾರ್ಜ್ ಆದ ಬಳಿಕ ಸುದ್ದಿಗೋಷ್ಠಿ ನಡೆಸಿದ ಅವರು, ಚಿತ್ರರಂಗದ ದಿಗ್ಗಜ ರಾಗಿದ್ದ ಅಂಬರೀಷ್ ಅಣ್ಣ ನನ್ನ ಮೇಲಿಟ್ಟಿರುವ ಪ್ರೀತಿಗೆ ಬೆಲೆ ಕಟ್ಟಲಾಗದು. ನನ್ನ ಮಗುವಿಗೂ ಪ್ರೀತಿಯ ಉಡುಗೊರೆಯಾಗಿ ಈ ತೊಟ್ಟಿಲು ಕೊಟ್ಟಿದ್ದಾರೆ. ಅವರ ಪ್ರೀತಿ-ವಿಶ್ವಾಸಕ್ಕೆ ಇದೇ ಸಾಕ್ಷಿ ಎಂದು ಕಣ್ಣೀರಿಟ್ಟರು.

ಆತ್ಮೀಯರಾಗಿದ್ದ ಅಣ್ಣ ನನ್ನ ಮಗುವಿಗೆ ಇಂತಹ ಉಡುಗೊರೆ ಕೊಟ್ಟಿದ್ದಾರೆ ಎಂಬುದು ಸುಮಲತಾ ಅವರು ದೂರವಾಣಿ ಮೂಲಕ ತಿಳಿಸಿದಾಗಲೇ ತಿಳಿದಿದ್ದು. ಒಂದು ಕ್ಷಣ ನಂಬಲಾರ ದಾದರೂ ಅವರ ಸ್ವಭಾವ, ಮಾತೃ ಹೃದಯ ತಿಳಿದಿದ್ದ ನನಗೆ ಅತೀವ ಸಂತೋಷವಾಯಿತು ಎಂದು ಹೇಳಿದರು.

ತಮ್ಮ ಪತ್ನಿ ರಾಧಿಕಾ ಮತ್ತು ಮಗಳು ಆರೋಗ್ಯವಾಗಿದ್ದಾರೆ. ಮಗಳಿಗೆ ಶೀಘ್ರದಲ್ಲೇ ನಾಮ ಕರಣ ಮಾಡಲಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಇಂದಿಗೆ ವಿವಾಹವಾಗಿ ಎರಡು ವರ್ಷವಾಗಿದ್ದು , ನನ್ನ ಮಗಳನ್ನು ಯಶ್‍ಗೆ ಉಡುಗೊರೆಯಾಗಿ ನೀಡುತ್ತಿದ್ದೇನೆ ಎಂದು ರಾಧಿಕಾ ಪಂಡಿತ್ ತಿಳಿಸಿದರು.

Facebook Comments

Sri Raghav

Admin