ದತ್ತಮಾಲಾ ಧಾರಣೆ ಅಭಿಯಾನಕ್ಕೆ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

Datta Malaಚಿಕ್ಕಗಳೂರು, ಡಿ.12- ದತ್ತ ಜಯಂತಿ ಅಂಗವಾಗಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ವತಿಯಿಂದ ನಡೆಯಲಿರುವ ಹತ್ತು ದಿನಗಳ ದತ್ತ ಮಲಾ ಧಾರಣೆ ಅಭಿಯಾನಕ್ಕೆ ಇಂದು ಚಾಲನೆ ದೊರೆಯಿತು. ನಗರದ ಕಾಮಧೇನು ಗಣಪತಿ ದೇವಾಲಯದಲ್ಲಿ ಇಂದು ಬೆಳಗ್ಗೆ ಅರ್ಚಕ ರಘು ಅವಧಾನಿ ಅವರ ನೇತೃತ್ವದಲ್ಲಿ ಗಣಹೋಮ, ದತ್ತ ಹೋಮ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳು ನೆರವೇರಿದವು.

ವಿಎಚ್‍ಪಿ ಜಿಲ್ಲಾಧ್ಯಕ್ಷ ಶಿವಕುಮಾರ್, ಇಲ್ಲಾ ಕಾರ್ಯದರ್ಶಿ ಯೋಗಿಶ್‍ರಾಜ್ ಅರಸ್, ಭಜರಂಗದಳದ ಸಂಚಾಲಕ ತುಡಕೂರು ಮಂಜು, ನಗರಸಭಾ ಸದಸ್ಯ ರವೀಂದ್ರಪ್ರಭು, ಬಿಜೆಪಿ ಜಿಲ್ಲಾ ವಕ್ತಾರ ವೇಣುಗೋಪಾಲ್, ಭಜರಂಗದಳದ ಪ್ರೇಮ್ ಕಿರಣ್, ಅಮಿತ್, ಕಿಶೋರ್ ಸೇರಿದಂತೆ 50ಕ್ಕೂ ಹೆಚ್ಚು ಮಂದಿ ಇಂದು ಮಾಲಾ ಧಾರಣೆ ಮಾಡಿದರು.

ಈ ವೇಳೆ ಯೋಗಿಶ್ ಅರಸ್ ಮಾತನಾಡಿ, ರಾಜ್ಯಾದ್ಯಂತ ಇಂದಿನಿಂದ ದತ್ತ ಭಕ್ತರು ಮಾಲೆ ಧರಿಸಿ ದತ್ತಾತ್ರೆಯ ವ್ರತ ಆಚರಣೆ ಮಾಡಲಿದ್ದಾರೆ. 22ರಂದು ದತ್ತ ಪೀಠಕ್ಕೆ ಬಂದು ದತ್ತಪಾದುಕೆ ದರ್ಶನದೊಂದಿಗೆ ಈ ವರ್ಷದ ದತ್ತ ಜಯಂತಿ ಸಮಾಪ್ತಿಗೊಳ್ಳಲಿದೆ ಎಂದು ಹೇಳಿದರು. ಡಿ.20ರಂದು ಅನುಸೂಯ ಜಯಂತಿ ಆಚರಿಸಲಾಗುತ್ತದೆ. ಅಂದು ನಗರದಲ್ಲಿ ಮಹಿಳೆಯರ ಸಂಕೀರ್ತನಾ ಯಾತ್ರೆ ನಡೆಯಲಿದೆ.

21ರಂದು ಬೃಹತ್ ಶೋಭಾಯಾತ್ರೆ ನಡೆಯಲಿದ್ದು, 22ರಂದು ದತ್ತಪೀಠದಲ್ಲಿ ದತ್ತ ಜಯಂತಿ ನೆರವೇರಿಸಲಿದೆ ಎಂದು ತಿಳಿಸಿದರು. ದತ್ತ ಪೀಠದಲ್ಲಿ ಹಿಂದೂ ಅರ್ಚಕರ ನೇಮಕ, ಅನಧಿಕೃತ ಘೋರಿಗಳ ತೆರವು ಮಾಡಬೇಕೆಂಬ ಕೆಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಜಿಲ್ಲೆಯಾದ್ಯಂತ ಇದೇ 17ರಿಂದ ಪ್ರತಿ ಹೋಬಳಿ ಕೇಂದ್ರಕ್ಕೆ ರಥಯಾತ್ರೆ ಕೊಂಡೊಯ್ಯಲಾಗುವುದು ಎಂದರು.

Facebook Comments