ವ್ಯಕ್ತಿ ಸೆರೆ:40 ಕೆಜಿ ಶ್ರೀಗಂಧ ವಶ

ಈ ಸುದ್ದಿಯನ್ನು ಶೇರ್ ಮಾಡಿ

belorಬೇಲೂರು, ಡಿ.16- ಶ್ರೀಗಂಧದ ಮರಗಳನ್ನು ಕಡಿಯುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿಗಳ ತಂಡ 40 ಕೆಜಿ ಶ್ರೀಗಂಧದೊಂದಿಗೆ ಬೈಕ್ ಸಮೇತ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಘಟನೆ ನಡೆದಿದೆ. ಬೇಲೂರು ಪ್ರಾದೇಶಿಕ ವಲಯದ ರಾಮಚಂದ್ರಪುರದ ನಿಂಗೇಗೌಡ ಹಾಗೂ ಸಿದ್ದೇಗೌಡ ಎಂಬುವವರ ಜಮೀನಿನಲ್ಲಿ 8 ವರ್ಷದ ಎರಡು ಶ್ರೀಗಂಧದ ಮರಗಳನ್ನು ಕಡಿಯುತ್ತಿರುವ ಬಗ್ಗೆ ಗ್ರಾಮಸ್ಥರಿಂದ ಖಚಿತ ಮಾಹಿತಿ ಬಂದಿದೆ.

ಈ ಹಿನ್ನೆಲೆಯಲ್ಲಿ ವಲಯ ಅರಣ್ಯಾಧಿಕಾರಿ ಮರಿಸ್ವಾಮಿ ಹಾಗೂ ಸಿಬ್ಬಂದಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಶ್ರೀಗಂಧದ ಮರಗಳನ್ನು ಕಡಿಯುತಿದ್ದ ನಾಲ್ಕು ಜನರನ್ನು ಹಿಡಿಯಲೆತ್ನಿಸಿದಾಗ ಕಳ್ಳರು, ಮರ ಕಡಿಯಲು ತಂದಿದ್ದ ಗರಗಸ ಹಾಗೂ ಬೈಕನ್ನು ಸ್ಥಳದಲ್ಲೆ ಬಿಟ್ಟು ಪರಾರಿಯಾಗಿದ್ದರು.
ಆದರೆ ಸ್ಥಳದಲ್ಲಿ ಬಿಟ್ಟು ಹೋಗಿದ್ದ ಬೈಕ್‍ನ ಮಾಹಿತಿ ಪಡೆಯಲು ಹಳೇಬೀಡು ಪೊಲೀಸ್ ಠಾಣೆಗೆ ಹೋದ ಸಂದರ್ಭ, ಶ್ರೀಗಂಧ ಕಳ್ಳತನದ ಆರೋಪಿಗಳಲ್ಲಿ ಒಬ್ಬನಾದ ಕ್ಯಾತನೆಕೆರೆ ಗ್ರಾಮದ ಶೇಖರ್ ಬೈಕ್ ಕಳುವಾಗಿದೆ ಎಂದು ಹಳೇಬೀಡು ಪೊಲಿಸ್ ಠಾಣೆಗೆ ದೂರು ನೀಡಲು ಬಂದ ಸಂದರ್ಭ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂದನಕ್ಕೆ ಒಪ್ಪಿಸಲಾಗಿದೆ.

Facebook Comments