ಮೋದಿ ವೋಟ್ ಬ್ಯಾಂಕ್ ರಾಜಕೀಯ ಮಾಡಲ್ಲ : ಬಾಬಾ ರಾಮದೇವ್ ಬ್ಯಾಟಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

Baba-Ramadev

ನವದೆಹಲಿ, ಡಿ.13- ಪ್ರಧಾನಿ ನರೇಂದ್ರ ಮೋದಿ ನಾಯಕತ್ವ ಹಾಗೂ ಅವರ ನೀತಿ-ಧೋರಣೆ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ಯೋಗ ಗುರು ರಾಮ್‍ದೇವ್ ಹೇಳಿದ್ದಾರೆ. ರಾಜಸ್ತಾನ, ಮಧ್ಯಪ್ರದೇಶ ಹಾಗೂ ಛತ್ತೀಸ್‍ಗಢ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋತ ನಂತರ ಉದ್ಭವಿಸಿರುವ ಸನ್ನಿವೇಶ ಕುರಿತು ಮಾತನಾಡಿದ ಅವರು, ಮೋದಿ ನಾಯಕತ್ವದ ಬಗ್ಗೆ ಯಾರೂ ಅನುಮಾನ ವ್ಯಕ್ತಪಡಿಸಬಾರದು ಎಂದರು.

ಭಾರತ ಆರ್ಥಿಕ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ರಾಮ್‍ದೇವ್, ನರೇಂದ್ರ ಮೋದಿ ಬೇರೆಯವರ ರೀತಿ ಮತ ಬ್ಯಾಂಕ್ ರಾಜಕೀಯ ಮಾಡುವುದಿಲ್ಲ ಎಂದಿದ್ದಾರೆ. ನರೇಂದ್ರ ಮೋದಿ ದೇಶ ಕಟ್ಟುವ 100ಕ್ಕೂ ಹೆಚ್ಚು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅವರು ಎಂದಿಗೂ ವೋಟ್‍ಬ್ಯಾಂಕ್ ರಾಜಕಾರಣ ಮಾಡುವುದಿಲ್ಲ ಎಂದು ಪ್ರಧಾನಿಯನ್ನು ರಾಮ್‍ದೇವ್ ಶ್ಲಾಘಿಸಿದ್ದಾರೆ.

ನೋಟು ಅಮಾನ್ಯತೆ ನಂತರ ಎಲ್ಲ ಹಣ ಈಗ ಸಮವಾಗಿದೆ. ಆದರೆ, ಈ ಹಣವನ್ನು ಹೇಗೆ ಬಳಸಬೇಕು ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಕೃಷಿ, ಆರೋಗ್ಯ, ಶಿಕ್ಷಣ ಮತ್ತಿತರ ಕ್ಷೇತ್ರಗಳಲ್ಲಿ ಹಣ ಬಳಸಿಕೊಳ್ಳಬೇಕು ಎಂದಿರುವ ರಾಮ್‍ದೇವ್, ತಾವೂ ಪ್ರೊತ್ಸಾಹಿಸುತ್ತಿರುವ ಪತಂಜಲಿ ಸಮೂಹ 2025ರೊಳಗೆ ವಿಶ್ವದ ಅತ್ಯಂತ ದೊಡ್ಡದಾದ ಎಫ್‍ಎಂಸಿಜಿ ಕಂಪೆನಿಯಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

Facebook Comments

Sri Raghav

Admin