ಇಂದಿನ ಪಂಚಾಗ ಮತ್ತು ರಾಶಿಫಲ (13-12-2018-ಗುರುವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ವಿಚಾರವಿಲ್ಲದ ಅವಿವೇಕಿಗೆ ಶಾಸ್ತ್ರವು ಹೊರೆ. ಸಂಸಾರದ ವ್ಯಾಮೋಹ ಇರತಕ್ಕವನಿಗೆ ತತ್ವಜ್ಞಾನ ಹೊರೆ. ಶಾಂತಿಯಿಲ್ಲದವನಿಗೆ ಮನಸ್ಸೇ ಹೊರೆ. ಆತ್ಮಜ್ಞಾನಿಯಲ್ಲದವನಿಗೆ ದೇಹವೇ ಹೊರೆ. -ಯೋಗವಾಸಿಷ್ಠ

Horoscope--01

# ಪಂಚಾಂಗ : ಗುರುವಾರ, 13.12.2018
ಸೂರ್ಯ ಉದಯ ಬೆ.06.32 / ಸೂರ್ಯ ಅಸ್ತ ಸಂ.05.55
ಚಂದ್ರ ಉದಯ ನಾ.ಬೆ.11.06/ ಚಂದ್ರ ಅಸ್ತ ರಾ.10.59
ವಿಲಂಬಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು / ಮಾರ್ಗಶಿರ ಮಾಸ
ಶುಕ್ಲ ಪಕ್ಷ / ತಿಥಿ : ಷಷ್ಠಿ (ರಾ.01.49)
ನಕ್ಷತ್ರ: ಧನಿಷ್ಠಾ (ರಾ.07.45) / ಯೋಗ: ಹರ್ಷಣ (ರಾ.12.37)
ಕರಣ: ಕೌಲವ-ತೈತಿಲ (ಮ.12.29-ರಾ.01.49)
ಮಳೆ ನಕ್ಷತ್ರ: ಜ್ಯೇಷ್ಠಾ  / ಮಾಸ: ವೃಶ್ಚಿಕ / ತೇದಿ: 28

Rashi

# ರಾಶಿ ಭವಿಷ್ಯ
ಮೇಷ: ಮಿತಿಮೀರಿದ ಆಲೋಚನೆಗಳು ಕೆಲಸಗಳಲ್ಲಿ ಅಪಯಶಸ್ಸು ತಂದುಕೊಡಲಿದೆ
ವೃಷಭ: ವಸ್ತುಸ್ಥಿತಿ ಬಗ್ಗೆ ಚಿಂತಿಸುವುದು ಒಳ್ಳೆಯದು
ಮಿಥುನ: ಸಜ್ಜನರ ಸಂಪರ್ಕ ಮನಸ್ಸಿನ ತಳಮಳ ಕಡಿಮೆ ಮಾಡುವುದು
ಕಟಕ: ಶ್ರಮಕ್ಕೆ ಆದಾಯದ ಮೂಲದಲ್ಲಿ ಹೆಚ್ಚಳ ಕಂಡುಬರುವುದು
ಸಿಂಹ: ಸಂಗಾತಿಯೊಂದಿಗೆ ಚಿಕ್ಕ ಚಿಕ್ಕ ವಿಷಯಗಳಿಗೂ ರೇಗುವುದು ಉತ್ತಮವಲ್ಲ
ಕನ್ಯಾ: ಮನೆಯಲ್ಲಿ ಮೆಲಿಂದ ಮೇಲೆ ಶುಭ ಕಾರ್ಯಗಳು ಜರುಗುವ ಸಾಧ್ಯತೆ ಇದೆ
ತುಲಾ: ಅತಿಥಿಗಳ ವಿಶೇಷಾಗಮನದಿಂದ ಸಂತಸ
ವೃಶ್ಚಿಕ: ಅತಿ ಬುದ್ಧಿವಂತಿಕೆ ತೋರದಿರಿ
ಧನುಸ್ಸು: ದುಡಿಮೆಗೆ ತಕ್ಕ ಆದಾಯ ದೊರೆಯಲಿದೆ
ಮಕರ: ದೇಹಕ್ಕೆ ವಿಶ್ರಾಂತಿ ಲಭಿಸದೆ ಇರಬಹುದು
ಕುಂಭ: ನಿರಂತರ ಟೀಕೆಗಳನ್ನು ಎದುರಿಸುವಿರಿ
ಮೀನ: ಖರ್ಚಿಗೊಂದು ಕಡಿವಾಣ ಹಾಕಿ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments