ಮಧ್ಯ ಪ್ರದೇಶದಲ್ಲಿ 187 ಶಾಸಕರ ಕೋಟ್ಯಾಧಿಪತಿಗಳು 94 ಕ್ರಿಮಿನಲ್ ಹಿನ್ನೆಲೆಯವರು

ಈ ಸುದ್ದಿಯನ್ನು ಶೇರ್ ಮಾಡಿ

mpನವದೆಹಲಿ, ಡಿ.15- ಮಧ್ಯಪ್ರದೇಶದ ನೂತನ ಅಸೆಂಬ್ಲಿಯಲ್ಲಿ 187 ಮಂದಿ ಕೋಟ್ಯಾಧೀಶರಿದ್ದು, 94 ಮಂದಿ ಕ್ರಿಮಿನಲ್ ಹಿನ್ನೆಲೆಯುಳ್ಳವರಾಗಿದ್ದಾರೆ ಎಂದು ಎಡಿಆರ್-ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ ಸಂಸ್ಥೆ ಬಹಿರಂಗಪಡಿಸಿದೆ. ಬಿಜೆಪಿಯ 109 ಶಾಸಕರ ಪೈಕಿ 91 ಹಾಗೂ ಕಾಂಗ್ರೆಸ್ ಪಕ್ಷದ 114 ಶಾಸಕರ ಪೈಕಿ 90, ಬಿಎಸ್ಪಿ ಹಾಗೂ ಎಸ್ಪಿಯಿಂದ ತಲಾ 1 ಹಾಗೂ ನಾಲ್ಕು ಪಕ್ಷೇತರ ಅಭ್ಯರ್ಥಿಗಳು 1 ಕೋಟಿಗೂ ಹೆಚ್ಚಿನ ಮೊತ್ತದ ಆಸ್ತಿ ಘೋಷಿಸಿಕೊಂಡಿದ್ದಾರೆ.
ಮತ್ತೊಂದೆಡೆ ವಿಜಯ್ ರಾಘವ್ ಗಡ ಕ್ಷೇತ್ರದ ಬಿಜೆಪಿ ಶಾಸಕ ಸಂಜಯ್ ಸತ್ಯೇಂದ್ರ ಪಠಕ್ ಆಸ್ತಿ ಮೊತ್ತ 226 ಕೋಟಿ ಎಂದು ಘೋಷಿಸಿಕೊಂಡಿದ್ದಾರೆ.ಪಂದಾನಾ ಕ್ಷೇತ್ರದ ಮತ್ತೊಬ್ಬ ಶಾಸಕ ರಾಮ್ ದಾಂಗೊರ್ ಆಸ್ತಿಯ ಒಟ್ಟಾರೆ ಮೊತ್ತ 50.749ರೂ. ಆಗಿದ್ದು, ಅತ್ಯಂತ ಕಡಿಮೆ ಆಸ್ತಿ ಹೊಂದಿದವರಾಗಿದ್ದಾರೆ.

230 ಸದಸ್ಯ ಬಲದ ಅಸೆಂಬ್ಲಿಯಲ್ಲಿ 94 ಶಾಸಕರ ಮೇಲೆ ಕ್ರಿಮಿನಲ್ ಕೇಸ್‍ಗಳಿವೆ. 47 ಶಾಸಕರ ಮೇಲೆ ಕೊಲೆಯತ್ನ, ಮಹಿಳೆಯರ ಮೇಲೆ ದೌರ್ಜನ್ಯದಂತಹ ಕ್ರಿಮಿನಲ್ ಕೇಸ್‍ಗಳು ದಾಖಲಾಗಿವೆ. ಮುಲತಾಯಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಸುಖದೇವ್ ಪಂಸೆ ಮೇಲೆ ಹತ್ಯೆಗೆ ಸಂಬಂಧಿಸಿದ ಕೇಸ್ ದಾಖಲಾಗಿರುವ ಬಗ್ಗೆ ಘೋಷಿಸಿಕೊಂಡಿದ್ದಾರೆ.

ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಚುನಾಯಿತಗೊಂಡ 119 ಶಾಸಕರಲ್ಲಿ 73ಕ್ಕೂ ಹೆಚ್ಚು ಶಾಸಕರು ಕ್ರಿಮಿನಲ್ ಹಿನ್ನೆಲೆಯವರಾಗಿದ್ದಾರೆ.
47 ಶಾಸಕರ ಮೇಲೆ ಕೊಲೆಯತ್ನ, ಮಹಿಳೆಯರ ಮೇಲೆ ದೌರ್ಜನ್ಯ ಮತ್ತಿತರ ಗಂಭೀರ ಪ್ರಕಾರದ ಕ್ರಿಮಿನಲ್ ಕೇಸ್‍ಗಳು ದಾಖಲಾಗಿವೆ.

Facebook Comments