ಸಿಂಪಲ್ ಆಗಿ ಬರ್ತ್ ಡೇ ಆಚರಿಸಿಕೊಂಡ ಮನೋರಂಜನ್‍

ಈ ಸುದ್ದಿಯನ್ನು ಶೇರ್ ಮಾಡಿ

Manoranjan--01

ಬೆಂಗಳೂರು, ಡಿ.11- ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಹಿರಿಯ ಪುತ್ರ ಮನೋರಂಜನ್ ರವಿಚಂದ್ರನ್ ಅವರು ಇಂದು ತಮ್ಮ 31ನೆ ವರ್ಷದ ಹುಟ್ಟುಹಬ್ಬವನ್ನು ಕುಟುಂಬಸ್ಥರ ಜೊತೆ ಸರಳವಾಗಿ ಆಚರಿಸಿಕೊಂಡರು.  ಸಾಹೇಬ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಮನೋರಂಜನ್ ನಂತರ ಬೃಹಸ್ಪತಿ ಚಿತ್ರದಲ್ಲಿ ನಟಿಸಿದ್ದಾರೆ. ನಟ ಅಂಬರೀಶ್ ಅವರ ನಿಧನದ ಹಿನ್ನೆಲೆಯಲ್ಲಿ ಅದ್ದೂರಿಯಾಗಿ ಆಚರಿಸಿಕೊಳ್ಳದೆ ಸರಳವಾಗಿ ಆಚರಿಸಿಕೊಳ್ಳುತ್ತಿರುವು ದಾಗಿ ಅಭಿಮಾನಿಗಳಿಗೆ ತಿಳಿಸಿದರು. ಆದರೆ ಅಭಿಮಾನಿಗಳು ಮನೆಗೆ ತೆರಳಿ ನೆಚ್ಚಿನ ನಟನಿಗೆ ಶುಭಾಶಯ ಕೋರಿದರು. ಪ್ರಾರಂಭ ಎಂಬ ಚಿತ್ರದಲ್ಲಿ ನಟ ಮನೋರಂಜನ್ ನಟಿಸುತ್ತಿದ್ದು, ಜನವರಿಯಲ್ಲಿ ಚಿತ್ರ ಸೆಟ್ಟೇರಲಿದೆ.

Facebook Comments