ಚಿಕನ್ ಪ್ರಿಯರೇ ಹುಷಾರ್..!

ಈ ಸುದ್ದಿಯನ್ನು ಶೇರ್ ಮಾಡಿ

Chicken--01

ಮಾಂಸಹಾರಿಗಳಿಗೆ ಕೋಳಿಯ ಪದಾರ್ಥಗಳನ್ನು ತಿನ್ನುವುದು ಎಂದರೆ ಪಂಚ ಪ್ರಾಣ. ಕೋಳಿಯಿಂದ ತಯಾರಿಸಿದ ಯಾವುದೇ ಪದಾರ್ಥಗಳನ್ನು ಇಷ್ಟಪಡದೆ ಇರುವವರು ಇಲ್ಲವೆನ್ನಬಹುದು. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ರೀತಿಯ ಖಾದ್ಯಗಳು ಸಿಗುತ್ತದೆ. ಇದನ್ನು ಯಾವುದೇ ಚಿಂತೆಯಿಲ್ಲದೆ ನಾವು ತಿನ್ನುತ್ತೇವೆ. ಒಮ್ಮೆ ತಿಂದ ಮೇಲೆ ಮತ್ತೆ ಮತ್ತೆ ತಿನ್ನುವ ಆಸೆ ನಮಗೆ. ಕೆಲವು ಜನರು ಚಿಕನ್ ಹೊರಗಡೆ ಸೇವನೆ ಮಾಡಿದರೆ ಇನ್ನು ಕೆಲವರು ಕೋಳಿಯ ಮಾಂಸವನ್ನು ತಂದು ಮನೆಯಲ್ಲೇ ಬಗೆ ಬಗೆಯ ರುಚಿಕರ ತಿನಿಸು ಮಾಡಿಕೊಂಡು ತಿನ್ನುತ್ತಾರೆ. ನಮ್ಮ ದೇಶದಲ್ಲಿ ಪ್ರತಿ ನಿತ್ಯ ಕೋಟಿ ಗಟ್ಟಲೆ ಫಾರಂ ಕೋಳಿಗಳನ್ನು ಕೊಲ್ಲಲಾಗುತ್ತದೆ. ನಾಟಿ ಕೋಳಿ ಬೆಲೆ ದುಬಾರಿ ಮತ್ತು ಅದು ಸಿಟಿ ಕಡೆ ಕಡೆಯಲ್ಲಿ ಸಿಗುವುದು ಅಪರೊಪ ಆದ್ದರಿಂದಲೇ ಜನರು ಫಾರಂ ಕೊಳಿಗಳನ್ನೇ ತಿನ್ನುವ ಅನಿವಾರ್ಯ ಸ್ತಿತಿಗೆ ಬಂದಿದ್ದಾರೆ.

ಸೈರಾಯಿಡ್ ಇಂಜೆಕ್ಷನ್ ಕೊಟ್ಟಿರುವ ಕೋಳಿಗಗಳನ್ನು ತಿಂದರೆ ಆಗುವ ಅಡ್ಡಪರಿಣಾಮಗಳು  : 
# ಮಹಿಳೆಯರಿಗೆ ಗರ್ಭಕೋಶದ ಸಮಸ್ಯೆ ಕಂಡುಬರಬಹುದು, ಮಾಂಸದ ಕೋಳಿಗಳಿಂದ ಕ್ಯಾನ್ಸರ್ ಮತ್ತು ಕೊಲೆಸ್ಟ್ರಾಲ್ ಹೆಚ್ಚುವ ಸಾಧ್ಯತೆಗಳು ಅಧಿಕವಾಗಿದೆ. ಶರೀರದ ಗುಣಗಳನ್ನು ಕ್ರಮಬದ್ಧವಾಗಿ ನಡೆಸುವ ಹಾರ್ಮೋನ್ ಬಿಡುಗಡೆಯಲ್ಲಿ ಕೂಡ ವ್ಯತ್ಯಾಸ ಕಂಡು ಬರುತ್ತದೆ. ಈ ಕೊಳಿಗಳಿಂದ ಯಾವುದೇ ಸೋಂಕುಗಳಿಗೆ ಒಳಗಾದರೆ ಆಗ ಚಿಕಿತ್ಸೆ ನೀಡುವುದು ತುಂಬಾ ಕಷ್ಟ. ಇದರಿಂದ ಹೃದಯಗಾತ ಹಾಗುವ ಸಾಧ್ಯತೆಗಳು ಕೂಡ ಇದೆ. ಹೊಟ್ಟೆಯಲ್ಲಿ ಗೆಡ್ಡೆಗಳು ಬೆಳೆಯುವ ಸಾದ್ಯತೆ ಇದೆ.ಈ ಎಲ್ಲಾ ಪರಿಣಾಮಗಳು ದೀರ್ಘಕಾಲದಲ್ಲಿ ಎದುರಾಗುತ್ತವೆ.

# ಅತಿ ಹೆಚ್ಚು ಸೋಂಕು ತಗುಲುವ ಸಾಧ್ಯತೆ
ಕೋಳಿಗಳ ಜೀವಿತಾವಧಿ 10 ರಿಂದ 12 ವರ್ಷಗಳು. ಹಾಗೇ ಅವುಗಳು ಪ್ರೌಢಾವಸ್ಥೆಗೆ ಬರಲು ಕನಿಷ ಎಂದರೂ 50 ರಿಂದ 60 ದಿನಗಳು ಬೇಕಾಗುತ್ತದೆ. ಆದರೆ ಪೌಲ್ಟ್ರಿ ಉದ್ದಿಮೆದಾರರು ಕೋಳಿಗಳು ವೇಗವಾಗಿ ಬೆಳೆಯುವಂತೆ ಮಾಡಲು ಅವುಗಳ ತೊಡೆಯ ಭಾಗಗಳಿಗೆ ಸ್ಟೆರಾಯಿಡ್ ನೀಡಿ ಕೇವಲ 30 ದಿನಗಳಲ್ಲೇ ಅವುಗಳ ತೂಕ ಹೆಚ್ಚುವಂತೆ ಮಾಡಿ, ಮಾಂಸದ ಅಂಗಡಿಗಳಿಗೆ ಸರಬರಾಜು ಮಾಡಿ ಕೋಟಿಗಟ್ಟಲೆ ಹಣವನ್ನು ಗಳಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಪೌಲ್ಟ್ರಿಗಳಲ್ಲಿ ಸ್ವಚ್ಚತೆಗೆ ಆದ್ಯತೆ ನೀಡದಿರುವುದರಿಂದ ಹಾಗೂ ಮಾಂಸದ ಅಂಗಡಿಗಳಲ್ಲಿ ಕೋಳಿ ಮಾಂಸವನ್ನು ಸೂಕ್ತ ರೀತಿಯಲ್ಲಿ ಸ್ವಚ್ಛ ಮಾಡದ ಕಾರಣ, ಇದನ್ನು ಸೇವಿಸುವುದರಿಂದ ದೇಹಕ್ಕೆ ಸೋಂಕು ತಗಲುವ ಸಾಧ್ಯತೆ ಹೆಚ್ಚು.

# ದೇಹದ ತೂಕ ಹೆಚ್ಚಾಗುತ್ತದೆ : 
ಚಿಕನ್ ಸೇವನೆಯಿಂದ ದೇಹದ ತೂಕ ಹೆಚ್ಚಾಗುವುದಿಲ್ಲ ಎಂದೇ ಹೇಳಲಾಗುತ್ತದೆ. ಆದರೆ ಚಿಕನ್ ಬಿಳಿ ಮಾಂಸ ಆಗಿರುವುದರಿಂದ ನಾರಿನಂಶ ಕಡಿಮೆ ಇರುತ್ತದೆ. ಆದರೆ ಅತಿ ಹೆಚ್ಚು ಕ್ಯಾಲೊರಿಗಳನ್ನು ಹೊಂದಿರುತ್ತದೆ. ಹಾಗಾಗಿ ಚಿಕನ್ ಸೇವನೆಯಿಂದ ದೇಹದ ಕ್ಯಾಲೋರಿ ಪ್ರಮಾಣ ಹೆಚ್ಚಾಗುವುದರಿಂದ ತೂಕವೂ ಕ್ರಮೇಣ ಹೆಚ್ಚಾಗುತ್ತದೆ.

# ಪುರುಷ ಬಂಜೆತನ
ಬಾಯ್ಲರ್ ಚಿಕನ್ ಸೇವನೆಯಿಂದ ಪುರುಷರಲ್ಲಿ ಬಂಜೆತನ ಪ್ರಮಾಣ ಹೆಚ್ಚಾಗುತ್ತದೆ. ಬಾಯ್ಲರ್ ಕೋಳಿಯಲ್ಲಿರುವ ರಾಸಾಯನಿಕ ಅಂಶಗಳು ಪುರುಷರಲ್ಲಿನ ವೀರ್ಯಾಣು ಸಂಖ್ಯೆಯನ್ನು ಕಡಿಮೆಯಾಗುವ ಸಾಧ್ಯತೆ ಹೆಚ್ಚು ಎಂದು ಸಂಶೋಧನೆಯೊಂದು ಹೇಳಿದೆ.  ಹಾಗಾಗಿ ಪುರುಷರು ಆದಷ್ಟು ನಾಟಿ ಕೋಳಿ ಸೇವನೆ ಮಾಡುವುದು ಸೂಕ್ತ.  ಇತ್ತೇಚೆಗೆ ಕೆಲವು ಫಾರಂ ನವರು ಹಣದ ಆಸೆಗೆ ಬಿದ್ದು ಕೋಳಿಗಳಿಗೆ ತೂಕ ಹೆಚ್ಚು ಬರಿಸಲು ಈ ರೀತಿಯ ದಂದೆ ಮಾಡುತ್ತಿರುವುದು ಈಗಾಗಲೇ ಸಾಕಷ್ಟು ಜನಕ್ಕೂ ತಿಳಿದಿದೆ. ಆದರೆ ಅತೀಯಾಗಿ ಕೋಳಿಗಳಿಗೆ ಸ್ಟೀರಾಯ್ಡ್ ಇಂಜೆಕ್ಷನ್ ನೀಡುವುದರಿಂದ ಅದರ ಬೆಳವಣಿಗೆಯಲ್ಲಿ ವೇಗ ಬರುತ್ತದೆ. ಇದನ್ನು ಸೇವಿಸುವ ಮನುಷ್ಯನಿಗೆ ಅನೇಕ ರೀತಿಯ ಸಮಸ್ಯೆಗಳು ಬರುತ್ತಿವೆ. ಆದ್ರೆ ನಾಟಿ ಕೋಳಿ ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೇದು. ನಿಮಗೆ ಸಾಧ್ಯ ಆದ್ರೆ ನಾಟಿ ಕೋಳಿ ಚಿಕನ್ ತಿನ್ನುವ ಅಭ್ಯಾಸ ಮಾಡಿಕೊಳ್ಳಿ ನಿಮ್ಮ ಆರೋಗ್ಯ ಸುಪರ್ ಆಗಿರುತ್ತೆ

Facebook Comments