ಸೋನಿಯಾ ಕ್ಷೇತ್ರ ರಾಯ್‍ಬರೇಲಿಗೆ ನಾಳೆ ಮೋದಿ ಭೇಟಿ

ಈ ಸುದ್ದಿಯನ್ನು ಶೇರ್ ಮಾಡಿ

Modi--011ಲಖ್ನೋ,ಡಿ.15(ಪಿಟಿಐ)- ಸೋನಿಯಾ ಗಾಂಧಿ ಪ್ರತಿನಿಧಿಸುವ ಉತ್ತರ ಪ್ರದೇಶದ ರಾಯ್ ಬರೇಲಿಗೆ ಪ್ರಧಾನಿ ನರೇಂದ್ರ ಮೋದಿ ನಾಳೆ ಭೇಟಿ ನೀಡಲಿದ್ದಾರೆ.
ರಾಯ್‍ಬರೇಲಿಗೆ ಭೇಟಿ ನೀಡಲಿರುವ ಪ್ರಧಾನಿಯವರು ಹಂಸಪರ್ ಎಕ್ಸ್‍ಪ್ರೆಸ್ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಲಿದ್ದು, ರೈಲ್ವೆ ತರಬೇತು ಕಾರ್ಖಾನೆಯನ್ನು ಪರಿಶೀಲಿಸಿ ಬಳಿಕ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಸಚಿವ ನಂದ ಗೋಪಾಲ್ ನಂದಿ ತಿಳಿಸಿದ್ದಾರೆ.
ನಂತರ 1,100 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೂ ಪ್ರಧಾನಿಗಳು ಇದೇ ಸಂದರ್ಭದಲ್ಲಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಹೇಳಿದ್ದಾರೆ.

ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ನಾಳಿನ ಕಾರ್ಯಕ್ರಮದ ಬಗ್ಗೆ ಎಲ್ಲಾ ಸಿದ್ದತೆಗಳನ್ನುಕೈಗೊಳ್ಳಲಾಗಿದ್ದು, ತಾವು ಸೇರಿದಂತೆ ಸಚಿವ ಮಹೇಂದ್ರಸಿಂಗ್ ಸ್ಥಳದಲ್ಲಿದ್ದು, ಪಕ್ಷದ ಕಾರ್ಯಕರ್ತರೊಂದಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಅಧಿಕಾರಕ್ಕೆ ಬಂದ 4 ವರ್ಷಗಳ ನಂತರ ಪ್ರಧಾನಿ ನರೇಂದ್ರ ರಾಯಬರೇಲಿ ಭೇಟಿ ನೀಡುತ್ತಿರುವುದು ಚುನಾವಣಾ ಉದ್ದೇಶಕ್ಕಾಗಿ ಮಾತ್ರ. ಯಾವುದೇ ಅಭಿವೃದ್ದಿ ದೃಷ್ಟಿಯಿಂದಲ್ಲ ಎಂದು ಕಾಂಗ್ರೆಸ್ ಮುಖಂಡರು ಟೀಕಿಸಿದ್ದಾರೆ.

ರಾಯಬರೇಲಿ ಮತ್ತು ಅಮೇತಿ ಜನರು ಕಾಂಗ್ರೆಸ್ ಪಕ್ಷವನ್ನು ತಮ್ಮ ಕುಟುಂಬದವರಂತೆ ಕಾಣುತ್ತಾರೆ. ಬಿಜೆಪಿ ಎಂದಿಗೂ ಈ ಎರಡೂ ಕ್ಷೇತ್ರಗಳಿಂದ ಗೆಲ್ಲಲು ಸಾಧ್ಯವಿಲ್ಲ. ಪ್ರಧಾನಿ ಮೋದಿಯವರು ವಾರಣಸಿ ಕಡೆ ಹೆಚ್ಚು ಗಮನಹರಿಸುವುದು ಲೇಸು ಎಂದು ಕಾಂಗ್ರೆಸ್ ವ್ಯಕ್ತಾರ ಝಿಶಾನ್ ಹೈದರ್ ವ್ಯಂಗ್ಯವಾಡಿದ್ದಾರೆ.
ಮುಂದಿನ ಲೋಕಸಭಾ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸಿರುವ ಬಿಜೆಪಿ, ಎಐಸಿಸಿ ಸೋನಿಯಾ ಗಾಂಧಿ ಅವರು ಪ್ರತಿನಿಧಿಸುವ ಉತ್ತರ ಪ್ರದೇಶದ ರಾಯ್ ಬರೇಲಿಯಿಂದಲೇ ಬಿಜೆಪಿ ತನ್ನ ಕಾರ್ಯತಂತ್ರ ರೂಪಿಸಲು ಮುಂದಾಗಿದೆ.

Facebook Comments