ಡಿ.30ರಂದು ಬೆಂಗಳೂರು ಬಂದ್..!?

ಈ ಸುದ್ದಿಯನ್ನು ಶೇರ್ ಮಾಡಿ

Vishnuvardhan--01

ಬೆಂಗಳೂರು, ಡಿ.9- ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ಕುರಿತು ಡಿ.24 ರೊಳಗೆ ತೀರ್ಮಾನ ತೆಗೆದುಕೊಳ್ಳ ದಿದ್ದರೆ ಡಿ.30ರಂದು ಬೆಂಗಳೂರು ಬಂದ್‍ಗೆ ಕರೆ ನೀಡಲಾಗುವುದು ಎಂದು ವಿಷ್ಣು ಅಭಿಮಾನಿಗಳು ಎಚ್ಚರಿಸಿದ್ದಾರೆ.

ಸ್ಮಾರಕ ನಿರ್ಮಾಣ ಸಂಬಂಧ ಇಂದು ಅಭಿಮಾನಿಗಳು ಭಾರತಿ ವಿಷ್ಣುವರ್ಧನ್ ಅವರ ಮನೆಯಲ್ಲಿ ಸಭೆ ಕೂಡ ನಡೆಸಿದ್ದು, ಸರ್ಕಾರ ಈ ಕುರಿತು ಸರಿಯಾದ ನಿರ್ಧಾರ ತೆಗೆದು ಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಅಭಿಮಾನ್ ಸ್ಟುಡಿಯೋದಲ್ಲಿರುವ ವಿಷ್ಣು ಪುಣ್ಯಭೂಮಿಯನ್ನು ಹಾಗೆಯೇ ಬಿಟ್ಟು ಅಲ್ಲಿಯೇ ಸ್ಮಾರಕ ನಿರ್ಮಾಣಕ್ಕೂ ಜಾಗ ಕೊಡಬೇಕು. ಇಲ್ಲವಾದರೆ ಮೈಸೂರಿನಲ್ಲಾದರೂ ಸ್ಮಾರಕಕ್ಕೆ ಜಾಗ ಕೊಡಬೇಕು ಎಂದು ಅಭಿಮಾನಿಗಳು ಆಗ್ರಹಿಸಿದ್ದಾರೆ.

ಇವೆರಡರ ಬಗ್ಗೆ ಯಾವುದೇ ತೀರ್ಮಾನವಾಗದಿದ್ದರೆ ಡಿ.30 ರಂದು ಬೆಂಗಳೂರು ಬಂದ್ ನಡೆಯುವುದು ಖಚಿತ ಎಂದು ಅಭಿಮಾನಿಗಳು ಖಡಕ್ಕಾಗಿ ಹೇಳಿ ದ್ದಾರೆ. ರಾಜ್ಯಾದ್ಯಂತ ವಿಷ್ಣು ಅಭಿ ಮಾನಿಗಳು ಇರುವುದರಿಂದ ಹೋರಾಟ ತೀವ್ರಗೊಳ್ಳುವ ಸಾಧ್ಯತೆಯಿದೆ.

Facebook Comments

Sri Raghav

Admin