‘ಬಿಜೆಪಿ ತಿಪ್ಪರ್‍ಲಾಗ ಹಾಕಿದ್ರೂ ಅಧಿಕಾರಕ್ಕೆ ಬರಲ್ಲ’

ಈ ಸುದ್ದಿಯನ್ನು ಶೇರ್ ಮಾಡಿ

Eshwar Khandreಬೆಳಗಾವಿ (ಸುವರ್ಣಸೌಧ), ಡಿ.12- ಜೆಡಿಎಸ್ ಹಾಗೂ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಗಟ್ಟಿಯಾಗಿ, ಸುಭದ್ರವಾಗಿ ಐದು ವರ್ಷ ಆಡಳಿತ ನಡೆಸಲಿದೆ. ಆದರೆ, ಬಿಜೆಪಿ ಅಧಿಕಾರಕ್ಕೆ ಬರುವ ಹಗಲು ಕನಸು ಕಾಣುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‍ಖಂಡ್ರೆ ತಿರುಗೇಟು ನೀಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ತಿಪ್ಪರ್‍ಲಾಗ ಹಾಕಿದರೂ ಅಧಿಕಾರಕ್ಕೆ ಬರುವುದಿಲ್ಲ. ಅಷ್ಟರ ಮಟ್ಟಿಗೆ ಸಮ್ಮಿಶ್ರ ಸರ್ಕಾರ ಗಟ್ಟಿಯಾಗಿದೆ ಎಂದರು.

ಪಂಚರಾಜ್ಯ ಫಲಿತಾಂಶ ಪ್ರಜಾಪ್ರಭುತ್ವ ಹಾಗೂ ಜನತೆಗೆ ಸಿಕ್ಕ ಜಯವಾಗಿದೆ. ಕೇಂದ್ರ ಸರ್ಕಾರ ಹಾಗೂ ಆಯಾ ರಾಜ್ಯಗಳ ಬಿಜೆಪಿ ಸರ್ಕಾರದ ತಪ್ಪು ರೀತಿಯಿಂದಾಗಿ, ಜನವಿರೋಧಿ ಕಾರ್ಯಗಳಿಂದಾಗಿ ಈ ರೀತಿಯ ಫಲಿತಾಂಶ ಬಂದಿದೆ. ಕೇಂದ್ರ ನೀಡಿದ ಭರವಸೆ ಈಡೇರಿಸದೆ ಜನರ ದಾರಿ ತಪ್ಪಿಸಿದೆ. ಅದಕ್ಕಾಗಿ ಆಯಾ ರಾಜ್ಯದವರು ತಕ್ಕ ಪಾಠ ಕಲಿಸಿದ್ದಾರೆ ಎಂದರು.

ಪ್ರಧಾನಿ ಮೋದಿ ಅವರು ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇನೆ ಎಂದು ಹೇಳಿದರು. ಆದರೆ, ರಫೇಲ್ ಹಗರಣ ಬೆಳಕಿಗೆ ಬಂದಿದೆ. ಯುವಕರಿಗೆ ಉದ್ಯೋಗ ನೀಡಲಿಲ್ಲ. ರೈತಪರ ಕಾಳಜಿಯನ್ನೂ ತೋರಲಿಲ್ಲ. ಹೀಗಾಗಿ ಬಿಜೆಪಿ ಅಲೆ ಕುಗ್ಗತೊಡಗಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮಹಾಘಟ್‍ಬಂಧನ್‍ಗೆ ಜಯ ದೊರೆಯಲಿದ್ದು, ರಾಹುಲ್‍ಗಾಂಧಿ ಪ್ರಧಾನಿಯಾಗಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

Facebook Comments