ಪಾಕ್‍ನ 15 ಭಯೋತ್ಪಾದಕರಿಗೆ ಮರಣ ದಂಡನೆ

ಈ ಸುದ್ದಿಯನ್ನು ಶೇರ್ ಮಾಡಿ

pasಇಸ್ಲಾಮಾಬಾದ್(ಪಿಟಿಐ),ಡಿ.16-ಪಾಕಿಸ್ತಾನದ ಪೇಶಾವಾರದ ಕ್ರಿಶ್ಚಿಯನ್ ಕಾಲೋನಿಯಲ್ಲಿ ನಡೆದ ಮಾರಣಹೋಮದ ರೂವಾರಿಗಳಾದ 15ಕ್ಕೂ ಹೆಚ್ಚು ಭಯೋತ್ಪಾದಕರಿಗೆ ಮರಣದಂಡನೆ ವಿಧಿಸಲಾಗಿದೆ.
2016ರಲ್ಲಿ ನಡÉದ ಈ ದಾಳಿಯಲ್ಲಿ ಹಲವಾರು ಅಮಾಯಕರು ಪ್ರಾಣ ಕಳೆದುಕೊಂಡಿದ್ದರು. ಈ ದಾಳಿಯ ಪ್ರಮುಖ ರೂವಾರಿಗಳಾಗಿದ್ದ 15 ಭಯೋತ್ಪಾದಕರಿಗೆ ಮರಣ ದಂಡನೆ ವಿಧಿಸಿರುವುದನ್ನು ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಕ್ವುಮರ್ ಜಾವೇದ್ ಬಾಜ್ವ ಸ್ಪಷ್ಟಪಡಿಸಿದ್ದಾರೆ.
ಮಿಲಿಟರಿ ಸೇನಾನೆಲೆ ಸಮೀಪವೇ ಇದ್ದ ಕ್ರಿಶ್ಚಿಯನ್ ಕಾಲೋನಿ ಮೇಲೆ ನಡೆದ ದಾಳಿಯ ಹೊಣೆಯನ್ನು ಜಮಾತ್ ಉರ್ ಅಹ್ರಾರ್ ತಾಲಿಬಾನ್ ಸಂಘಟನೆಗಳು ಹೊಣೆ ಹೊತ್ತಿತ್ತು.

Facebook Comments