ತಡೆಗೋಡೆಗೆ ಸಿಲುಕಿ ಆನೆ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

mysoreಹುಣಸೂರು, ಡಿ.15- ರೈತರ ಜಮೀನು ಹಾಗೂ ಊರಿನ ಸಮೀಪ ಹಾಕಲಾಗಿದ್ದ ಕಬ್ಬಿಣದ ತಡೆÉಗೋಡೆ ದಾಟಲು ಯತ್ನಿಸಿದ ಆನೆಯೊಂದು ಅದಕ್ಕೆ ಸಿಲುಕಿ ಮೃತಪಟ್ಟಿರುವ ಘಟನೆ ನಡೆದಿದೆ.
ವೀರನಹೊಸಹಳ್ಳಿ ಬಳಿ ಹಾಕಲಾಗಿರುವ ಕಬ್ಬಿಣದ ತಡೆಗೋಡೆ ದಾಟಲು ಯತ್ನಿಸಿದ ಗಂಡಾನೆ ರಾತ್ರಿ ಕಬ್ಬಿಣದ ಕಂಬಿಗಳ ನಡುವೆ ಸಿಲುಕಿ ಮೃತಪಟ್ಟಿದೆ.
ಗ್ರಾಮದ ಸಮೀಪ ಇರುವ ಕಾಡಿನಿಂದ ಪ್ರಾಣಿಗಳು ಬರದಂತೆ ತಡೆಗೋಡೆ ಹಾಕಲಾಗಿತ್ತು. ಆಹಾರ ಅರಸಿ ಗ್ರಾಮದ ಕಡೆ ಬಂದಿದ್ದ ಈ ಆನೆ ಸಾವನ್ನಪ್ಪಿದ್ದು, ಸ್ಥಳಕ್ಕೆ ಎಸಿಎಫ್ ಪ್ರಸನ್ನಕುಮಾರ್, ಡಾ.ಮುಜೀಬ್ ಅಹಮ್ಮದ್ ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದರು.

Facebook Comments