ಬೆಂಗಳೂರು : ಪಾರ್ಟಿ ಮೂಡಲ್ಲಿದ್ದ ಮಹಿಳೆ ಬಾಲ್ಕನಿಯಿಂದ ಬಿದ್ದು ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Women-Falling

ಬೆಂಗಳೂರು, ಡಿ.9-ಸ್ನೇಹಿತರೊಂದಿಗೆ ಸೇರಿ ಪಾರ್ಟಿ ಮಾಡಿ ಮನೆಗೆ ಹಿಂದಿರುಗಿದ್ದ ಕೊಲಂಬಿಯಾದ ಮಹಿಳೆ ಬಾಲ್ಕನಿಯಿಂದ ಬಿದ್ದು ಮೃತಪಟ್ಟಿರುವ ಘಟನೆ ಜೆಬಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮುಂಜಾನೆ ಸಂಭವಿಸಿದೆ. ಮೂಲತಃ ಕೊಲಂಬಿಯಾ ಪ್ರಜೆಯಾದ ದ್ವಾನಿಯಾಲ ಕಾರನ್ (25) ಮೃತಪಟ್ಟಿರುವ ಮಹಿಳೆ.

ಹಳೆ ಏರ್ ಪೋರ್ಟ್ ರಸ್ತೆಯಲ್ಲಿನ ವೈಟ್ ಫ್ಲವರ್ ಹಾಲ್ ಅಪಾರ್ಟ್‍ಮೆಂಟ್‍ನ ಮೂರನೆ ಮಹಡಿಯಲ್ಲಿ ದ್ಯಾನಿಯಾಲ ಕಾರನ್ ವಾಸವಿದ್ದರು. ವೃತ್ತಿಯಲ್ಲಿ ಭಾಷಾಂತರಕಾರರಾಗಿದ್ದ ದ್ಯಾನಿಯಾಲ ಅವರು ರಾತ್ರಿ ವೈಟ್‍ಫೀಲ್ಡ್‍ನಲ್ಲಿ ಸ್ನೇಹಿತರೊಂದಿಗೆ ಸೇರಿ ಕ್ರಿಸ್‍ಮಸ್ ಪಾರ್ಟಿ ಮಾಡಿದ್ದಾರೆ.

ಬೆಳಗಿನ ಜಾವ 3 ಗಂಟೆಯಲ್ಲಿ ಮನೆಗೆ ಬಂದ ದ್ಯಾನಿಯಾಲ ಕಾರನ್ ಅವರು ನಾಲ್ಕನೆ ಮಹಡಿಯ ಬಾಲ್ಕನಿಗೆ ಹೋಗಿದ್ದಾಗ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದಾರೆ.  ಬಾಲ್ಕನಿಯಲ್ಲಿ ಬಟ್ಟೆ ತರಲು ಹೋಗಿದ್ದರಾ ಅಥವಾ ಬೇರೇನಾದರೂ ಕಾರಣಕ್ಕೆ ಹೋಗಿದ್ದರಾ ಎಂಬುದು ತಿಳಿದುಬಂದಿಲ್ಲ.

ಸುದ್ದಿ ತಿಳಿದ ಜೆಬಿ ನಗರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಮೃತದೇಹವನ್ನು ಬೌರಿಂಗ್ ಆಸ್ಪತ್ರೆಗೆ ಸಾಗಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin