ಪಾಕ್, ಚೀನಾ ಸೇರಿ 10 ದೇಶಗಳನ್ನು ಕಪ್ಪುಪಟ್ಟಿಗೆ ಸೇರಿಸಿದ ದೊಡ್ಡಣ್ಣ..!

ಈ ಸುದ್ದಿಯನ್ನು ಶೇರ್ ಮಾಡಿ

Pakistan

ವಾಷಿಂಗ್ಟನ್, ಡಿ.13- ಧಾರ್ಮಿಕ ಸ್ವಾತಂತ್ರ್ಯ ಉಲ್ಲಂಘನೆ ಮಾಡಿರುವ ಆರೋಪದ ಮೇಲೆ ಚೀನಾ, ಪಾಕಿಸ್ತಾನ ಸೇರಿದಂತೆ 10 ರಾಷ್ಟ್ರಗಳನ್ನು ಅಮೆರಿಕ ಬ್ಲಾಕ್‍ಲಿಸ್ಟ್ (ಕಪ್ಪುಪಟ್ಟಿ)ಗೆ ಸೇರಿಸಲಾಗಿದೆ.

ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೋ ಈ ಬಗ್ಗೆ ಮಾಹಿತಿ ನೀಡಿದ್ದು, ಚೀನಾ, ಪಾಕಿಸ್ತಾನ, ಇರಾನ್, ಉತ್ತರ ಕೊರಿಯಾ, ಎರಿಟ್ರಿಯಾ, ಮ್ಯಾನ್ಮಾರ್, ಸೌದಿ ಅರೇಬಿಯಾ, ಸುಡಾನ್, ತುರ್ಕ ಮೆನಿಸ್ತಾನ್ ಮತ್ತು ತಜಕಿಸ್ಥಾನ್ ರಾಷ್ಟ್ರಗಳಲ್ಲಿ ಧಾರ್ಮಿಕ ಸ್ವಾತಂತ್ರ್ಯ ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲಿ ಅವುಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ ಎಂದು ಹೇಳಿದ್ದಾರೆ.

ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ 1998 ಪ್ರಕಾರ, ಈ ರಾಷ್ಟ್ರಗಳು ಧಾರ್ಮಿಕ ಸ್ವಾತಂತ್ರ್ಯವನ್ನು ಉಲ್ಲಂಘನೆ ಮಾಡಿವೆ. ಹಲವು ಭಾಗಗಳಲ್ಲಿ ಜನತೆ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ. ಸಾವು-ನೋವುಗಳನ್ನು ಎದುರಿಸಿದ್ದಾರೆ ಎಂದು ಪೊಂಪೆಯೊ ಹೇಳಿದ್ದಾರೆ.

ಈ ರೀತಿಯ ದೌರ್ಜನ್ಯಗಳನ್ನು ಮೂಕವಾಗಿ ನೋಡುತ್ತಾ ಕೂರುವುದಿಲ್ಲ. ಧಾರ್ಮಿಕ ಸ್ವಾತಂತ್ರ್ಯಗಳನ್ನು ರಕ್ಷಣೆ ಹಾಗೂ ಉತ್ತೇಜಿಸುವುದು ಡೊನಾಲ್ಡ್ ಟ್ರಂಪ್ ಅವರ ಆದ್ಯತೆಯ ವಿದೇಶಾಂಗ ನೀತಿಗಳಾಗಿವೆ ಎಂದು ಅವರು ತಿಳಿಸಿದ್ದಾರೆ.

Facebook Comments

Sri Raghav

Admin