2ನೇ ಅವಧಿಗೆ ತಲಂಗಾಣದ ಸಿಎಂ ಆಗಿ ಕೆಸಿಆರ್ ಪ್ರಮಾಣ

ಈ ಸುದ್ದಿಯನ್ನು ಶೇರ್ ಮಾಡಿ

K Chandrasekhar Raoಹೈದರಾಬಾದ್, ಡಿ.13-ತೆಲಂಗಾಣ ಮುಖ್ಯಮಂತ್ರಿಯಾಗಿ ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್‍ಎಸ್) ಮುಖ್ಯಸ್ಥ ಕೆ.ಚಂದ್ರಶೇಖರ್‍ರಾವ್ ಇಂದು ಪ್ರಮಾಣವಚನ ಸ್ವೀಕರಿಸಿದರು. ರಾಜಭವನದಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ತೆಲಂಗಾಣ ರಾಜ್ಯಪಾಲ ನರಸಿಂಹನ್, ಕೆಸಿಆರ್ ಅವರಿಗೆ ಪ್ರಮಾಣವಚನ ಬೋಧಿಸಿದರು.

ಇನ್ನು ಚಂದ್ರಶೇಖರ ರಾವ್ ಅವರೊಂದಿಗೆ ಟಿಆರ್ ಎಸ್ ಹಿರಿಯ ಶಾಸಕ ಮಹಮದ್ ಅಲಿ ಅವರೂ ಕೂಡ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಸಂಪೂರ್ಣ ಪ್ರಮಾಣದ ಮಂತ್ರಿಮಂಡಲವನ್ನು ಇದೇ ಡಿಸೆಂಬರ್ 18ರಂದು ರಚಿಸುವುದಾಗಿಯೂ ಅಂದೇ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಇನ್ನು ಕಳೆದ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಟಿಆರ್ ಎಸ್ ಪಕ್ಷ 88 ಸ್ಥಾನಗಳಲ್ಲಿ ಜಯಭೇರಿ ಭಾರಿಸುವ ಮೂಲಕ ಎರಡನೇ ಬಾರಿಗೆ ಅಧಿಕಾರದ ಗದ್ದುಗೆ ಏರಿದೆ. ಅಲ್ಲದೆ ಪಕ್ಷೇತರ ಅಭ್ಯರ್ಥಿಗಳಾಗಿ ಸ್ಪರ್ಧಿಸಿ ಗೆದ್ದಿದ್ದ ಶಾಸಕರೂ ಕೂಡ ಸಿಎಂ ಕೆಸಿಆರ್ ನೇತೃತ್ವದ ಟಿಆರ್ ಎಸ್ ಸರ್ಕಾರಕ್ಕೆ ತಮ್ಮ ಬೆಂಬಲ ಘೋಷಿಸಿರುವುದು ವಿಶೇಷ.

ಕೆ.ಚಂದ್ರಶೇಖರ್ ರಾವ್ ಅವರಿಗೆ ದೈವ ನಂಬಿಕೆಗಳು ವಿಪರೀತ. ವಾಸ್ತು, ಜ್ಯೋತಿಷ್ಯ ಇತ್ಯಾದಿ ವಿಚಾರಗಳಲ್ಲಿ ಅವರ ನಂಬಿಕೆಯು ಜನರ ಟೀಕೆಗೆ ಗುರಿ ಆಗುವಷ್ಟರ ಮಟ್ಟಿಗೆ ಪ್ರಚಾರ ಪಡೆದಿವೆ.    ಗುರುವಾರದಂದು ಮಧ್ಯಾಹ್ನ 1.25ಕ್ಕೆ ಸರಿಯಾಗಿ ಅಧಿಕಾರ ಸ್ವೀಕಾರ ಪ್ರಮಾಣ ತೆಗೆದುಕೊಂಡಿದ್ದಾರೆ. ಈ ಮುಹೂರ್ತವನ್ನು ನಿಗದಿ ಮಾಡಿಕೊಟ್ಟಿರುವವರು ಭೊಂಗಿರ್ ಜಿಲ್ಲೆಯ ಯಾದಗಿರಿ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದ ವೇದ ಪಂಡಿತರು. ಈ ಸ್ಥಳವು ತೆಲಂಗಾಣದಲ್ಲಿರುವ ಪ್ರಖ್ಯಾತವಾದ ತೀರ್ಥ ಕ್ಷೇತ್ರ. ಮುಹೂರ್ತ ನಿಗದಿ ಮಾಡಿರುವ ಪಂಡಿತರ ಪ್ರಕಾರ ಕೆ.ಚಂದ್ರಶೇಖರ್ ರಾವ್ ಅವರು ‘ಬಾಹುಬಲಿ ಮುಹೂರ್ತ’ದಲ್ಲಿ ಪದವಿ ಪ್ರಮಾಣ ಸ್ವೀಕರಿಸಿದ್ದಾರಂತೆ.

Facebook Comments