ಪ್ರಸಾದಕ್ಕೆ ವಿಷ – ಜಂಟಿ ಪೊಲೀಸರ ಕಾರ್ಯಚರಣೆ ಸ್ಪೊಟಕ ಮಾಹಿತಿ

ಈ ಸುದ್ದಿಯನ್ನು ಶೇರ್ ಮಾಡಿ

hanurಹನೂರು :- ಸುಳ್ವಾಡಿ ಗ್ರಾಮದ ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನ ಪ್ರಸಾದಕ್ಕೆ ವಿಷ ಪಾಸಣವಿಟ್ಟು 12 ಮಂದಿ ಅಮಾಯಕರ ಜೀವಕ್ಕೆ ಸಂಚಾಕಾರ ತಂದಿಟ್ಟು ಕುಟುಂಬಸ್ಥರನ್ನು ದುಃಖದ ಮಡುವಿಗೆ ದೂಡಿರುವ ಕಿರಾತಕ ಅಪರಾಧಿಗಳ ಬೆನ್ನು ಬಿದ್ದಿರುವ ಮೈಸುರು ಮತ್ತು ಚಾಮರಾಜನಗರ ಜಿಲ್ಲಾ ಪೆÇಲೀಸರ ಜಂಟಿ ಕಾರ್ಯಚರಣೆ ಚುರುಕುಗೊಂಡಿದ್ದು, ದೇವಸ್ಥಾನ ಆಡಳಿತ ಮಂಡಳಿ ಮತ್ತು ಟ್ರಸ್ಟಿಗಳು ಹಾಗೂ ಸಮೀಪ ಇರುವ ಬ್ರಹ್ಮೇಶ್ವರಿ ದೇವಸ್ಥಾನ ಅರ್ಚಕ ತಮಿಳುನಾಡು ಮೂಲದ ಬರಗೂರು ಗ್ರಾಮದ ವ್ಯಕ್ತಿಯೊಬ್ಬನಿಗಾಗಿ ಪೆÇಲೀಸರ ಶೋಧ ಕಾರ್ಯಚರಣೆ ತೀವ್ರಗೊಂಡಿದೆ.
ಮೈಸೂರು ದಕ್ಷಿಣ ವಲಯ ಐಜಿಪಿ ಶರತ್‍ಚಂದ್ರ ಹಾಗೂ ಚಾಮರಾಜನಗರ ವರಿಷ್ಠಾಧಿಕಾರಿ ಧರ್ಮೇಂದ್ರಕುಮಾರ್ ಮೀನಾ ನೇತೃತ್ವದ ತನಿಖೆ ತಂಡ ನೆನ್ನೆ ಘಟನಾಸ್ಥಳವಾದ ಸುಳ್ವಾಡಿ ಗ್ರಾಮದ ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನಕ್ಕೆ ಬೇಟಿ ನೀಡಿ ಪರಿಶೀಲನೆ ಕಾರ್ಯ ತುರ್ತಾಗಿ ಜರುಗಿತ್ತು. ಆಹಾರ ದಾಸ್ತಾನು ಮಾಳಿಗೆ, ಆಡುಗೆ ಮನೆ ಕೊಠಡಿ ಸೇರಿದಂತೆ ದೇವಸ್ಥಾನದ ಹಾಸು ಪಾಸುಗಳನ್ನು ಪರಿಶೀಲಿಸಿ ಪಕ್ಷಿಗಳ ಕಳೆಬರಹ ಸೇರಿದಂತೆ ಕೆಲವೊಂದು ಆಹಾರ ಪಧಾರ್ಥ ವಸ್ತುಗಳು ಮತ್ತು ಸಾರ್ವಜನಿಕ ಮಾಹಿತಿ ಸಂಗ್ರಹಿಸಿ ಗೌಪ್ಯತೆ ಹಾಗೂ ಮಿಂಚಿನ ತನಿಖೆ ಮುಂದುವರಿದಿದೆ.
ದೇವಸ್ಥಾನ ಆಡಳಿತ ಮಂಡಳಿ ಮತ್ತು ಟ್ರಸ್ಟಿ ಸದಸ್ಯರ ವೈಮನಸ್ಸಿನಿಂದಾಗಿ ಇಂತಹ ಹೇಯಾ ಕೃತ್ಯ ನಡೆದಿದೆ ಎಂಬ ಅಂಶ ಬೆಳಕಿಗೆ ಬಂದಿದ್ದು, ಅನೈತಿಕ ಸಂಬಂಧದ ಹೊಗೆಯ ಸುಳಿವು ಸಹ ಪೆÇಲೀಸರಿಗೆ ದೊರೆತಿದೆ. ಭಕ್ತಾದಿಗಳ ಹರಕೆ ಕಾಣಿಕೆ ಯಿಂದ ದೇವಸ್ಥಾನಕ್ಕೆ ಸುಮಾರು 90 ಲಕ್ಷ ರೂ. ಹಣ ಶೇಖರಣೆಯಾಗಿದ್ದು, ಅದನ್ನು ಹೇಗಾದರೂ ಮಾಡಿ ಖರ್ಚಿನ ರೂಪದಲ್ಲಿ ಹೊಡೆಯಬೇಕು. ಎಂಬ ವಿಚಾರ ಒಂದೆಡೆ ಮತ್ತೊಂದು ಹಿಂದೆ ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನ ಪೂಜೆ ಮಾಡುತ್ತಿದ್ದ ಎನ್ನಲಾದ ತಮಿಳುನಾಡು ಮೂಲದ ಬರಗೂರು ಗ್ರಾಮದ ವ್ಯಕ್ತಿ ಹಾಲಿ ಬ್ರಹ್ಮೇಶ್ವರಿ ದೇವಸ್ಥಾನ ಅರ್ಚಕನ ಕೈವಾಡ ಕೃತ್ಯೆಗೆ ಕಾರಣ ಎಂದು ಟ್ರಸ್ಟಿಗಳು ಸುಳಿವು ನೀಡುತ್ತಿದ್ದಾರೆ.
ಈಗಾಗಲೇ ಪೆÇಲೀಸರು ವಶಕ್ಕೆ ಪಡೆದಿರುವ ಟ್ರಸ್ಟಿ ಚಿನ್ನಪ್ಪಿ ಆಡಳಿತ ಮಂಡಳಿ ಲೆಕ್ಕಾಧಿಕಾರಿ ಮಾದೇಶ ನಡುವೆ ಭಿನ್ನಾಭಿಪ್ರಾಯವು ಕಾರಣ ಎಂದು ಶಂಕಿಸಲಾಗಿದೆ. ಅಧ್ಯಕ್ಷರು, ಉಪಾದ್ಯಕ್ಷರು, ಕಾರ್ಯದರ್ಶಿ, ಖಜÁಂಚಿ ಸೇರಿಂದತೆ 05 ಮಂದಿ ಸೇವಾ ಟ್ರಸ್ಟಿಗಳಿದ್ದು ಎಲ್ಲರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ. ಆಗಾಗಿ ಹನೂರಿನ ಟ್ರಸ್ಟಿಯೊಬ್ಬರು ಘಟನೆ ದಿನದಿಂದ ಅನುಮಾನಾಸ್ಪದವಾಗಿ ಕಾಣೆಯಾಗಿರುವುದು ಸಾರ್ವಜನಿಕ ವಲಯದಲ್ಲಿ ಚೆರ್ಚೆಗೆ ಗ್ರಾಸ್ತವಾಗಿದೆ. ಹಾಗೆಯೇ ಅಡುಗೆ ಮಾಡಿದ ಭಟ್ಟರು ಮತ್ತು ಮಗಳು ಪ್ರಸಾದ ಸೇವಿಸಿ ಮಗಳು ಮೃತ ಪಟ್ಟಿದ್ದು, ಭಟ್ಟರು ಅಸ್ವಸ್ಥಗೊಂಡು ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪೆÇಲೀಸರು ನನ್ನನ್ನು ಅನುಮಾನಿಸುತ್ತಿದಾರೆ. ನಾನು ವಿಷ ಹಾಕಿದ್ದರೆ ನಾನೇಕೆ ತಿನ್ನುತ್ತಿದೆ ನನ್ನ ಮಗಳಿಗೇಕೆ ತಿನಿಸುತ್ತಿದೆ ನನ್ನ ಮಗಳೆ ಸಾವನ್ನಾಪ್ಪಿದ್ದಾಳೆಂದು ಗೋಳಾಡುತ್ತಿದ್ದಾನೆ ವರತ್ತು ಆತನ ಜೊತೆ ಮತ್ತಿಬ್ಬರು ಅಡುಗೆ ಭಟ್ಟರು ಸಹಾಯಕೆ ಇದ್ದ ವಿಚಾರವನ್ನು ಆತ ಬಾಯ್ಬಿಡ್ತೆ ಇರುವುದು ಅಲವು ಅನುಮಾನಗಳಿಗೆ ಎಡಮಾಡಿಕೊಟ್ಟಿದ್ದು ತನಿಖೆಯಿಂದಾಷ್ಟೇ ಹೊರಬರಬೇಕಾಗಿದೆ.
ಚಿತ್ರ ಇದೆ.

Facebook Comments