ಬಂಗರದೊಡ್ಡಿ ಕಾಲುವೆಯಲ್ಲಿ ಮೊಸಳೆ ಶವ ಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

crocಮಂಡ್ಯ, ಡಿ.16-ಶ್ರೀರಂಗಪಟ್ಟಣ ತಾಲ್ಲೂಕಿನ ಬಂಗಾರದೊಡ್ಡಿ ಕಾಲುವೆಯಲ್ಲಿ ಮೊಸಳೆ ಶವ ತೇಲಿಬಂದಿದೆ. ಕೆಆರ್‍ಎಸ್‍ನಿಂದ ವಿಸಿ ನಾಲೆ ಮೂಲಕ ಉಪನಾಲೆಗಳಿಗೆ ನೀರು ಹರಿದು ಬರುವಾಗ ಬಂಗಾರದೊಡ್ಡಿ ಕಾಲುವೆಯಲ್ಲಿ ಮೊಸಳೆ ಶವ ತೇಲಿಬಂದಿದೆ ಎಂದು ಹೇಳಲಾಗುತ್ತಿದೆ.

ಇಂದು ಬೆಳಗ್ಗೆ ಕಾಲುವೆಯಲ್ಲಿ ಮೊಸಳೆ ಶವ ಕಂಡ ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಕಾಲುವೆಯಲ್ಲಿ ಇನ್ನೂ ಹಲವು ಮೊಸಳೆಗಳು ಇರಬಹುದೆಂಬ ಅನುಮಾನ ಗ್ರಾಮಸ್ಥರಲ್ಲಿ ವ್ಯಕ್ತವಾಗಿದ್ದು, ಕಾಲುವೆಯಲ್ಲಿ ಪಾತ್ರೆ ಹಾಗೂ ಬಟ್ಟೆ ತೊಳೆಯಲು ಹೋಗುತ್ತಿದ್ದ ಮಹಿಳೆಯರು ಭಯಭೀತರಾಗಿದ್ದಾರೆ.
ಅಲ್ಲದೆ ಈ ಕಾಲುವೆಯಲ್ಲಿ ಈಜಾಡಲು ಹೋಗುತ್ತಿದ್ದ ಯುವಕರು ಇದೀಗ ನೀರಿನಲ್ಲಿ ಕಾಲಿಡಲು ಹೆದರುತ್ತಿದ್ದಾರೆ.ಕಾಲುವೆಯಲ್ಲಿ ಮೊಸಳೆ ಇರುವುದನ್ನು ಕಂಡು ಗ್ರಾಮಸ್ಥರೆಲ್ಲ ಕಾಲುವೆ ಬಳಿ ಜಮಾಯಿಸಿದ್ದರು. ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಮೊಸಳೆ ಶವವನ್ನು ಮೇಲೆತ್ತಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments