ಪಶ್ಚಿಮ ಬಂಗಾಳದಲ್ಲೂ ಉ.ಪ್ರ. ಮಾದರಿ ಎನ್‍ಕೌಂಟರ್: ಬಿಜೆಪಿ ನಾಯಕಿ

ಈ ಸುದ್ದಿಯನ್ನು ಶೇರ್ ಮಾಡಿ

Encounterಕೋಲ್ಕತ್ತಾ, ಡಿ.15- ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಶೈಲಿಯಲ್ಲಿ ಎನ್‍ಕೌಂಟರ್‍ಗೆ ಆದೇಶಿಸಲಾಗುವುದು ಎಂದು ಬಿಜೆಪಿ ಉಪಾಧ್ಯಕ್ಷೆ ರಾಜಕುಮಾರಿ ಕೇಶರಿ ಹೇಳಿದ್ದಾರೆ.

ಬುದ್ರ್ವಾನ್ ಜಿಲ್ಲಾಯಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ಅವರು, ಎನ್‍ಕೌಂಟರ್ ಮಾಡಬೇಕಾದ ವ್ಯಕ್ತಿಗಳ ಪಟ್ಟಿ ಸಿದ್ಧಪಡಿಸುವಂತೆ ಕೇಂದ್ರ ನಾಯಕರುಗಳು ರಾಜ್ಯ ನಾಯಕರಿಗೆ ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ. ಇನ್ನು ರಾಜಕುಮಾರಿ ಕೇಶರಿ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಗೂಂಡಾ ರಾಜ್ಯ ನಿರ್ಮೂಲನೆ ಮಾಡಲು ಇರುವ ಒಂದೇ ದಾರಿ ಎನ್‍ಕೌಂಟರ್ ಆಗಿದೆ. ಹೀಗಾಗಿ ಕೇಸರಿ ಈ ರೀತಿ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.

Facebook Comments