ಎನ್‍ಕೌಂಟರ್: ಮಾಜಿ ಯೋಧ ಸೇರಿ ಮೂವರು ಉಗ್ರರು ಖತಂ

ಈ ಸುದ್ದಿಯನ್ನು ಶೇರ್ ಮಾಡಿ

Encounter soನವದೆಹಲಿ, ಡಿ.15- ಹಿಜ್ಬುಲ್ ಮುಜಾಹಿದೀನ್ ಉಗ್ರಗಾಮಿ ಸಂಘಟನೆ ಹಾಗೂ ಭಾರತೀಯ ಸೇನೆ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಈ ಸಂದರ್ಭದಲ್ಲಿ ಎನ್ ಕೌಂಟರ್‍ಗೆ ಮೂವರು ಉಗ್ರರು ಬಲಿಯಾಗಿರುವ ಘಟನೆ ಜಮ್ಮು-ಕಾಶ್ಮೀರದ ಪುಲ್ವಾಮ್ ಜಿಲ್ಲಾಯಲ್ಲಿ ನಡೆದಿದೆ. ಬಯಲು ಪ್ರದೇಶದಲ್ಲಿ ಉಗ್ರರು ಅಡಗಿದ್ದಾರೆಂಬ ಮಾಹಿತಿ ಮೇರೆಗೆ ಭಾರತೀಯ ಸೇನೆ ಮತ್ತು ಸಿಆರ್‍ಪಿಎಫ್ ಜಂಟಿ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಎನ್‍ಕೌಂಟರ್‍ಗೆ ಮೂವರು ಬಲಿಯಾಗಿದ್ದಾರೆ

ಮೂವರು ಉಗ್ರರಲ್ಲಿ ಝಾಹೂರ್ ಥೋಕಾರ್ ಈ ಹಿಂದೆ ಭಾರತೀಯ ಸೇನೆಯಲ್ಲಿ ಯೋಧನಾಗಿದ್ದ. ಕಳೆದ ವರ್ಷ ಎಕೆ 47 ರೈಫಲ್ ಜತೆಗೆ ಆರ್ಮಿ ಕ್ಯಾಂಪ್‍ನಿಂದ ನಾಪತ್ತೆಯಾಗಿದ್ದು, ಬಳಿಕ ಹಿಜ್ಬುಲ್ ಮುಜಾಹಿದ್ದೀನ್ ಉಗ್ರಗಾಮಿ ಸಂಘಟನೆ ಸೇರಿಕೊಂಡಿದ್ದ.

Facebook Comments