ಎಸಿಬಿ ಬಲೆಗೆ ಬಿದ್ದ ಅಧಿಕಾರಿಗಳು

ಈ ಸುದ್ದಿಯನ್ನು ಶೇರ್ ಮಾಡಿ

acbಆನೇಕಲ್, ಡಿ.15- ಅತ್ತಿಬೆಲೆ ಉಪನೊಂದಣಾಧಿಕಾರಿ ತಿಮ್ಮಾರೆಡ್ಡಿ ಹಾಗೂ ಮಧ್ಯವರ್ತಿ ಕುಮಾರ್ ಎಂಬುವರು ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದಿದ್ದಾರೆ.
ನೆರಳೂರು ಶಶಿ ಎಂಬಾತನಿಗೆ ಸೇರಿದ್ದ ಜಮೀನು ನೊಂದಣಿ ರದ್ದು ಗೊಳಿಸುವಂತೆ ನ್ಯಾಯಾಲಯ ಆದೇಶ ನೀಡಿದ್ದು, ಅದರಂತೆ ನೊಂದಣಿ ರದ್ದು ಗೊಳಿಸುವಂತೆ ಸಬ್ ರಿಜಿಸ್ಟಾರ್ ತಿಮ್ಮಾರೆಡ್ಡಿರವರನ್ನು ಶಶಿ ಕೇಳಿದ್ದು, ಒಂದು ಲಕ್ಷ ಇಪ್ಪತ್ತಾ ಐದು ಸಾವಿರ ಕೊಟ್ಟರೆ ಕೆಲಸ ಮಾಡಿಕೊಡುವುದಾಗಿ ಹೇಳಿದ ತಿಮ್ಮಾರೆಡ್ಡಿ ಅದರಂತೆ ನೆರಳೂರು ಶಶಿ ಅವರು ತಿಮ್ಮಾರೆಡ್ಡಿಗೆ ಹಣ ಕೊಡಲು ಕಚೇರಿಗೆ ಹೋದಾಗ ಮಧ್ಯವರ್ತಿ ವಿಜಯ್‍ಕುಮಾರ್ ನೀಡುವಂತೆ ಹೇಳಿ ಲಂಚ ಪಡೆಯುತ್ತಿದ್ದ ವೇಳೆ ಎಸಿಬಿಯ ಡಿವೈಎಸ್ಪಿ ಕೋದಂಡರಾಮ್ ಮತ್ತು ಅವರ ತಂಡ ಬಂಧಿಸಿದ್ದಾರೆ.

 

 

ಮಧ್ಯವರ್ತಿ ಮೂಲಕ ಲಂಚ ಪಡೆದ ಅಧಿಕಾರಿ ಎಸಿಬಿ ಬಲೆಗೆ

Facebook Comments