ಆಸ್ಟ್ರೇಲಿಯಾ ವಿರುದ್ಧ 2ನೇ ಟೆಸ್ಟ್ ನಿಂದ ಪೃಥ್ವಿ, ರೋಹಿತ್, ಅಶ್ವಿನ್ ಔಟ್

ಈ ಸುದ್ದಿಯನ್ನು ಶೇರ್ ಮಾಡಿ

Ashwin--01

ಪರ್ತ್, ಡಿ.13- ಆಸ್ಟ್ರೇಲಿಯಾ ವಿರುದ್ಧ ಅಡಿಲೇಡ್ ಟೆಸ್ಟ್ ಅನ್ನು ಗೆದ್ದು ಸರಣಿ ವಶಪಡಿಸಿಕೊಳ್ಳುವತ್ತ ಚಿತ್ತ ಹರಿಸಿರುವ ಟೀಂಇಂಡಿಯಾಗೆ 2ನೆ ಟೆಸ್ಟ್‍ನಲ್ಲೂ ಗಾಯಾಳುಗಳ ಸಮಸ್ಯೆ ಬೆಂಬಿಡದೆ ಕಾಡುತ್ತಿದೆ. ಮೊದಲ ಟೆಸ್ಟ್‍ಗೂ ಮುನ್ನ ಅಭ್ಯಾಸ ಪಂದ್ಯದ ವೇಳೆ ಟೀಂ ಇಂಡಿಯಾದ ಯುವ ಬ್ಯಾಟ್ಸ್‍ಮನ್ ಪೃಥ್ವಿ ಶಾ ಕಾಲಿನ ನೋವಿನಿಂದ ಬಳಲುತ್ತಿರುವುದರಿಂದ 2ನೆ ಟಿಸ್ಟ್‍ನಿಂದಲೂ ಹೊರಗುಳಿದಿದ್ದಾರೆ.

ಅಡಿಲೇಡ್ ಟೆಸ್ಟ್‍ನಲ್ಲಿ ಉತ್ತಮ ಬೌಲಿಂಗ್ ಪ್ರದರ್ಶಿಸಿದ್ದ ಸ್ಪಿನ್ನರ್ ಅಶ್ವಿನ್ ಎಡಭಾಗದ ಕಿಬ್ಬೊಟ್ಟೆ ನೋವಿನಿಂದ ಬಳಲುತ್ತಿದ್ದರೆ, ರೋಹಿತ್ ಶರ್ಮಾ ಬೆನ್ನಿನ ಬೇನೆಯಿಂದ ಬಳಲುತ್ತಿರುವುದರಿಂದ 2 ಟೆಸ್ಟ್‍ನಿಂದ ವಿಶ್ರಾಂತಿ ನೀಡಲಾಗಿದೆ.

ಈ ಆಟಗಾರರು ಮೂರನೇ ಟೆಸ್ಟ್ ಗೆ ಲಭ್ಯವಾಗಲಿದ್ದಾರೆ ಎಂದು ತಂಡದ ಆಡಳಿತ ಮಂಡಳಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ನಾಳೆಯಿಂದ ಪರ್ತ್‍ನಲ್ಲಿ ಆಸ್ಟ್ರೇಲಿಯಾವು 2ನೆ ಟೆಸ್ಟ್ ಪಂದ್ಯ ಆಡಲಿದ್ದು ಸ್ಥಾನ ಪಡೆದಿರುವ 13 ಆಟಗಾರರ ಪಟ್ಟಿ ಕೆಳಕಂಡಂತಿದೆ.
ವಿರಾಟ್‍ಕೊಹ್ಲಿ (ನಾಯಕ), ಮುರಳಿ ವಿಜಯ್, ಕೆ.ಎಲ್.ರಾಹುಲ್, ಚೇತೇಶ್ವರಪೂಜಾರ, ಅಜೆಂಕ್ಯಾ ರಹಾನೆ, ಹನುಮ ವಿಹಾರಿ, ರಿಷಭ್‍ಪಂತ್ (ವಿಕೆಟ್ ಕೀಪರ್), ರವೀಂದ್ರಜಾಡೇಜಾ, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಜಸ್‍ಪ್ರೀತ್ ಬೂಮ್ರಾ, ಭುವನೇಶ್ವರಕುಮಾರ್, ಉಮೇಶ್‍ಯಾದವ್.

Facebook Comments